Advertisement

ಸನ್‌ರೈಸರ್ ಹೈದರಾಬಾದ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ ಜಯ

11:40 PM May 22, 2022 | Team Udayavani |

ಮುಂಬಯಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಂಜಾಬ್‌ ಕಿಂಗ್ಸ್‌ ತಂಡವು ರವಿವಾರ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ.

Advertisement

ಆರಂಭಿಕ ಶಿಖರ್‌ ಧವನ್‌ ಮತ್ತು ಲಿಯಮ್‌ ಲಿವಿಂಗ್‌ಸ್ಟೋನ್‌ ಅವರ ಉತ್ತಮ ಆಟದಿಂದಾಗಿ ಪಂಜಾಬ್‌ ತಂಡವು 15.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 160 ರನ್‌ ಗಳಿಸಿ ಗೆಲುವು ದಾಖಲಿಸಿತು. ಈ ಮೊದಲು ನಥನ್‌ ಎಲ್ಲಿಸ್‌ ಮತ್ತು ಹರ್‌ಪ್ರೀತ್‌ ಬ್ರಾರ್‌ ಅವರ ಬಿಗು ದಾಳಿಗೆ ತತ್ತರಿಸಿದ ಹೈದರಾಬಾದ್‌ 8 ವಿಕೆಟಿಗೆ 157 ರನ್‌ ಗಳಿಸಿತ್ತು.
ಧವನ್‌ 32 ಎಸೆತಗಳಿಂದ 39 ರನ್‌ ಹೊಡೆದರೆ ಲಿವಿಂಗ್‌ಸ್ಟೋನ್‌ ಭರ್ಜರಿಯಾಗಿ ಆಡಿದರು. ಕೇವಲ 22 ಎಸೆತ ಎದುರಿಸಿದ ಅವರು 2 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ ನೆರವಿನಿಂದ 49 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈಗಾಗಲೇ ಪ್ಲೇ ಆಫ್ ಹಂತಕ್ಕೆ 4 ತಂಡಗಳು ಪ್ರವೇಶ ಪಡೆದಿರುವುದರಿಂದ ರವಿವಾರದ ಪಂಜಾಬ್‌-ಹೈದರಾಬಾದ್‌ ನಡುವಿನ ಮುಖಾಮುಖೀ ಕೇವಲ ಔಪಚಾರಿಕವಾಗಿತ್ತು.

ಕೇನ್‌ ವಿಲಿಯಮ್ಸನ್‌ ಬದಲು ಇನ್ನಿಂಗ್ಸ್‌ ಆರಂಭಿಸಿದ ಪ್ರಿಯಂ ಗರ್ಗ್‌ (4) ಯಶಸ್ಸು ಕಾಣಲಿಲ್ಲ. ಅಭಿಷೇಕ್‌ ಶರ್ಮ ಎಂದಿನ ಲಯದಲ್ಲಿ ಸಾಗಿ 43 ರನ್‌ ಹೊಡೆದರು (32 ಎಸೆತ, 5 ಬೌಂಡರಿ, 2 ಸಿಕ್ಸರ್‌). ಇದು ಹೈದರಾಬಾದ್‌ ಸರದಿಯ ಟಾಪ್‌ ಸ್ಕೋರ್‌ ಆಗಿತ್ತು. ರಾಹುಲ್‌ ತ್ರಿಪಾಠಿ ಮತ್ತು ಐಡನ್‌ ಮಾರ್ಕ್‌ರಮ್‌ ಇಪ್ಪತರ ಗಡಿಯಲ್ಲಿ ಎಡವಿದರು. ಇವರೆಲ್ಲರ ವಿಕೆಟ್‌ ಹರ್‌ಪ್ರೀತ್‌ ಬ್ರಾರ್‌ ಪಾಲಾಯಿತು. 26ಕ್ಕೆ 3 ವಿಕೆಟ್‌ ಉರುಳಿಸಿದ ಬ್ರಾರ್‌ ಹೈದರಾಬಾದ್‌ನ ಯಶಸ್ವಿ ಬೌಲರ್‌ ಆಗಿ ಮೂಡಿಬಂದರು. ನಥನ್‌ ಎಲ್ಲಿಸ್‌ ಕೂಡ 3 ವಿಕೆಟ್‌ ಕೆಡವಿದರು. ಇದಕ್ಕಾಗಿ 40 ರನ್‌ ನೀಡಿದರು.

