ಪುತ್ತೂರು : ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕು ಕೊಯಿಲ ಗ್ರಾಮದ ಕಲಾಯಿ ನಿವಾಸಿಯಾಗಿದ್ದು ಪ್ರಸ್ತುತ ಮಂಜೇಶ್ವರ ಉಪ್ಪಳ ಗ್ರಾಮದ ಕೈಕಂಬ ಜಂಕ್ಷನ್ ಇಂಡಿಯನ್ ಗ್ಯಾರೇಜ್ ಬಳಿ ವಾಸವಿರುವ ಇಬ್ರಾಹಿಂ ಖಲಂದರ್ ಯಾನೆ ಇಬ್ರಾಹಿಂ ಬಂಧಿತ ಆರೋಪಿ. ಜ.19ರಂದು ಕಾಸರಗೋಡು ವಿದ್ಯಾನಗರದಲ್ಲಿ ಆರೋಪಿಯನ್ನು ಬಂಧಿಸಿದ್ದು, ಫೆ. 2ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಆರೋಪಿ ವಿರುದ್ಧ ಪುತ್ತೂರು ನಗರ, ಉಪ್ಪಿನಂಗಡಿ, ಕಡಬ, ಮೂಡುಬಿದಿರೆ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಸದ್ಯದಲ್ಲೇ ಈ ದೇಶದಲ್ಲಿ ವೆರ್ವೆಟ್ ಕೋತಿಗಳ ವಂಶವೇ ನಿರ್ವಂಶವಾಗಲಿದೆಯಂತೆ… ಕಾರಣ ಇಲ್ಲಿದೆ