Advertisement

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿವಾಸದ ಬಳಿ ಬಾಂಬ್ ಪತ್ತೆ, ಬಾಂಬ್ ನಿಷ್ಕ್ರಿಯ ತಂಡ ದೌಡು

06:19 PM Jan 02, 2023 | Team Udayavani |

ಚಂಡೀಗಢ : ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಇಂದು ಸ್ಫೋಟಕ ಸಾಧನ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ.

Advertisement

ಪಂಜಾಬ್ ಮುಖ್ಯಮಂತ್ರಿ ನಿವಾಸದ ಬಳಿಯಿರುವ ಹೆಲಿಪ್ಯಾಡ್‌ನಿಂದ ಕೆಲವೇ ದೂರದಲ್ಲಿ ಬಾಂಬ್ ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ತಂಡ ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಸೋಮವಾರ ಸಂಜೆ 4 ರಿಂದ 4:30 ರ ಸುಮಾರಿಗೆ, ಕೊಳವೆಬಾವಿ ನಿರ್ವಾಹಕರು ಪಂಜಾಬ್ ಮುಖ್ಯಮಂತ್ರಿಯವರ ನಿವಾಸದ ಬಳಿಯ ಮಾವಿನ ತೋಟದಲ್ಲಿ ಜೀವಂತ ಬಾಂಬ್ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಕ್ಷಣಾ ಪಡೆಗಳು ಬಾಂಬ್ ಪತ್ತೆಯಾದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ: ರೈತನಿಗೆ ಗಂಭೀರ ಗಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next