Advertisement

ದಂಡದ ಹಣದಲ್ಲೇ ಹೆಲ್ಮೆಟ್‌ ಖರೀದಿಸಿ

11:36 PM Sep 29, 2019 | Lakshmi GovindaRaju |

ಹುಣಸೂರು: ಇಲ್ಲಿನ ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸುವ ಮೂಲಕ ವಾಹನ ಸವಾರರ ಸ್ನೇಹಿಯಾಗಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ದಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡ ಕಟ್ಟಿಸಿಕೊಳ್ಳುತ್ತಿದ್ದ ಪೊಲೀಸರು ಇದೀಗ ಹೆಲ್ಮೆಟ್‌ ಧರಿಸದೇ ಬೈಕ್‌ ಓಡಿಸುವ ಸವಾರರಿಗೆ ಜಾಗೃತಿ ಮೂಡಿಸಲು ಸ್ಥಳದಲ್ಲೇ ಹೆಲ್ಮೆಟ್‌ ಖರೀದಿಸಿ, ಬಳಸುವಂತೆ ಪ್ರೇರೇಪಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ತಾಲೂಕಿನಾದ್ಯಂತ ಹೆಲ್ಮೆಟ್‌ ಇಲ್ಲದೇ ದ್ವಿಚಕ್ರ ವಾಹನ ಓಡಿಸುತ್ತಿದ್ದ ಸವಾರರಿಗೆ ಇಷ್ಟು ದಿನ ದಂಡ ಕಟ್ಟಿಸಿಕೊಂಡು ವಾಹನ ಬಿಟ್ಟು ಬಿಡುತ್ತಿದ್ದರು. ನಂತರದಲ್ಲಿ ಮುಖ್ಯ ರಸ್ತೆಗಳಲ್ಲಿ ಪೊಲೀಸರು ಬೈಕ್‌ ಹಿಡಿಯುವ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಸವಾರರು ಗಲ್ಲಿಗಲ್ಲಿಗಳಲ್ಲಿ (ಬದಲಿ ಮಾರ್ಗ) ಸುತ್ತಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಈ ಮಾರ್ಗದಲ್ಲಿ ಪೊಲೀಸರು ಇರುವುದಿಲ್ಲ ಎಂಬ ಕಾರಣಕ್ಕೆ ಹೆಲ್ಮೆಟ್‌ ಧರಿಸದೇ ಸಂಚರಿಸುತ್ತಿದ್ದರು.

ಮನವೊಲಿಕೆ: ಇದನ್ನು ಮನಗಂಡ ನಗರ ಪೊಲೀಸ್‌ ಠಾಣೆ ಎಸ್‌ಐ ಮಹೇಶ್‌ ನೇತೃತ್ವದಲ್ಲಿ ಇದೀಗ ದ್ವಿಚಕ್ರ ವಾಹನ ಸವಾರರಿಗೆ ನೀವು ದಂಡ (500 ರೂ.) ಕಟ್ಟುವ ಹಣದಲ್ಲೇ ಹೆಲ್ಮೆಟ್‌ ಖರೀದಿಸಿರೆಂಬ ಸಲಹೆ ನೀಡಿ ಮನವೊಲಿಸಿ, ಸ್ಥಳದಲ್ಲೇ ಬೈಕ್‌ ನಿಲ್ಲಿಸಿ, ಹೊಸ ಹೆಲ್ಮೆಟ್‌ ಖರೀದಿಸಿದ ಜೊತೆಗೆ ಬಿಲ್‌ ತೋರಿಸಿದ ನಂತರವಷ್ಟೇ ವಾಹನಗಳನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಪೊಲೀಸರ ವಿನೂತನ ಪ್ರಯೋಗಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next