Advertisement

ಇಂಟರ್ನೆಟ್‌ ಸ್ಟಾರ್‌ ಆದ ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ

07:55 PM Nov 16, 2021 | Team Udayavani |

ಚಂಡೀಗಡ: ರಸ್ತೆ ಪಕ್ಕದ ಗುಂಡಿಯೊಂದರಲ್ಲಿ ಬಿದ್ದಿದ್ದ ಹಸುವೊಂದನ್ನು ಸಂರಕ್ಷಿಸುವಲ್ಲಿ ಖುದ್ದು ಯೋಗದಾನ ನೀಡಿದ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ, ಮಂಗಳವಾರ “ಇಂಟರ್ನೆಂಟ್‌ ಸ್ಟಾರ್‌’ ಆಗಿ ಹೊರಹೊಮ್ಮಿದ್ದಾರೆ.

Advertisement

ಸೋಮವಾರ ರಾತ್ರಿ ಎಂದಿನಂತೆ ತಮ್ಮ ಕರ್ತವ್ಯವನ್ನು ಮುಗಿಸಿ ಮನೆಗೆ ತೆರಳುತ್ತಿದ್ದ ಚನ್ನಿ, ಗುಂಡಿಯಲ್ಲಿ ಬಿದ್ದಿದ್ದ ಹಸುವೊಂದನ್ನು ಎತ್ತಲು ಕೆಲವು ಜನರು ಪ್ರಯತ್ನಿಸುತ್ತಿದ್ದುದನ್ನು ನೋಡಿದರು.

ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸುವಂತೆ ಸೂಚಿಸಿದ ಅವರು, ತಮ್ಮ ಅಂಗರಕ್ಷಕರೊಂದಿಗೆ ಸ್ಥಳಕ್ಕೆ ತೆರಳಿ ಹಸು ಹೊರತೆಗೆಯಲು ಪ್ರಯತ್ನಿಸುತ್ತಿದ್ದವರಿಗೆ ಕೆಲವು ಸೂಚನೆಗಳನ್ನು ನೀಡಿದ್ದಲ್ಲದೆ, ಟಾರ್ಚ್‌ ಹಿಡಿದು ನೆರವಾದರು.

ಇದನ್ನೂ ಓದಿ:ಜಾಕೀರ್‌ ಸಂಸ್ಥೆ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಣೆ

ಕೆಲವು ನಿಮಿಷಗಳ ತರುವಾಯ ಹಸುವನ್ನು ಹೊರತೆಗೆಯಲಾಯಿತು. ಈ ಇಡೀ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ.

Advertisement

ಚನ್ನಿಯವರ ಟ್ವಿಟರ್‌ ಖಾತೆಯಡಿ ಅಪ್ಲೋಡ್‌ ಆದ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 15,000 ವೀಕ್ಷಣೆ ಹಾಗೂ 2,000 ಲೈಕ್ಸ್‌ ಗಳಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next