Advertisement

Pushpa 2 ಕಲಾವಿದರಿದ್ದ ಬಸ್‌ ಅಪಘಾತ: ಹಲವರಿಗೆ ಗಾಯ

11:38 AM May 31, 2023 | Team Udayavani |

ಹೈದರಾಬಾದ್‌: ಪುಷ್ಪಾ-2 ಸಿನಿಮಾ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾದ ಘಟನೆ ಹೈದರಾಬಾದ್-ವಿಜಯವಾಡ ಹೆದ್ದಾರಿ ನಾರ್ಕೆಟ್‌ಪಲ್ಲಿ ಹೊರವಲಯದಲ್ಲಿ ಬುಧವಾರ ಸಂಭವಿಸಿದೆ.

Advertisement

ಶ್ರೀಕಾಕುಳಂನಲ್ಲಿ ಚಿತ್ರೀಕರಣ ಮುಗಿಸಿ ಖಾಸಗಿ ಬಸ್ ನಲ್ಲಿ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ನಾರ್ಕೆಟ್‌ಪಲ್ಲಿ ಹೊರವಲಯದಲ್ಲಿ ನಿಂತಿದ್ದ ಆರ್‌ಟಿಸಿ ಬಸ್‌ಗೆ ಸಿನಿಮಾ ಕಲಾವಿದರ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಹಲವಾರು ಕಲಾವಿದರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ರಸ್ತೆ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುಗಮಗೊಳಿಸಿದರು.

ಈ ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಅಲ್ಲು ಅರ್ಜುನ್ ಪುಷ್ಪ 2 ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next