Advertisement

ಚಿಕ್ಕೋಡಿ:  ಕರ್ನಾಟಕ ರತ್ನ ಪುನೀತ್ ರಾಜಕುಮಾರ ಪುತ್ಥಳಿ ಅನಾವರಣ

08:56 AM Nov 02, 2022 | Team Udayavani |

ಚಿಕ್ಕೋಡಿ: ಪುನೀತ್ ರಾಜಕುಮಾರ ಅಲ್ಪ ವಯಸ್ಸಿನಲ್ಲಿ ನಮ್ಮ ಬಿಟ್ಟು ಹೋದರೂ ಸಹ ಅವರ ನೆನಪು ಇಡೀ ರಾಜ್ಯದ ಜನರ ಹೃದಯದಲ್ಲಿ ಇದ್ದು. ಅವರ ಮಾಡಿರುವ ಸಾಮಾಜಿಕ ಕಾರ್ಯ ಮೆಚ್ಚುವಂತದ್ದು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

Advertisement

ಪುರಸಭೆ ಚಿಕ್ಕೋಡಿ. ಪುನಿತ ರಾಜಕುಮಾರ ಅಭಿಮಾನಿಗಳು. ಚಿಕ್ಕೋಡಿಯ ಎಲ್ಲ ಕನ್ನಡಪರ ಸಂಘಟನೆಗಳು ಹಾಗೂ ಶ್ರೀ ಎಂ.ಕೆ.ಕವಟಗಿಮಠ ಚಾರಿಟೇಬಲ್ ಟ್ರಸ್ಟ ಇವುಗಳ ಸಂಯುಕ್ತ ಅಶ್ರಯದಲ್ಲಿ ಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಚಿಕ್ಕೋಡಿ ನಗರದಲ್ಲಿ ಕಿತ್ತೂರ ಚೆನ್ನಮ್ಮ ಪುತ್ಥಳಿ ಶೀಘ್ರವಾಗಿ ನಿರ್ಮಾಣ ಮಾಡಲಾಗುತ್ತದೆ. ಪುನೀತ ಸ್ಮಾರಕ ಮಾಡಲಾಗುತ್ತದೆ ಎಂದರು. ಚಾಂಪಿಯನ್ ಚಿತ್ರದ ನಾಯಕ ಸಚೀನ ಪಾಟೀಲ ಮಾತನಾಡಿ ನಾನೊಬ್ಬ ಪುನೀತ ರಾಜಕುಮಾರ ಅಪ್ಪಟ್ಡ ಅಭಿಮಾನಿ ಅವರ ತತ್ವದಲ್ಲಿ ನಾನು ಹೆಜ್ಜೆ ಹಾಕುತ್ತೇನೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಪುನೀತ ಸಮಾಜಿಕ ಕೆಲಸ ಮಾಡುವ ಮೂಲಕ ಜನರ ಹೃದಯ ಗೆದ್ದವರು. ಕಡಿಮೆ ಅವಧಿಯಲ್ಲಿ ನೂರಾರು ಸಾಮಾಜಿಕ ಕೆಲಸ ಮಾಡಿ ಜನರ ಪರವಾಗಿ ಬಡವರ ದೀನ ದಲಿತರ ಧ್ವನಿಯಾಗಿ ಬದುಕಿ ಆದರ್ಶಮಯವಾದ ಜೀವನ ನಡೆಸಿದವರು ಎಂದರು.

ಸಹಕಾರಿ ದುರೀಣ ಜಗದೀಶ ಕವಟಗಿಮಠ ಮಾತನಾಡಿ. ಹುಟ್ಟು ಸಾವಿನ ಮಧ್ಯೆ ಅವರು ಮಾಡಿರುವ ಒಳ್ಳೆಯ ಕೆಲಸ ಅಜರಾಮರಾಗಿ ಉಳಿಯುತ್ತವೆ ಎಂದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರೇರಣಾ ಶಕ್ತಿ ಇರುತ್ತದೆ. ಇದು ಇಂದಿನ ಯುವಕರಿಗೆ ಶಕ್ತಿ ಪ್ರೇರಣಾಶಕ್ತಿ ಆಗಬೇಕು ಎಂದರು.

Advertisement

ದಿವ್ಯ ಸಾನಿದ್ಯ ವಹಿಸಿದ್ದ ಚಿಂಚಣಿ ಶ್ರೀ ಅಲ್ಲಮಪ್ರಭು ಸ್ವಾಮೀಜಿ. ಚರಮೂರ್ತಿಮಠದ ಸಂಪಾದನ ಸ್ವಾಮೀಜಿ.ಕಾಶಿನಾಥ ಕುರಣಿ. ಸಂಜು ಬಡಿಗೇರ.ರಮೇಶ ಕರನೂರೆ. ನಾಗೇಶ ಮಾಳಿ. ಚಂದ್ರಕಾಂತ ಹುಕ್ಕೇರಿ.ಮಹೇಶ ಭಾತೆ.ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ. ಪುರಸಭೆ ಸದಸ್ಯರಾದ ನಾಗರಾಜ ಮೇದಾರ. ವಿಶ್ವನಾಥ ಕಾಮಗೌಡ. ಸಂತೋಷ ಟವಳೆ. ಪ್ರಶಾಂತ ಕಾಳಿಂಗೆ. ಸಿದ್ದಪ್ಪ ಡಂಗೇರ. ವೀಣಾ ಕವಟಗಿಮಠ. ಅಶೋಕ ಹರಗಾಪೂರೆ. ಸಂಜಯ ಅರಗೆ. ಸತೀಶ ನೂಲಿ.ಸಾಗರ ಬಿಸ್ಕೋಪ್ಪ ಮುಂತಾದವರು ಇದ್ದರು. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next