Advertisement

Puttur: ಮುಖ್ಯ ರಸ್ತೆಯ ಚರಂಡಿ ಮೇಲಿನ ಪೈಪ್‌ನಲ್ಲಿ ಸಿಲುಕಿದ ಮಹಿಳೆ!

01:23 AM Dec 31, 2024 | Team Udayavani |

ಪುತ್ತೂರು: ಇಲ್ಲಿನ ಮುಖ್ಯರಸ್ತೆ ಬದಿಯ ಚರಂಡಿಯ ಮೇಲ್ಭಾಗದಲ್ಲಿ ಹಾಕಲಾಗಿದ್ದ ಪೈಪ್‌ನಲ್ಲಿ ಮಹಿಳೆಯ ಕಾಲು ಸಿಲುಕಿದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

Advertisement

ಪುತ್ತೂರು ನಗರದ ಹೂವಿನ ಮಾರುಕಟ್ಟೆ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಮುಖ್ಯರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್‌ಲೈನ್‌ ಹಾಕಲಾಗಿತ್ತು. ಇದು ಕೆಲವು ಸಮಯಗಳಿಂದ ತುಂಡಾಗಿದ್ದು, ಸಂಬಂಧಪಟ್ಟವರನ್ನು ಎಚ್ಚರಿಸುವ ಪ್ರಯತ್ನ ನಡೆಸಲಾಗಿತ್ತು. ಆದರೂ ನಗರಾಡಳಿತ ಎಚ್ಚೆತ್ತುಕೊಂಡಿರಲಿಲ್ಲ. ಸೋಮವಾರ ಸಂಜೆ ಪುತ್ತೂರಿಗೆ ಆಗಮಿಸಿದ್ದ ಮಹಿಳೆ ಪೈಪ್‌ಲೈನೊಳಗಡೆ ಕಾಲಿಟ್ಟಿದ್ದಾರೆ. ಕಾಲು ಪೈಪ್‌ನಲ್ಲಿ ಸಿಲುಕಿದ್ದನ್ನು ಸ್ಥಳೀಯರು ಗಮನಿಸಿ ತತ್‌ಕ್ಷಣವೇ ಪೈಪ್‌ಲೈನ್‌ ಅನ್ನು ಕತ್ತರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next