Advertisement

Pushpa 2: ಮನೆಗೆ ನುಗ್ಗಿ ಥಳಿಸುತ್ತೇವೆ.. ʼಪುಷ್ಪ-2ʼ ನಿರ್ಮಾಪಕರಿಗೆ ಕರ್ಣಿ ಸೇನೆ ಬೆದರಿಕೆ

02:54 PM Dec 10, 2024 | Team Udayavani |

ಹೈದರಾಬಾದ್:‌ ಪ್ಯಾನ್‌ ಇಂಡಿಯಾದಲ್ಲಿ ʼಪುಷ್ಪ-2ʼ (Pushpa 2) ಸಿನಿಮಾ ದಾಖಲೆಯ ಕಲೆಕ್ಷನ್‌ ಮಾಡುವತ್ತ ಸಾಗುತ್ತಿದೆ. ರಿಲೀಸ್‌ ಆದ ಐದೇ ದಿನದಲ್ಲಿ 800 ಕೋಟಿಗೂ ಅಧಿಕ ಗಳಿಕೆ ಕಂಡಿರುವ ʼಪುಷ್ಪ-2ʼಗೆ ಬಹಿರಂಗವಾಗಿಯೇ ಬೆದರಿಕೆಯೊಂದು ಬಂದಿದೆ.

Advertisement

ಅಲ್ಲು ಅರ್ಜುನ್‌ (Allu Arjun) ʼಪುಷ್ಪರಾಜ್‌ʼ ಅವತಾರ ನೋಡಿ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಅವರ ಅಭಿನಯಕ್ಕೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಸುಕುಮಾರ್‌ – ಅಲ್ಲು ಅರ್ಜುನ್‌ ʼಪುಷ್ಪʼದಂತೆಯೇ ಸೀಕ್ವೆಲ್‌ನಲ್ಲೂ ಗೆದ್ದುಬೀಗಿದ್ದಾರೆ.

ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಚಿತ್ರತಂಡಕ್ಕೆ ವ್ಯಕ್ತಿಯೊಬ್ಬರು ಬಹಿರಂಗವಾಗಿಯೇ ಬೆದರಿಕೆ ಹಾಕಿರುವ ವಿಡಿಯೋ ಹರಿಯಬಿಟ್ಟಿದ್ದಾರೆ.

ಸಿನಿಮಾದಲ್ಲಿ ಫಾಹದ್‌ ಫಾಸಿಲ್‌ (Fahadh Faasil) ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಭನ್ವರ್ ಸಿಂಗ್ ಶೇಖಾವತ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʼಶೇಖಾವತ್ʼ ಹೆಸರು ಬಳಸಿ  ಕ್ಷತ್ರಿಯ ಸಮುದಾಯವನ್ನು (Kshatriya community) ಚಿತ್ರದಲ್ಲಿ ಅವಮಾನಿಸಲಾಗಿದೆ ಎಂದು ಕ್ಷತ್ರಿಯ ಸಮುದಾಯದ ಮುಖಂಡರೊಬ್ಬರು ಆರೋಪಿಸಿದ್ದಾರೆ.

Advertisement

ಕ್ಷತ್ರಿಯ ಸಮುದಾಯದ ಮುಖಂಡ ರಾಜ್ ಶೇಖಾವತ್ ಎನ್ನುವವರು ʼಪುಷ್ಪ-2 ಸಿನಿಮಾದಲ್ಲಿ ಕ್ಷತ್ರಿಯ ಸಮುದಾಯವನ್ನು ಘೋರವಾಗಿ ಅವಮಾನಿಸಲಾಗಿದೆ. ಕ್ಷತ್ರಿಯ ಸಮುದಾಯದ ʼಶೇಖಾವತ್‌ʼ ಜಾತಿಯನ್ನು ಕೀಳಾಗಿ ಚಿತ್ರಿಸಿದ್ದಾರೆ. ಈ ಉದ್ಯಮವು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಕ್ಷತ್ರಿಯರನ್ನು ಅವಮಾನಿಸುತ್ತಿದೆ. ಈಗ ಮತ್ತೆ ಅವಮಾನ ಮಾಡಿದ್ದಾರೆ. ಸಿನಿಮಾದಲ್ಲಿ ಪದೇ ಪದೇ ʼಶೇಖಾವತ್‌ʼ ಪದ ಬಳಸಿರುವುದನ್ನು ತೆಗೆಯಬೇಕು. ಇಲ್ಲದಿದ್ರೆ ನಿರ್ಮಾಪಕರನ್ನು ಅವರ ಮನೆಯೊಳಗೆ ಹೋಗಿ ಥಳಿಸುತ್ತೇವೆ. ಇದನ್ನು ಸರಿಪಡಿಸೋಕೆ ಕರ್ಣಿ ಸೇನಾ (Karni Sena) ಯಾವ ಹಂತಕ್ಕೂ ಬೇಕಾದರೂ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ʼಪುಷ್ಪ-2ʼ ಚಿತ್ರತಂಡ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಸಿನಿಮಾದ ಪ್ರಿಮಿಯರ್‌ ಶೋ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಸಂಬಂಧ ಅಲ್ಲು ಅರ್ಜುನ್‌, ಚಿತ್ರತಂಡದ ವಿರುದ್ದ ದೂರು ದಾಖಲಾಗಿದೆ. ಇದಲ್ಲದೆ ಥಿಯೇಟರ್‌ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next