ಚಂಡೀಗಡ: ತಪಾಸಣೆ ವಿಚಾರಕ್ಕೆ ಭಾನುವಾರ ರಾತ್ರಿ ನಡೆದ ಜಗಳದ ವೇಳೆ ನಾಗರಿಕನೊಬ್ಬನ ಮೇಲೆ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿದ ಪಂಜಾಬ್‌ನ ಮೊಹಾಲಿ ಜಿಲ್ಲೆಯ ಪೊಲೀಸ್ ಅಧಿಕಾರಿಯನ್ನು ಮಂಗಳವಾರ ಅಮಾನತು ಮಾಡಲಾಗಿದೆ.
ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಭಾನುವಾರ ರಾತ್ರಿ ಮಹಿಳೆಯೊಬ್ಬರ ಬ್ಯಾಗ್ ತಪಾಸಣೆ ನಡೆಸಲು ಸಬ್ ಇನ್‌ಸ್ಪೆಕ್ಟರ್ ಬಲ್ವಿಂದರ್ ಸಿಂಗ್ ಮುಂದಾದಾಗ ಮಾತಿನ ಚಕಮಕಿ ನಡೆದಿದೆ.
ಜಗಳ ತಾರಕಕ್ಕೇರುತ್ತಿದ್ದಂತೆ ಮಹಿಳೆಯೊಂದಿಗೆ ಇದ್ದ ಯುವಕನ ತೊಡೆಗೆ ಸಿಂಗ್ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶ: 33 ಕೋಟಿ ರೂ.ಮೌಲ್ಯದ ಹೆಲಿಕಾಪ್ಟರ್ ಗುಜರಿಗೆ ಮಾರಾಟ
Related Articles
ಗಾಯಗೊಂಡ ವ್ಯಕ್ತಿಯು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಸಿಂಗ್‌ರನ್ನು ಅಮಾನತು ಮಾಡಿ, ಎಫ್ಐಆರ್ ದಾಖಲಿಸಲಾಗಿದೆ.