Advertisement

ಸಂಚಾರಿ ಪಶು ಚಿಕಿತ್ಸಾ ವಾಹನ ಖರೀದಿ: ಸಚಿವ ಪ್ರಭು ಚವ್ಹಾಣ್‌

09:40 PM Dec 28, 2022 | Team Udayavani |

ಸುವರ್ಣವಿಧಾನಸೌಧ: ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಲಾಗಿದ್ದು, ಬೆಂಗಳೂರು-ಬೆಳಗಾವಿ ವಿಭಾಗ ಸೇರಿ ವಿವಿಧ ಕಡೆ 201 ವಾಹನ ವಿತರಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದರು.

Advertisement

ಪರಿಷತ್‌ನಲ್ಲಿ ಬುಧವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ ಸದಸ್ಯ ಎಸ್‌.ರವಿ ಪ್ರಶ್ನೆಗೆ ಉತ್ತರಿಸಿದ ಅವರು, ಕಲಬುರಗಿ ವಿಭಾಗ ಸೇರಿ ಬಾಕಿ ಇರುವ ಪ್ರದೇಶಗಳಿಗೆ ವಾಹನ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆ ಚಿಕಿತ್ಸೆಗೆ ಸಂಚಾರಿ ವಾಹನದಲ್ಲಿ ಲಸಿಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.

ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌.ರವಿ, ಸರ್ಕಾರದ ವರದಿ ಪ್ರಕಾರವೇ ಚರ್ಮಗಂಟು ರೋಗದಿಂದ 21,305 ಜಾನುವಾರು ಮೃತಪಟ್ಟಿವೆ. ಇನ್ನಾದರೂ ಎಚ್ಚೆತ್ತುಕೊಳ್ಳದೆ, ಟೆಂಡರ್‌ ಕರೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೆಷ್ಟು ಜಾನುವಾರುಗಳು ಮೃತಪಡಬೇಕು ಎಂದು ಕಾಯುತ್ತಿದ್ದೀರಾ? ಇಲ್ಲವಾದರೆ ಜಾನುವಾರುಗಳಿಗೆ ದಯಾ ಮರಣ ಕೊಟ್ಟು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next