Advertisement

ಕಂಟೈನ್ಮೆಂಟ್‌ ಝೋನ್‌ ವ್ಯಾಪ್ತಿಗೆ ಪುಟ್ಟೇನಹಳ್ಳಿ

04:17 AM May 24, 2020 | Lakshmi GovindaRaj |

ಬೆಂಗಳೂರು: ತಮಿಳುನಾಡಿನಿಂದ ಹಿಂದಿರುಗಿದ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವ್ಯಾಪ್ತಿಯ ಪುಟ್ಟೇನಹಳ್ಳಿಯನ್ನು ಕಂಟೈನ್ಮೆಂಟ್‌ ಝೋನ್‌ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು  ಬಿಬಿಎಂಪಿ ವಿಶೇಷ ಆಯುಕ್ತ ಅನ್ಬುಕುಮಾರ್‌ ತಿಳಿಸಿದರು. ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದರು.

Advertisement

ಪುಟ್ಟೇನಹಳ್ಳಿಯ ಬ್ರಿಗೇಡ್‌ ಮಿಲೇನಿಯಂ ವಸತಿ ಸಮುತ್ಛಯದಲ್ಲಿದ್ದ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು (ರೋಗಿ ಸಂಖ್ಯೆ- 1930)  ದೃಢಪಟ್ಟಿದೆ. ಇತ್ತೀಚೆಗೆ ಅವರು ಬೈಪಾಸ್‌ ಸರ್ಜರಿಗೆ ಒಳಗಾಗಿದ್ದು, ಇವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಪತ್ನಿ, ಮಗ ಹಾಗೂ ಮಗಳು ಸೇರಿ ಮೂವರನ್ನು ಕ್ವಾರಂಟೈನ್‌ ಮಾಡಲಾಗಿದೆ.  ಸೋಂಕು ದೃಢಪಟ್ಟವರು ನೆಲೆಸಿದ್ದ ವಸತಿ ಸಮುತ್ಛಯದ ಮನೆಯ ಮೇಲ್ಭಾಗದಲ್ಲಿ ಹಾಗೂ ಕೆಳಭಾಗದಲ್ಲಿ ಇದ್ದವರನ್ನು ಕಡ್ಡಾಯ 14 ದಿನ ಕ್ವಾರಂಟೈನ್‌ ನಲ್ಲಿ ಇರಲು ಸೂಚನೆ ನೀಡಲಾಗಿದೆ.

ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಿಪಿಇ  ಕಿಟ್‌ ನೀಡಲು ವಸತಿ ಸಮುತ್ಛಯ ನಿರ್ವಾಹಕರಿಗೆ ನಿರ್ದೇಶನ ನೀಡಲಾಗಿದೆ. ಸೋಂಕು ದೃಢಪಟ್ಟ ಕುಟುಂಬದವರು ಎಲ್ಲರೂ ಕ್ವಾರಂಟೈನ್‌ನಲ್ಲೇ ಇದ್ದರು. ಆದರೂ, ಮುಂಜಾಗ್ರತೆಗಾಗಿ ಪುಟ್ಟೇನಹಳ್ಳಿಯನ್ನು ಕಂಟೈನ್ಮೆಂಟ್‌ ಮಾಡಲಾಗಿದೆ  ಎಂದು ಮಾಹಿತಿ ನೀಡಿದರು.

ಕಂಟೈನ್ಮೆಂಟ್‌ ಝೋನ್‌ಗಳ ಸಂಖ್ಯೆ 22ಕ್ಕೆ ಏರಿಕೆ:  ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತ್ತೆ ರಡು ವಾರ್ಡ್‌ಗಳಲ್ಲಿ ಶನಿವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಬಿಬಿಎಂಪಿ ಕಂಟೈನ್ಮೆಂಟ್‌ ಝೋನ್‌ಗಳ ಸಂಖ್ಯೆ 22ಕ್ಕೆ ಏರಿಕೆಯಾದಂತಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next