Advertisement

ಕನ್ಹಯ್ಯಲಾಲ್‌ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿ

03:30 PM Jul 05, 2022 | Team Udayavani |

ಸೈದಾಪುರ: ಕನ್ಹಯ್ಯಲಾಲ್‌ ಎಂಬ ಹಿಂದೂ ಟೈಲರ್‌ನನ್ನು ಹತ್ಯೆ ಮಾಡಿದ ಧರ್ಮಾಂಧರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ರೈಲ್ವೆ ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದ ಮೂಲಕ ಸಾಗಿ ಬಸ್‌ ನಿಲ್ದಾಣದ ಹತ್ತಿರವಿರುವ ಬಾಬು ಜಗಜೀವನರಾಮ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಕೆಲಕಾಲ ರಸ್ತೆ ತಡೆದು ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರು ನಂತರ ಕನಕ ವೃತ್ತದ ಮೂಲಕವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಪ್ರತಿಕೃತಿ ದಹಿಸಿ ಹಿಂದೂ ನಾವೆಲ್ಲ ಒಂದು ಎಂದು ಸಾರುವ ಸರ್ವ ಧರ್ಮ ಸಹಿಷ್ಣುಗಳು ಭಾರತೀಯರು. ಜಿಹಾದಿಗಳನ್ನು ಜೈಲುಗಳಲ್ಲಿಟ್ಟು ಸಾಕಬೇಡಿ, ಅವರನ್ನು ಸಾರ್ವಜನಿಕರ ಮುಂದೆ ಗಲ್ಲಿಗೇರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಕುಮಾರ ಸುಕಲೂರ್‌, ನಿತಿನ್‌ ತಿವಾರಿ, ನರಸಿಂಹ ಕಡೇಚೂರು, ಚಂದ್ರು ವಾಡಿ, ಸಚಿನ ಸಾಹುಕಾರ, ಬಸವರಾಜ ನಾಯಕ, ರಾಜು ದೊರೆ, ವಿರೂಪಾಕ್ಷ ದಿರೆ, ಹನುಮಂತ್ರರಾಯ ದೊರೆ, ಆಂಜನೇಯ ಅಂಗಡಿ, ವೆಂಕಟ ರಾಮುಲು, ಸಚಿನ ಪವರ್‌, ಆಕಾಶ ಜೇಗರ್‌, ಅಪ್ಪು ಸ್ವಾಮಿ, ಗುರು ಕದಂ, ಪ್ರೇಮನಾಥ ಕದಂ, ಅಮರೇಶ ನಾಯಕ ಕೂಡಲೂರು, ಅಂಬರೇಶ ಎ., ಅವಿನಾಶ ಸೇರಿದಂತೆ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next