Advertisement
ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎನ್ನುವ ಹಂಬಲದಲ್ಲಿರುವ ಕೃಷ್ಣಾನಂದ ಶಿವರಾಮ ಭಟ್ಟ ಬಲ್ಸೆ ಇವರು ಶ್ರೀಗಳ ಪ್ರೇರಣೆಯಿಂದ ಹಾಗೂ ಅನನ್ಯ ಗುರು ಭಕ್ತಿಯಿಂದ ಮುರ್ಡೇಶ್ವರ ಸಮೀಪದ ಬೈಲೂರು ನೀರಗದ್ದೆಯಲ್ಲಿ ನಿರ್ಮಾಣ ಮಾಡಿದ ಆಚಾರ್ಯ ಭವನಮ್ ಅತ್ಯಂತ ಸುಂದರವಾಗಿದ್ದು, ಧಾರ್ಮಿಕ ಹಾಗೂ ಸಮಾಜದ ಕಾರ್ಯಕ್ಕೆ ಮೀಸಲಿರಲಿದೆ ಎನ್ನುವ ಆವರ ಮಾತು ಎಲ್ಲರಿಗೂ ಮಾದರಿಯಾಗಿದೆ.
Related Articles
Advertisement
ಆಚಾರ್ಯಭವನಮ್ ಸುತ್ತಲೂ ಗೋವುಗಳಿಗೆ ಗೋ ಸ್ವರ್ಗ ನಿರ್ಮಾಣ ಮಾಡಲಾಗಿದೆ. ಸುಮಾರು 100 ರಿಂದ 150 ಗೋವುಗಳಿಗೆ ಆಶ್ರಯ ನೀಡಲು ಸಾಧ್ಯವಾಗುವಷ್ಟು ಸ್ಥಳಾವಕಾಶವಿದ್ದು ಪ್ರಸ್ತುತ ಕೆಲವೇ ದೇಶೀ ಗೋವುಗಳಿಂದ ಆರಂಭವಾಗುವ ಗೋಸ್ವರ್ಗ ಮುಂದೆ ಅನುಕೂಲಕ್ಕೆ ತಕ್ಕಂತೆ ಗೋವುಗಳಿಗೆ ಆಶ್ರಯ ನೀಡುವ ಯೋಚನೆ ಇದೆ. ಈಗಾಗಲೇ ದೇಶಿ ಗೋ ತಳಿಗಳ ಸುಂದರ ಭಾವಚಿತ್ರಗಳೊಂದಿಗೆ ತಳಿಗಳ ಹೆಸರು ಅಳವಡಿಸಲಾಗಿದ್ದು ನೋಡುತ್ತಾ ನಿಂತರೆ ಮನಸ್ಸಿನ ಚಿಂತೆ ದೂರವಾಗಲು ಸಾಧ್ಯ.
ಮುರ್ಡೇಶ್ವರ ದೇವಸ್ಥಾನದ ಉಪಾದಿವಂತರೂ ಆಗಿರುವ ಕೃಷ್ಣಾನಂದ ಭಟ್ಟ ಬಲ್ಸೆ ಅವರನ್ನು ಬಲ್ಸೆ ಭಟ್ಟರೆಂದೇ ಜನರು ಗುರುತಿಸುತ್ತಾರೆ. ಪೌರೋಹಿತ್ಯ ಮಾಡುತ್ತಾ ಸಮಾಜಮುಖೀಯಾಗಿ ಬಂದವರು. ಚಿಕ್ಕಂದಿನಿಂದಲೂ ಕಷ್ಟಪಟ್ಟು ಸ್ವಶಕ್ತಿಯಿಂದ ಮೇಲೆ ಬಂದಿರುವ ಅವರಿಗೆ ಸಮಾಜದಲ್ಲಿರುವ ಕಡು ಬಡವರ ಕುರಿತು ವಿಶೇಷ ಕಾಳಜಿ ಹಾಗೂ ಗುರುಗಳ ಕುರಿತು ಇರುವ ಅನನ್ಯ ಭಕ್ತಿ ಅವರನ್ನು ಇಂತಹಬೃಹತ್ ಆಚಾರ್ಯಭವನಮ್ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿತು.
ಗುರುಭಕ್ತಿಗೆ ಕಾಣಿಕೆಯಾಗಿ ಬಹುದೊಡ್ಡ ಕಟ್ಟಡವನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿರುವುದು ಅವರಲ್ಲಿರುವ ಸಮಾಜಮುಖೀ ಚಿಂತನೆಗೆ ಸಾಕ್ಷಿಯಾಗಿದೆ. ಸದಾ ಸಮಾಜದ ಕುರಿತು ಚಿಂತಿಸುವ ಅವರ ಈ ಕೊಡುಗೆಯ ಹಿಂದೆ ಅನೇಕ ನೋವುಗಳಿವೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ವಂತ ದುಡಿಮೆಯ ಉಳಿಕೆಯ ಹಣವನ್ನು ವಿನಿಯೋಗಿಸಿ ಕಟ್ಟಡ ಕಟ್ಟಲು ಮುಂದಾದ ಅವರಿಗೆ ಕೊರೊನಾ ಕಾಲದಲ್ಲಿ ಆರ್ಥಿಕ ಅಡಚಣೆಯಾದರೂ ಹಿಂಜರಿಯದೇ ಹಿಡಿದ ಕಾರ್ಯವನ್ನು ಮಾಡಿ ಮುಗಿಸಿದ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ.
ಇದನ್ನೂ ಓದಿ :ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಗೌರವಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಅವರಿಗೆ ಗೌರವ
ಧಾರ್ಮಿಕ ಕಾರ್ಯಕ್ರಮಗಳು: ಆಚಾರ್ಯ ಭವನಮ್ ಮತ್ತು ಪುಣ್ಯಕೋಟಿ ಸಮರ್ಪಣಾ ಸಮಾರಂಭದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಫೆ.13 ರಂದು ಆರಂಭವಾಗಿ ಫೆ.19ರ ತನಕ ನಡೆಯಲಿದ್ದು, ಫೆ.15ರಂದು ರಾಘವೇಶ್ವರ ಶ್ರೀಗಳಿಂದ ಲೋಕಾರ್ಪಣೆಗೊಳ್ಳಲಿದೆ.
ಪ್ರತಿದಿನ ಅನ್ನಸಂತರ್ಪಣೆ, ಚತುರ್ವೇದ ಪಾರಾಯಣ, ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ವಲಯೋತ್ಸವ ಹಾಗೂ ಯಕ್ಷಗಾನ ಸಪ್ತಾಹ ನಡೆಯಲಿದೆ.