Advertisement

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ

12:13 PM Jan 01, 2023 | Team Udayavani |

ದೇವನಹಳ್ಳಿ: ಕನಿಷ್ಠ ಬೆಂಬಲ ಯೋಜನೆಯಡಿ ಖರೀ ದಿಸುವ ರಾಗಿ ಸಾಗಾಣಿಕೆಗೆ ಟೆಂಡರ್‌ ಪ್ರಕ್ರಿಯೆಗಳನ್ನು ತ್ವರಿತವಾಗಿ ಕ್ರಮವಹಿಸಿ, ರೈತರು ಖರೀದಿ ಕೇಂದ್ರಗಳಿಗೆ ರಾಗಿ ತೆಗೆದುಕೊಂಡು ಬರಬಹುದಾದ ದಿನಾಂಕಗಳ ಕುರಿತು ನಿಖರ ಮಾಹಿತಿಯನ್ನು ನೋಂದಣಿ ಕೇಂದ್ರಗಳಲ್ಲಿ ನೀಡಬೇಕು. ಮಾರ್ಗದರ್ಶಕರು ರೈತರೊಂದಿಗೆ ಅವರಿಗೆ ಅನುಕೂಲಕರವಾಗಿ ಕರ್ತವ್ಯ ನಿರ್ವಹಿಸಿ, ರೈತ ಸ್ನೇಹಿಯಾಗಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

Advertisement

ತಾಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಸುವ ಕಾರ್ಯಪಡೆ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರದಲ್ಲಿ ರಾಗಿ ಸಂಗ್ರಹಣೆಯನ್ನು ಎಪಿಎಂಸಿ ಬದಲಿಗೆ ಗುಂಡಮಗೆರೆ ಕ್ರಾಸ್‌ ಬಳಿಯ ರಾಜ್ಯ ಉಗ್ರಾಣ ನಿಗಮದಲ್ಲಿ ಕೈಗೊಳ್ಳುವುದರಿಂದ ರೈತರಿಗೆ ಗೊಂದಲ ಮತ್ತು ತೊಂದರೆ ಆಗದಂತೆ ಕ್ರಮವಹಿಸಲು, ತ್ವರಿತವಾಗಿ ಸಾಗಾಣಿಕೆ ಟೆಂಡರ್‌ ಕೈಗೊಳ್ಳಬೇಕು. ಕಾರ್ಮಿಕರ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತೊಂದರೆಯಾಗದಂತೆ ಕ್ರಮ ವಹಿಸಿ: ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಜಿ.ಗಿರಿಜಾದೇವಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 24,891 ರೈತರು 357024.00 ಕ್ವಿಂಟಲ್‌ ರಾಗಿ ಖರೀದಿಗೆ ನೋಂದಣಿ ಮಾಡಿಕೊಂಡಿದ್ದು, ಕಳೆದ ಸಾಲಿಗಿಂತ ಹೆಚ್ಚು ರಾಗಿ ಖರೀದಿ ನಿರೀಕ್ಷಿಸಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಸಂಗ್ರಹಣಾ ಕೇಂದ್ರವನ್ನು ಎಪಿಎಂಸಿಯಿಂದ ಗುಂಡಮಗೆರೆ ಕ್ರಾಸ್‌ಗೆ ಬದಲಾಯಿಸಿರುವುದರಿಂದ ರೈತರಿಗೆ ರಾಗಿ ಸಾಗಾಟಕ್ಕೆ ತೊಂದರೆಯಾಗದಂತೆ ವಹಿಸಬೇಕಾದ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ಗುಣಮಟ್ಟ ಪರಿಶೀಲನೆ: ಬೆಂಗಳೂರು ದಕ್ಷಿಣ ವಿಭಾಗದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ರೈತರು ಖರೀದಿ ಕೇಂದ್ರಗಳಿಗೆ ರಾಗಿಯನ್ನು ತಂದು ಸುರಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಬಳಿಕ ಕೆಎಫ್ಸಿಎಸ್‌ಸಿ ಉಚಿತವಾಗಿ ನೀಡಲಾಗುವ ಗೋಣಿಚೀಲದಲ್ಲಿ ತುಂಬಿಕೊಳ್ಳಲಾಗುವುದು. ಖರೀದಿ ಕೇಂದ್ರಗಳಿಗೆ ರಾಗಿ ತರುವ ದಿನಾಂಕಗಳನ್ನು ನೋಂದಣಿ ಮತ್ತು ಖರೀದಿ ಕೇಂದ್ರಗಳಲ್ಲಿಯೇ ಪ್ರಕಟಿಸಲಾಗುವುದು ಎಂದರು.

ರಾಗಿ ಖರೀದಿ ಮತ್ತು ರಾಗಿ ಸಂಗ್ರಹಣಾ ಸ್ಥಳಗಳು : ದೇವನಹಳ್ಳಿ-ರಾಜ್ಯ ಉಗ್ರಾಣ ನಿಗಮ-2, ದೊಡ್ಡಬಳ್ಳಾಪುರ- ರಾಜ್ಯ ಉಗ್ರಾಣ ನಿಗಮ ಗುಂಡಮಗೆರೆ ಕ್ರಾಸ್‌ ಹಾಗೂ ಸಾಸಲು, ಹೊಸಕೋಟೆ- ಎಂ.ಡಿ.ಎಂ ಸೆಂಟರ್‌(ರಾಗಿ ಸಂಗ್ರಹಣೆ- ಕೊರಲೂರು ರಾಜ್ಯ ಉಗ್ರಾಣ ನಿಗಮ), ನೆಲಮಂಗಲ-ಕುಣಿಗಲ್‌ ಕ್ರಾಸ್‌ ಸಮೀಪದ ಕೆಂಪಲಿಂಗನಹಳ್ಳಿ ಕ್ರಾಸ್‌(ರಾಗಿ-ಸಂಗ್ರಹಣೆ-ದೊ ಡ್ಡಬಳ್ಳಾಪುರದ ರಾಜ್ಯ ಉಗ್ರಾಣ ನಿಗಮ). ಸಂಪರ್ಕಿಸಬೇಕಾದ ಅಧಿಕಾರಿಗಳು: ದೇವನಹಳ್ಳಿ- ಅಚ್ಯುತಾ ಎ(9900136687), ಸುನೀಲ್‌ಕುಮಾರ್‌ (8277934022), ದೊಡ್ಡಬಳ್ಳಾಪುರ- ಮಹೇಶ್‌ ಸಾಸಲು (ದೊಡ್ಡ ಬಳ್ಳಾಪುರ)- ಮುನಿರಾಜು (6366021925), ನವೀನ್‌ (8277929969), ಹೊಸಕೋಟೆ- ಕೆ ಕೆ ವರದ ರಾಜು(9071487237), ಕೆ.ಬಿ.ನಾಗಭೂಷಣ್‌(8277934038), ನೆಲ ಮಂ ಗಲ-ವೈ. ಎಸ್‌.ನಾರಾಯಣಮೂರ್ತಿ (9482991630), ಈ ಯಲ್ಲಪ್ಪ (8277934016). ಸಂಪರ್ಕಿಸಬೇಕು ಎಂದು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next