Advertisement

ಭದ್ರತೆ ಕಡಿತ ಮಾಹಿತಿ ಬಹಿರಂಗ ಮಾಡಿದ್ದೇಕೆ? ಪಂಜಾಬ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

10:18 PM May 31, 2022 | Team Udayavani |

ಚಂಡೀಗಢ: ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಪಂಜಾಬಿ ಗಾಯಕ, ಕಾಂಗ್ರೆಸ್‌ ನಾಯಕ ಸಿಧು ಮೂಸೆವಾಲಗೆ ಭದ್ರತೆಯನ್ನು ಕಡಿಮೆಗೊಳಿಸಿದ್ದೇಕೆ? ಹಾಗೆಯೇ ಆ ಮಾಹಿತಿಯನ್ನು ಬಹಿರಂಗ ಮಾಡಿದ್ದೇಕೆ? ಎಂದು ಪಂಜಾಬ್‌ ಉಚ್ಚ ನ್ಯಾಯಾಲಯ ಆಪ್‌ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.

Advertisement

ಈ ಬಗ್ಗೆ ಜೂ.2ರೊಳಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ಗೆ ಸೂಚಿಸಿದೆ.

ಕಳೆದ ಶನಿವಾರವಷ್ಟೇ ಪಂಜಾಬ್‌ 400 ಮಂದಿ ಅತಿ ಪ್ರಭಾವಿ ವ್ಯಕ್ತಿಗಳಿಗೆ ನೀಡಿದ್ದ ಭದ್ರತೆಯನ್ನು ಕಡಿಮೆಗೊಳಿಸಿತ್ತು. ಇದು ವಿಐಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಈ ರೀತಿಯ ಭದ್ರತೆಗಳನ್ನು ಒಂದು ಗೌರವವೆಂದೇ ತಿಳಿದುಕೊಳ್ಳಲಾಗಿದೆ. ಆದ್ದರಿಂದ ಭದ್ರತಾ ಸಿಬ್ಬಂದಿಯನ್ನು ಕಡಿಮೆ ಮಾಡಲಾಗಿದೆ ಎಂದು ಆಪ್‌ ಸರ್ಕಾರ ಹೇಳಿತ್ತು. ಅಷ್ಟು ಮಾತ್ರವಲ್ಲ ಅದನ್ನು ಟ್ವಿಟರ್‌ನಲ್ಲೂ ಪ್ರಕಟಿಸಿತ್ತು.

ಈ ಮಾಹಿತಿ ಸೋರಿಕೆಯಾಗಿರುವುದರಿಂದಲೇ ತಮ್ಮ ಪುತ್ರ ಮೃತಪಟ್ಟಿದ್ದಾರೆಂದು ಮೂಸೆವಾಲ ತಂದೆ ಬಲ್ಕರ್‌ ಸಿಂಗ್‌ ಸಿಧು ಆರೋಪಿಸಿದ್ದರು.

ಮಸ್ಸಾದಲ್ಲಿ ಅಂತ್ಯಕ್ರಿಯೆ: ಮಂಗಳವಾರ ಮಾನ್ಸಾ ಜಿಲ್ಲೆಯ ಮೂಸಾದಲ್ಲಿ ಸಿಧು ಅವರ ಅಂತ್ಯಕ್ರಿಯೆ ನಡೆಯಿತು. ಸಿಧು ಅಭಿಮಾನಿಗಳು ಪಂಜಾಬ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಗಾಯಕರಿಗೆ ಪಾತಕಿಗಳ ಕಾಟ: ಮೂಸೆವಾಲ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಇನ್ನೊಬ್ಬ ಪ್ರಖ್ಯಾತ ಗಾಯಕ ಮಿಕಾ ಸಿಂಗ್‌, ಪಂಜಾಬ್‌ನ ಹಲವು ಗಾಯಕರು ಭೂಗತ ಪಾತಕಿಗಳಿಂದ ಶೋಷಣೆಗೊಳಗಾಗಿದ್ದಾರೆ. ಅವರೆಲ್ಲ ಜೀವ ಉಳಿಸಿಕೊಳ್ಳಲು ಹಣ ನೀಡಿ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next