Advertisement

ತರಕಾರಿ ವ್ಯಾಪಾರಸ್ಥರಿಂದ ಪುನೀತ್‌ ಸ್ಮರಣೆ 

10:05 PM Jan 03, 2022 | Team Udayavani |

ಬಳ್ಳಾರಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗಾಂಧೀಜಿ ತರಕಾರಿ ಸಗಟು ವ್ಯಾಪಾರ ಸಂಘದಿಂದ ಕನ್ನಡ ರತ್ನ, ನಟ ದಿ. ಪುನೀತ್‌ ರಾಜ್‌ಕುಮಾರ್‌ ಸ್ಮರಣೆ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.

Advertisement

ಸಂಘದಅಧ್ಯಕ್ಷಗೋವಿಂದರಾಜುಲು, ಪುನೀತ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಬಳಿಕ ಮಾತನಾಡಿದ ಅವರು, ನಟ ಪುನೀತ್‌ ಅವರು, ಸದಭಿರುಚಿಯ ಮತ್ತು ಕುಟುಂಬ ಸಮೇತವಾಗಿ ನೋಡಬಹುದಾದಂತ ಚಿತ್ರಗಳಲ್ಲಿ ಅಭಿನಯಿಸುತ್ತ ಅವರ ಅಭಿಮಾನಿಗಳಿಗೆ ಮತ್ತು ಸಮಾಜಕ್ಕೆ ಮಾದರಿಯಾಗಿದ್ದರು.

ಅವರು ಕೈಗೊಂಡ ಅನೇಕ ಸಾಮಾಜಿಕ ಕಾರ್ಯಗಳಿಂದ ವೃದ್ಧರಾದಿಯಾಗಿ ನೆನೆಯುವ ನಟನಾಗಿ ದಕ್ಷಿಣ ಕರ್ನಾಟಕದ ಯೂತ್‌ ಐಕಾನ್‌ ಆಗಿ ಮನೆ ಮಾತಾಗಿದ್ದರು ಎಂದು ಗುಣಗಾನ ಮಾಡಿದರು. ಸಂಘದ ಗೌರವ ಅಧ್ಯಕ್ಷ ದಿನೇಶ್‌ ಕುಮಾರ್‌ ಮಾತನಾಡಿ, ಯಾವುದೇ ಪ್ಯಾನ್‌ ಇಂಡಿಯಾ ಸಿನೆಮಾದಲ್ಲಿ ಅಭಿನಯಿಸಿದೇ ದೇಶ ಹಾಗೂ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು.

ಮನುಷ್ಯ ಜೀವನದಲ್ಲಿ ಸಮಾಜಕ್ಕೆ ಯಾವ ರೀತಿ ಸಹಕಾರಿಯಾಗಿ ಬದುಕ ಬೇಕೆಂಬುದನ್ನು ತೋರಿಸಿಕೊಟ್ಟ ಅವರನ್ನು ನೆನೆಯುವುದು ಕನ್ನಡಿಗರ ಕರ್ತವ್ಯವಾಗಿದೆ. ಅವರು ಮತ್ತೂಮ್ಮೆ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ಸ್ಮರಿಸಿದರು. ನಂತರ ಅನ °ದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪುನೀತ್‌ ಅಭಿಮಾನಿಗಳಾದ ದಿನೇಶ್‌ಕುಮಾರ್‌, ಗೋವಿಂದರಾಜುಲು, ಕೆ.ಅನೀಫ್‌, ಪಂಪನಗೌಡ, ಕೆ.ಪಿ.ಹಸೇನ್‌, ಪಾಲಾಕ್ಷಿ, ಮಹಮ್ಮದ್‌, ನಾಗರಾಜ್‌, ರವಿ, ಶಿವ, ರಾಜು, ನವೀನ್‌, ಅಂಕುಲ್‌, ನೂರಾರು ಅಭಿಮಾನಿಗಳು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next