Advertisement

Punjalkatte:ಕೊಳಕ್ಕೆಬೈಲ್‌-ನಯನಾಡು ರಸ್ತೆ ದುರವಸ್ಥೆ;ಯುವಕರಿಂದ ಶ್ರಮದಾನದ ಮೂಲಕ ದುರಸ್ತಿ

01:29 PM Oct 16, 2024 | Team Udayavani |

ಪುಂಜಾಲಕಟ್ಟೆ: ಗ್ರಾಮೀಣ ಪ್ರದೇಶವಾದ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಮೂರ್ಜೆಯಿಂದ ಕೊಳಕ್ಕೆಬೈಲು ಮೂಲಕ ನಯನಾಡನ್ನು ಸಂಪರ್ಕಿಸುವ ಹದಗೆಟ್ಟ ರಸ್ತೆಯನ್ನು ಯುವಕರ ತಂಡವೊಂದು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದು, ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿದೆ.

Advertisement

ಈ ರಸ್ತೆಯ ಡಾಮರು ಕಿತ್ತುಹೋಗಿ ಹೊಂಡ ಗುಂಡಿಗಳಿಂದ ತುಂಬಿದ್ದು, ಸಂಚಾರಕ್ಕೆ ದುಸ್ತರವಾಗಿತ್ತು. ಇದನ್ನು ಮನಗಂಡ ಸ್ಥಳೀಯ ಯುವಕರ ತಂಡವಾದ ನಯನಾಡು ಗೆಳೆಯರ ಬಳಗದ ಸದಸ್ಯರು ದಾನಿಗಳ ಸಹಕಾರದಿಂದ ಶ್ರಮದಾನದ ಮೂಲಕ ಸುಮಾರು 4.5 ಕಿ.ಮೀ. ದೂರದ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಿದರು. ಜೆಸಿಬಿ ಯಂತ್ರದ ಸಹಾಯದಿಂದ ಚರಂಡಿಗಳನ್ನು ಸ್ವತ್ಛಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಲಾಯಿತು.

ಶ್ರಮದಾನದಲ್ಲಿ ಗೆಳೆಯರ ಬಳಗದ ಸಂಚಾಲಕ ಎಲಿಯಾಸ್‌ ಕ್ರಾಸ್ತಾ, ಅಧ್ಯಕ್ಷ ಡೋನ್‌ ಪ್ರವೀಣ್‌ ಕ್ರಾಸ್ತಾ, ಕಾರ್ಯದರ್ಶಿ ಅನಿಲ್‌ ಮೊರಾಸ್‌, ಗೆಳೆಯರ ಬಳಗದ ಗೌರವಾಧ್ಯಕ್ಷ, ಗ್ರಾಪಂ ಸದಸ್ಯ ನೆಲ್ವಿಸ್ಟರ್‌ ಪಿಂಟೋ, ನಿರ್ದೇಶಕರಾದ ವಸಂತ ಪೂಜಾರಿ, ಲೋಕೇಶ್‌ ಪೂಜಾರಿ, ಸಂತೋಷ್‌ ಫೆರ್ನಾಂಡಿಸ್‌, ವಿಘ್ನೇಶ್‌ ಪೂಜಾರಿ, ಮಧುಕರ ಶೆಟ್ಟಿ, ಜೋಯೆಲ್‌ ಲೋಬೊ, ಅರುಣ್‌ ಫೆರ್ನಾಂಡಿಸ್‌, ವಿನ್ಸೆಂಟ್‌ ಗಲ್ಬಾಂ, ಎಮರ್ಸನ್‌ ಕ್ರಾಸ್ತಾ ಹಾಗೂ ಗೆಳೆಯರ ಬಳಗದ ಇತರ ಸದಸ್ಯರು ಮತ್ತು ಸ್ಥಳೀಯರು ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮೀಪದ ದೈಕಿನಕಟ್ಟೆ-ಮಂಚಗುಡ್ಡೆ ರಸ್ತೆಯ ಹೊಂಡ ಗುಂಡಿಗಳಿಗೆ, ನಯನಾಡು ದೇಬಿತ್ತಿಲ್‌ಎಂಬಲ್ಲಿಯೂ ಕಾಂಕ್ರೀಟ್‌ ಹಾಕಲಾಯಿತು. ಸ್ಥಳೀಯ ಉದ್ಯಮಿ ಆನಂದ ತೀರ್ಥ ಅವರು ಶ್ರಮದಾನ ನಿರತರಿಗೆ ಭೋಜನ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next