ಹೈದರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರ ʼಪುಷ್ಪ-2ʼ (Pushpa 2: The Rule) ಸಿನಿಮಾ ರಿಲೀಸ್‌ಗೆ ದಿನಗಣನೆ ಬಾಕಿ ಉಳಿದಿದೆ. ಬಿಗೆಸ್ಟ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ʼಪುಷ್ಪ-2ʼ ಇಂಡಿಯನ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆಯಿದೆ.
ಇತ್ತೀಚೆಗೆ ಟ್ರೇಲರ್, ಹಾಡಿನ ಮೂಲಕ ಸಖತ್ ಕ್ರೇಜ್ ಹುಟ್ಟಿಸಿರುವ ʼಪುಷ್ಪ-2ʼ ಥಿಯೇಟರ್‌ಗೆ ಅದ್ಧೂರಿಯಾಗಿಯೇ ಎಂಟ್ರಿ ಕೊಡಲಿದೆ. ಸಾವಿರಾರು ಥಿಯೇಟರ್‌ನಲ್ಲಿ 5 ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ.
ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಜೋಡಿ ʼಪುಷ್ಪʼ ದಂತೆ ಸೀಕ್ವೆಲ್‌ನಲ್ಲೂ ಕಮಾಲ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ʼಪುಷ್ಪ-2ʼ ಸಿನಿಮಾದ ರನ್ ಟೈಮ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಸಿನಿಮಾದ ಫಸ್ಟ್ ಹಾಫ್ 1 ಗಂಟೆ 40 ಇದ್ದು, ಸೆಕೆಂಡ್ ಹಾಪ್ 1 ಗಂಟೆ 41 ನಿಮಿಷಗಳು ಇರಲಿದೆ. ಒಟ್ಟಿನಲ್ಲಿ 3:21 ನಿಮಿಷಗಳ ಅವಧಿಯ ಸಿನಿಮಾ ʼಪುಷ್ಪ-2ʼ ಎಂದು ಹೇಳಲಾಗುತ್ತಿದೆ. ಮಾಸ್, ಕ್ಲಾಸ್ ಅಂಶಗಳಿದ್ದರೂ ಥಿಯೇಟರ್‌ನಲ್ಲಿ ಒಂದು ಸಿನಿಮಾಕ್ಕೆ ಪ್ರೇಕ್ಷಕರು ಮೂರುವರೆ ಗಂಟೆ ಕೂರಬೇಕಾಗುತ್ತದೆ. ಒಂದು ವೇಳೆ ಮೂರುವರೆ ಗಂಟೆಯಲ್ಲಿ ಸಿನಿಮಾ ಎಲ್ಲೋ ಒಂದು ಕಡೆ ಹಳಿತಪ್ಪಿ ಬೋರ್ ಎನ್ನಿಸಿದರೆ ಖಂಡಿತ ಅದರ ಪರಿಣಾಮ ಬಾಕ್ಸ್ ಆಫೀಸ್‌ನಲ್ಲಿ ಬೀಳುವ ಸಾಧ್ಯತೆಯಿರುತ್ತದೆ.
ಒಂದು ವೇಳೆ ʼಪುಷ್ಪ-2ʼ 3 ಗಂಟೆ 21 ನಿಮಿಷ ಇದ್ದರೆ 2024ರ ಅತೀ ಉದ್ದದ ಸಿನಿಮಾವಾಗಿರಲಿದೆ. ಇದಲ್ಲದೆ ಭಾರತದ ಅತೀ ಉದ್ದದ ಸಿನಿಮಾಗಳಲ್ಲಿ ಒಂದಾಗಿರಲಿದೆ.
ಸಿನಿಮಾ ಸೆನ್ಸಾರ್ ಇನ್ನೆರೆಡು ದಿನಗಳಲ್ಲಿ ಆಗಲಿದ್ದು, ಆ ಬಳಿಕವಷ್ಟೇ ಸಿನಿಮಾದ ನಿಜವಾದ ರನ್ ಟೈಮ್ ಗೊತ್ತಾಗಲಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್, ಸುನೀಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.
ಡಿಸೆಂಬರ್ 5 ರಂದು ʼಪುಷ್ಪ-2ʼ ರಿಲೀಸ್ ಆಗಲಿದೆ.