ಕೀಪರ್‌ ನಿಕೋಲಸ್‌ ಪೂರಣ್‌ ಐದೇ ರನ್‌ ಮಾಡಿ ನಿರ್ಗಮಿಸಿದ ಬಳಿಕ ವಾಷಿಂಗ್ಟನ್‌ ಸುಂದರ್‌-ರೊಮಾರಿಯೊ ಶೆಫ‌ರ್ಡ್‌ ಡೆ‌ತ್‌ ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಆಡಿದರು. 6ನೇ ವಿಕೆಟಿಗೆ 39 ಎಸೆತಗಳಿಂದ 58 ರನ್‌ ಸಂಗ್ರಹಗೊಂಡಿತು. ವಾಷಿಂಗ್ಟನ್‌ 19 ಎಸೆತ ಎದುರಿಸಿ 25 ರನ್‌ ಹೊಡೆದರೆ (3 ಬೌಂಡರಿ, 1 ಸಿಕ್ಸರ್‌), ಶೆಫ‌ರ್ಡ್‌ 15 ಎಸೆತ ಎದುರಿಸಿ ಅಜೇಯ 26 ರನ್‌ ಮಾಡಿದರು. ಸಿಡಿಸಿದ್ದು 2 ಬೌಂಡರಿ, 2 ಸಿಕ್ಸರ್‌.

ಅಂತಿಮ ಓವರ್‌ನಲ್ಲಿ ನಾಟಕೀಯ ಘಟನೆ ಸಂಭವಿಸಿತು. ನಥನ್‌ ಎಲ್ಲಿಸ್‌ ಅವರ ಈ ಓವರ್‌ನಲ್ಲಿ 3 ವಿಕೆಟ್‌ ಉರುಳಿದವು. ಭುವನೇಶ್ವರ್‌ ಕುಮಾರ್‌ ನೋಬಾಲ್‌ಗೆ ರನೌಟಾದರು!

Advertisement

ಭುವನೇಶ್ವರ್‌ ನಾಯಕ
ಕೇನ್‌ ವಿಲಿಯಮ್ಸನ್‌ ಅನುಪಸ್ಥಿತಿಯಲ್ಲಿ ಭುವನೇಶ್ವರ್‌ ಕುಮಾರ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಿದರು. ರೊಮಾರಿಯೊ ಶೆಫ‌ರ್ಡ್‌ ಮತ್ತು ಜಗದೀಶ್‌ ಸುಚಿತ್‌ ಹನ್ನೊಂದರ ಬಳಗಕ್ಕೆ ವಾಪಸಾದರು.

