Advertisement

‘ಕೈ ಜಾರಿದ’ ಅಕ್ಕ-ತಂಗಿಯ ‘ಪ್ರೀತಿ’!

01:26 PM May 31, 2022 | Team Udayavani |

ಚಿತ್ರರಂಗದಲ್ಲಿ ಪ್ರೀತಿ ಪ್ರೇಮಗಳ ಕುರಿತ ಸಿನಿಮಾಗಳು ಸಾಕಷ್ಟು ಬಂದಿವೆ. ಇಲ್ಲೊಂದು ಚಿತ್ರ ಪ್ರೀತಿಯ ಕುರಿತಂತೆ ಅರ್ಥಪೂರ್ಣ ಸಂದೇಶ ಸಾರಲು ಸಜ್ಜಾಗಿದೆ. “ಚೈತ್ರಾ ಮೂವೀಸ್‌ ಬ್ಯಾನರ್‌ ‘ ಅಡಿಯಲ್ಲಿ ತಯಾರಾದ “ಕೈ ಜಾರಿದ ಪ್ರೀತಿ’ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.

Advertisement

ಈ ಹಿಂದೆ “ನಾವೆಲ್ಲರೂ ಭಾರತೀಯರು’ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದ, ಪುಷ್ಪ ಭದ್ರಾವತಿ ಎರಡನೇ ಬಾರಿ ನಿರ್ಮಾಣ ಮಾಡಿ, ನಿರ್ದೇಶನ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಚಿತ್ರದಲ್ಲಿ ಪುಷ್ಪ ಭದ್ರಾವತಿ ಮಗಳು ಮಂಜುಶ್ರೀ ಶೆಟ್ಟಿ.ಕೆ.ಆರ್‌ ನಾಯಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದು, ತಂಗಿ ಮಧು ಶೆಟ್ಟಿ. ಕೆ.ಆರ್‌ ಉಪ ನಾಯಕಿಯಾಗಿ ನಿರ್ವಹಿಸಿದ್ದಾರೆ.

ಸದ್ದಿಲ್ಲದೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣವನ್ನು ಮುಗಿಸಿ ಐದು ಹಾಡುಗಳನ್ನು ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಸದರಿ ಗೀತೆಯನ್ನು ಮಲೆನಾಡು ಭಾಗದಲ್ಲಿ ಸೆರೆ ಹಿಡಿಯಲು ತಯಾರಿ ಮಾಡಿಕೊಂಡಿದೆ.

ಚಿತ್ರದಲ್ಲಿ ಚೇತನ ಕೃಷ್ಣ ಮತ್ತು ಸನತ್‌ ನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸಿಪಿಯಾಗಿ ಹಿರಿಯ ನಟ ಸುಮನ್‌, ಖಳನಾಗಿ ಡ್ಯಾನಿ ಕುಟ್ಟಪ್ಪ, ಕೋಟೆ ಪ್ರಭಾಕರ್‌, ಭುವನ್‌ ಗೌಡ ಉಳಿದಂತೆ ನಾಗೇಂದ್ರ ಅರಸ್‌, ನಾರಾಯಣಸ್ವಾಮಿ, ಬಾಬುಹಿರಣಯ್ಯ ಅಭಿನಯಿಸಿದ್ದು, ಐಟಂ ಹಾಡಿಗೆ ಆಶಿತಾ ಹೆಜ್ಜೆ ಹಾಕಿದ್ದಾರೆ.

ಸಂಗೀತ ಸಂಯೋಜಕ ಗಂಧರ್ವ ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದು, ಆರ್‌.ಗಿರಿ ಛಾಯಾಗ್ರಹಣ, ಥ್ರಿಲ್ಲರ್‌ ಮಂಜು -ಕೌರವವೆಂಕಟೇಶ್‌ ಸಾಹಸ, ಗಿರಿ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ರಾಜೇಶ್‌ ಕೃಷ್ಣನ್‌, ಅನುರಾಧ ಭಟ್, ಸಂತೋಷ್‌ ವೆಂಕಿ, ಹೇಮಂತ್‌, ಚೈತ್ರಾ.ಹೆಚ್‌.ಜಿ ಮತ್ತು ಶ್ರೀರಾಮ್‌ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next