ಚಂಡೀಗಢ: ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರಾಗಿ(ಡಿಜಿಪಿ) ವಿ.ಕೆ.ಭಾವ್ರಾ ಅವರನ್ನು ರಾಜ್ಯ ಸರ್ಕಾರ ಶನಿವಾರ ನೇಮಿಸಿದೆ.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪವಾದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಕಳೆದ 100 ದಿನಗಳ ಅವಧಿಯಲ್ಲಿ ಅಂದರೆ ಚರಣ್‌ಜಿತ್ ಛನ್ನಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ 3ನೇ ಬಾರಿಗೆ ಡಿಜಿಪಿ ಬದಲಾವಣೆ ಮಾಡಲಾಗಿದೆ. ಈಗ ನೇಮಕವಾಗಿರುವ ಭಾವ್ರಾ ಅವರು 2 ವರ್ಷಗಳ (ಕನಿಷ್ಠ) ಅಧಿಕಾರವಧಿ ಹೊಂದಿರಲಿದ್ದಾರೆ.
ಭದ್ರತಾ ಲೋಪ ವಿಚಾರದಲ್ಲಿ ಈ ಹಿಂದಿನ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಗೃಹ ಸಚಿವಾಲಯ ಸಮನ್ಸ್ ಜಾರಿಗೊಳಿಸಿದೆ. ಇದೇ ವೇಳೆ ಭದ್ರತಾಲೋಪ ಉಂಟಾದ ಸ್ಥಳವಾದ ಫಿರೋಜಾಬಾದ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ)
ಹರ್ಮನ್‌ದೀಪ್ ಸಿಂಗ್ ಹನ್ಸ್‌ರನ್ನು ಲುಧಿಯಾನಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ನರಿಂದರ್ ಭಾರ್ಗವ್ ಅವರನ್ನು ನೇಮಿಸಲಾಗಿದೆ.
Related Articles
ಇದನ್ನೂ ಓದಿ:ಕೊರಗಜ್ಜ ದೈವದ ವೇಷ ಧರಿಸಿದ್ದ ಮುಸ್ಲಿಂ ವರನಿಂದ ಕ್ಷಮೆ ಯಾಚನೆ
ಪ್ರಧಾನಿಯವರು ರ್‍ಯಾಲಿ ಸ್ಥಳಕ್ಕೆ ವಾಯುಮಾರ್ಗದಲ್ಲಿ ತೆರಳುವುದಿಲ್ಲ, ರಸ್ತೆಯಲ್ಲೇ ತೆರಳಿದ್ದಾರೆ ಎನ್ನುವ ವಿಚಾರ ರಾಜ್ಯ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಈ ಮೊದಲೇ ತಿಳಿದಿತ್ತು ಎಂದು ತಿಳಿಸುವ ವರದಿಯೊಂದು ಪ್ರಕಟವಾಗಿದೆ.