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌
ಪ್ರಿಯಂ ಗರ್ಗ್‌ ಸಿ ಅಗರ್ವಾಲ್‌ ಬಿ ರಬಾಡ 4
ಅಭಿಷೇಕ್‌ ಶರ್ಮ ಸಿ ಲಿವಿಂಗ್‌ಸ್ಟೋನ್‌ ಬಿ ಬ್ರಾರ್‌ 43
ರಾಹುಲ್‌ ತ್ರಿಪಾಠಿ ಸಿ ಧವನ್‌ ಬಿ ಬ್ರಾರ್‌ 20
ಐಡನ್‌ ಮಾರ್ಕ್‌ರಮ್‌ ಸ್ಟಂಪ್ಡ್ ಜಿತೇಶ್‌ ಬಿ ಬ್ರಾರ್‌ 21
ನಿಕೋಲಸ್‌ ಪೂರಣ್‌ ಸಿ ಜಿತೇಶ್‌ ಬಿ ಎಲ್ಲಿಸ್‌ 5
ವಾಷಿಂಗ್ಟನ್‌ ಸುಂದರ್‌ ಸಿ ಧವನ್‌ ಬಿ ಎಲ್ಲಿಸ್‌ 25
ರೊಮಾರಿಯೊ ಶೆಫ‌ರ್ಡ್‌ ಔಟಾಗದೆ 26
ಜೆ. ಸುಚಿತ್‌ ಸಿ ಮಂಕಡ್‌ ಬಿ ಎಲ್ಲಿಸ್‌ 0
ಭುವನೇಶ್ವರ್‌ ಕುಮಾರ್‌ ರನೌಟ್‌ 1
ಉಮ್ರಾನ್‌ ಮಲಿಕ್‌ ಔಟಾಗದೆ 0
ಇತರ 12
ಒಟ್ಟು (8 ವಿಕೆಟಿಗೆ) 157
ವಿಕೆಟ್‌ ಪತನ: 1-14, 2-61, 3-76, 4-87, 5-96, 6-154, 7-154, 8-156.
ಬೌಲಿಂಗ್‌: ಲಿಯಮ್‌ ಲಿವಿಂಗ್‌ಸ್ಟೋನ್‌ 4-0-25-0
ಆರ್ಷದೀಪ್‌ ಸಿಂಗ್‌ 4-0-25-0
ಕಾಗಿಸೊ ರಬಾಡ 4-0-38-1
ನಥನ್‌ ಎಲ್ಲಿಸ್‌ 4-0-40-3
ಹರ್‌ಪ್ರೀತ್‌ ಬ್ರಾರ್‌ 4-0-26-3
ಪಂಜಾಬ್‌ ಕಿಂಗ್ಸ್‌
ಜಾನಿ ಬೇರ್‌ಸ್ಟೋ ಬಿ ಫಾರೂಕಿ 23
ಶಿಖರ್‌ ಧವನ್‌ ಸಿ ಫಾರೂಕಿ 39
ಶಾರೂಖ್‌ ಖಾನ್‌ ಸಿ ಸುಂದರ್‌ ಬಿ ಉಮ್ರಾನ್‌ 19
ಅಗರ್ವಾಲ್‌ ಸಿ ಸುಚಿತ್‌ ಬಿ ಸುಂದರ್‌ 1
ಲಿವಿಂಗ್‌ಸ್ಟೋನ್‌ ಔಟಾಗದೆ 49
ಜಿತೇಶ್‌ ಶರ್ಮ ಸಿ ಗರ್ಗ್‌ ಬಿ ಸುಚಿತ್‌ 19
ಪ್ರೇರಕ್‌ ಮಂಕಡ್‌ ಔಟಾಗದೆ 4
ಇತರ: 6
ಒಟ್ಟು (15.1 ಓವರ್‌ಗಳಲ್ಲಿ 5 ವಿಕೆಟಿಗೆ) 160
ವಿಕೆಟ್‌ ಪತನ: 1-28, 2-66, 3-71, 4-112, 5-133
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 2-0-22-0
ವಾಷಿಂಗ್ಟನ್‌ ಸುಂದರ್‌ 2-0-19-1
ಫ‌ಜಲ್ಲಾ ಫಾರೂಕಿ 4-0-32-2
ಜಗದೀಶ್‌ ಸುಚಿತ್‌ 4-0-38-1
ಉಮ್ರಾನ್‌ ಮಲಿಕ್‌ 2.1-0-24-1
ರೊಮಾರಿಯೊ ಶೆಫ‌ರ್ಡ್‌ 1-0-23-0
ಪಂದ್ಯಶ್ರೇಷ್ಠ: ಹರ್‌ಪ್ರೀತ್‌ಬ್ರಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next