Advertisement

ಪಂಜಾಬ್‌ ಕಿಂಗ್ಸ್‌ ಕೋಚ್‌ ಸ್ಥಾನ ಕಳೆದುಕೊಳ್ಳುವರೇ ಅನಿಲ್‌ ಕುಂಬ್ಳೆ ?

11:59 PM Aug 26, 2022 | Team Udayavani |

ಮೊಹಾಲಿ: ಐಪಿಎಲ್‌ ಫ್ರಾಂಚೈಸಿ ಪಂಜಾಬ್‌ ಕಿಂಗ್ಸ್‌ ಕೋಚ್‌ ಸ್ಥಾನದಲ್ಲಿ ಅನಿಲ್‌ ಕುಂಬ್ಳೆ ಅವರನ್ನು ಮುಂದುವರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

Advertisement

2020ರಲ್ಲಿ ಕುಂಬ್ಳೆ ಪಂಜಾಬ್‌ ಕೋಚ್‌ ಸ್ಥಾನವನ್ನು ವಹಿಸಿಕೊಂಡಿದ್ದರು. ಬಾಲಿವುಡ್‌ ನಟಿ ಪ್ರೀತಿ ಜಿಂಟಾ, ಉದ್ಯಮಿಗಳಾದ ಮೋಹಿತ್‌ ಬರ್ಮನ್‌, ನೆಸ್‌ ವಾಡಿಯಾ ಅವರಿದ್ದ ಪಂಜಾಬ್‌ ಕಿಂಗ್ಸ್‌ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಹಾಗೆಯೇ ಹೊಸ ಕೋಚ್‌ಗಾಗಿ ಹುಡುಕಾಟ ಆರಂಭವಾಗಿದೆ ಎಂದೂ ವರದಿಯಾಗಿದೆ.

ಈ ಮಾಹಿತಿ ಖಚಿತವಾದರೆ, 2014ರಿಂದೀಚೆ ಪಂಜಾಬ್‌ 5ನೇ ತರಬೇತುದಾರನನ್ನು ಕೆಳಗಿಳಿಸಿದಂತಾಗುತ್ತದೆ. ಕುಂಬ್ಳೆ ಅವರ ಕೋಚಿಂಗ್‌ ಅವಧಿಯಲ್ಲಿ ಪಂಜಾಬ್‌ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. 2020, 2021ರಲ್ಲಿ 5ನೇ ಸ್ಥಾನ, 2022ರಲ್ಲಿ 6ನೇ ಸ್ಥಾನಿಯಾಗಿತ್ತು.

ಒಟ್ಟು 42 ಪಂದ್ಯಗಳಲ್ಲಿ ಅನಿಲ್‌ ಕುಂಬ್ಳೆ ಕೋಚ್‌ ಆಗಿದ್ದರು. ಇದರಲ್ಲಿ ಪಂಜಾಬ್‌ 18 ಗೆದ್ದರೆ, 22 ಪಂದ್ಯಗಳನ್ನು ಸೋತಿದೆ. 2 ಪಂದ್ಯಗಳು ಟೈ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next