Advertisement

Pushpa 2: ರಿಲೀಸ್‌ ಆದ ಕೆಲವೇ ಗಂಟೆಯಲ್ಲಿ‌ ಆನ್‌ಲೈನ್‌ನಲ್ಲಿ ʼಪುಷ್ಪ-2ʼ HD ಪ್ರಿಂಟ್ ಲೀಕ್

12:13 PM Dec 05, 2024 | Team Udayavani |

ಹೈದರಾಬಾದ್:‌ ಎಲ್ಲೆಡೆ ʼಪುಷ್ಪ-2ʼ (Pushpa 2: The Rule) ಹವಾ ಶುರುವಾಗಿದೆ. ಸಾವಿರಾರು ಮಂದಿ ಥಿಯೇಟರ್‌ ಮುಂದೆ ʼಪುಷ್ಪರಾಜ್‌ʼ ನೋಡಿ ಜೈಹಾರ ಹಾಕುತ್ತಿದ್ದಾರೆ. ಅಲ್ಲು ಅರ್ಜುನ್‌ (Allu Arjun) ವೈಲ್ಡ್‌ ಫೈಯರ್‌ ಆಗಿ ಸ್ಕ್ರೀನ್‌ ಮೇಲೆ ಅಬ್ಬರಿಸಿದ್ದಾರೆ.

Advertisement

ಫಸ್ಟ್‌ ಡೇ ಫಸ್ಟ್‌ ಶೋಗಾಗಿ ಜನ ಮುಗಿಬಿದ್ದಿದ್ದಾರೆ. ʼಬನ್ನಿʼ ಅಭಿಮಾನಿಗಳು ಥಿಯೇಟರ್‌ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಬಹುನಿರೀಕ್ಷೆಯ ಸಿನಿಮಾಗಳ ರಿಲೀಸ್‌ ಆಗಿದ್ದು, ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಫೇಸ್‌ಬುಕ್‌ ಸೇರಿದಂತೆ ಹಲವು ಸೈಟ್‌ಗಳಲ್ಲಿ ಸಿನಿಮಾ ಲೀಕ್‌ ಆಗಿದೆ ಎಂದು ವರದಿಯಾಗಿದೆ.

ಹೆಚ್‌ ಡಿ ಕ್ವಾಲಿಟಿಯಲ್ಲೇ ಸಿನಿಮಾ ಮೂವಿ ರೂಲ್ಸ್, ತಮಿಳ್ ರೂಕರ್ಸ್, ಫಿಲ್ಮಿಜಿಲ್ಲಾ ಮತ್ತು ಟೆಲಿಗ್ರಾಮ್ ನಲ್ಲಿ ಪೂರ್ತಿ ಸಿನಿಮಾ ಲೀಕ್‌ ಆಗಿದೆ ಎಂದು ʼಟೈಮ್ಸ್‌ ನೌʼ ವರದಿ ಮಾಡಿದೆ.

Advertisement

720p, 1080p, 480p, 360p, 240p ಕ್ವಾಲಿಟಿಯಲ್ಲಿ ಸಿನಿಮಾ ಲೀಕ್‌ ಆಗಿದೆ. ಇವಿಷ್ಟು ಸೈಟ್‌ಗಳಲ್ಲಿ ಮಾತ್ರವಲ್ಲದೆ ತಮಿಳ್ ಯೋಗಿ, ಇಬೊಮ್ಮ, ತಮಿಳ್ ಬ್ಲಾಸ್ಟರ್ಸ್, 9xmovies, Bolly4u, Moviesda, ಮತ್ತು Jaisha Moviez ಗಳಲ್ಲೂ ಸಿನಿಮಾದ ಕಾಪಿ ಲೀಕ್‌ ಆಗಿದೆ ಎಂದು ವರದಿಯಾಗಿದೆ.

ಆನ್‌ಲೈನ್‌ನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಅಥವಾ ಬಹುನಿರೀಕ್ಷಿತ ಸಿನಿಮಾ ಈ ರೀತಿ ಲೀಕ್‌ ಆಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹೀಗೆಯೇ ಹಲವು ಸಿನಿಮಾಗಳು ಲೀಕ್‌ ಆಗಿದೆ. ಅದರ ಪರಿಣಾಮ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಸುಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫಾಹದ್‌ ಫಾಸಿಲ್‌ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next