ವಾಷಿಂಗ್ಟನ್: ಜಿಮ್ ನಲ್ಲಿರುವಾಗಭಾರತೀಯ ಮೂಲದ ನಟನಿಗೆ ಚೂರಿಯಿಂದ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಅಮೆರಿಕಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ʼ ಏಕ್ ಕುಡಿ ಪಂಜಾಬ್ ದಿʼ ಸಿನಿಮಾದ ನಟ ಅರ್ಮಾನ್ ಧಲಿವಾಲ್ ಜಿಮ್ ನಲ್ಲಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಘಾಸಿಗೊಳಿಸಿದ್ದಾನೆ. ವ್ಯಕ್ತಿ ಚೂರಿಯನ್ನು ಹಿಡಿದುಕೊಂಡು ಗಟ್ಟಿಯಾಗಿ ನಟ ಅರ್ಮಾನ್ ಅವರನ್ನು ಹಿಡಿದುಕೊಂಡು ಕಿರುಚಾಡಿಕೊಂಡು ಮಾತನಾಡುವುದನ್ನು ವಿಡಯೋದಲ್ಲಿ ಕಾಣಬಹುದು. ಆ ಬಳಿಕ ಕೆಳಕ್ಕೆ ಹಾಕಿ ಚೂರಿಯಿಂದ ಹಲ್ಲೆ ಮಾಡಿದ್ದಾನೆ.
ಇದನ್ನೂ ಓದಿ: ಹಾಲು ಕುಡಿಯುವಾಗ ನವಜಾತ ಶಿಶು ಮೃತ್ಯು: ದುಃಖದಲ್ಲಿ ಹಿರಿಯ ಮಗನೊಂದಿಗೆ ಬಾವಿಗೆ ಹಾರಿದ ತಾಯಿ
ನೆಲಕ್ಕೆ ಬಿದ್ದ ವೇಳೆ ಚೂರಿ ಹಿಡಿದ ವ್ಯಕ್ತಿಯನ್ನು ಅಲ್ಲಿದ್ದ ಜನರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಹಲ್ಲೆಗೆ ಒಳಗಾಗಿ ಬ್ಯಾಂಡೇಜ್ ಗಳನ್ನು ಹಾಕಿಕೊಂಡ ಅರ್ಮಾನ್ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿದೆ. ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.
Related Articles
ಸದ್ಯ ನಟ ಆರೋಗ್ಯ ಸ್ಥಿತಿಯ ಬಗ್ಗೆ ಹಾಗೂ ಘಟನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬರಬೇಕಿದೆ.