Advertisement

ಪುತ್ತೂರು: 30ನೇ ವರ್ಷದ ಕೋಟಿ-ಚೆನ್ನಯ ಹೊನಲು ಬೆಳಕಿನ ಕಂಬಳ

03:02 PM Jan 30, 2023 | Team Udayavani |

ಪುತ್ತೂರು: ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಅಂಗವಾಗಿ ಸಂಜೆ ಸಭಾ ಕಾರ್ಯಕ್ರಮ ನಡೆಯಿತು.

Advertisement

ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸಹಕಾರ ರತ್ನ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಂಬಳ ಕೂಟಕ್ಕೆ ಸೆನ್ಸಾರ್‌ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಡಾ| ರಾಜೇಂದ್ರ ಕುಮಾರ್‌ ಅವರನ್ನು ಗೌರವಿಸಲಾಯಿತು.

ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ದಿ| ಜಯಂತ್‌ ರೈ ಅವರಿಂದ ತೊಡಗಿ ದಿ| ಮುತ್ತಪ್ಪ ರೈ ಅವರ ಕಾಲದಲ್ಲೂ ಕಂಬಳ ಯಶಸ್ವಿಯಾಗಿ ನಡೆದಿದೆ. ಕಾಂತಾರ ಚಿತ್ರದ ಮೂಲಕ ನಮ್ಮ ಕಲೆ, ಸಂಸ್ಕೃತಿ, ಕಂಬಳ ಕ್ರೀಡೆ ಜಗತ್ತಿಗೆ ಆಕರ್ಷಣೆಯಾಗುವ ಕೆಲಸ ಮಾಡಿದೆ ಎಂದರು.

ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಬೆಳಪು, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌, ಕಂಬಳ ಸಮಿತಿ ಮಾರ್ಗದರ್ಶಕಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕಂಬಳ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಉದ್ಯಮಿ ಅಶೋಕ್‌ ಕುಮಾರ್‌, ರೈ, ಹಿರಿಯ ದೈವಾರಾಧಕ ತಮ್ಮಣ್ಣ ಶೆಟ್ಟಿ ಶುಭ ಹಾರೈಸಿದರು.

ಚಲನಚಿತ್ರ ನಟ – ನಟಿಯರು ಭಾಗಿ
ವಿಶೇಷ ಆಕರ್ಷಣೆಯಾಗಿ ಚಲನಚಿತ್ರ ನಟರಾದ ಅನೂಪ್‌ ಭಂಡಾರಿ, ದೀಪಕ್‌ ರೈ ಪಾಣಾಜೆ, ಪ್ರಕಾಶ್‌ ತುಮಿನಾಡು, ಉಗ್ರಂ ಮಂಜು, ವಜ್ರಧೀರ್‌ ಜೈನ್‌, ನಟಿಯರಾದ ಸಂಗೀತಾ ಶೃಂಗೇರಿ, ಸಾನಿಯಾ ಅಯ್ಯರ್‌ ಮೊದಲಾದವರಿದ್ದರು.

Advertisement

ವೇದಿಕೆಯಲ್ಲಿ ಇಂಟಕ್‌ ಕಾರ್ಯದರ್ಶಿ ರಾಕೇಶ್‌ ಮಲ್ಲಿ, ವಿಧಾನಪರಿಷತ್‌ ಮಾಜಿ ಸದಸ್ಯ ಐವನ್‌ ಡಿ’ಸೋಜಾ, ಉದ್ಯಮಿ ಡಾ| ರವಿ ಶೆಟ್ಟಿ ಮೂಡಂಬೈಲು, ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್‌ ಬಾಲ್ಕೊಟ್ಟು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಾಜಾರಾಮ್‌ ಕೆ.ಬಿ., ನಗರ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಮಹಮ್ಮದಾಲಿ, ಉದ್ಯಮಿ ಉಮೇಶ್‌ ನಾಡಾಜೆ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು,
ಎಪಿಎಂಸಿ ಮಾಜಿ ನಿರ್ದೇಶಕ ಶಕೂರ್‌ ಹಾಜಿ, ಡಾ| ರಘು ಬೆಳ್ಳಿಪ್ಪಾಡಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ
ಕಾರ್ಯಕ್ರಮದಲ್ಲಿ ಪುತ್ತೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ಕಂಬಳದ ಕ್ಷೇತ್ರದ ಅಪ್ಪು ಯಾನೆ ವಲೇರಿಯನ್‌ ಡೇಸಾ ಅಲ್ಲಿಪಾದೆ, ಕ್ರೀಡಾ ಕ್ಷೇತ್ರದ ಆಕಾಶ್‌ ಐತಾಳ್‌, ಹಿರಿಯ ಕಂಬಳ ಓಟಗಾರ ಸತೀಶ್‌ ದೇವಾಡಿಗ ಅಳದಂಗಡಿ, ಕ್ರೀಡಾರತ್ನ ಪುರಸ್ಕೃತ ಶ್ರೀಧರ್‌ ಮಾರೋಡಿ, ಬ್ಯಾಂಕ್‌ ಆಫ್ ಬರೋಡಾದ ಜನರಲ್‌ ಮ್ಯಾನೇಜರ್‌ ರವೀಂದ್ರ ರೈ ಅವರನ್ನು ಸಮ್ಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತ ಮಿಂಚಿನ ಓಟದ ಕೋಣ ಚೆನ್ನನಿಗೂ ಸಮ್ಮಾನ ನೆರವೇರಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next