Advertisement

ಬೆಳಗಾವಿ : ಗಣೇಶ ಮೂರ್ತಿ ಪಕ್ಕ ಇಟ್ಟಿದ್ದ ಅಪ್ಪು ಭಾವಚಿತ್ರ 10 ಸಾವಿರಕ್ಕೆ ಹರಾಜು

07:23 AM Sep 06, 2022 | Team Udayavani |

ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಗರ್ತಿ ಗ್ರಾಮದಲ್ಲಿ ಸಾರ್ವಜನಿಕ ಶ್ರೀ ಗಜಾನನ ಯುವಕ ಮಂಡಳ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಎದುರು ಇಟ್ಟಿದ್ದ ಪವರ್ ಸ್ಟಾರ್ ದಿ. ಪುನೀತ ರಾಜಕುಮಾರ ಅವರ ಭಾವಚಿತ್ರ 10,001 ರೂ.ಗೆ ಹರಾಜು ಆಗಿದೆ.

Advertisement

ಪ್ರತಿ ವರ್ಷ ಗಣೇಶ ಮೂರ್ತಿಯನ್ನು ಹೊಗರ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅದರಂತೆ ಈ ಬಾರಿಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಜತೆಗೆ ಮೂರ್ತಿ ಪಕ್ಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಭಾವಚಿತ್ರ ಇಡಲಾಗಿತ್ತು.‌

ಐದು ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಸವಾಲು ಕಾರ್ಯಕ್ರಮ ನಡೆಯಿತು. ಆಗ ಪುನೀತ್ ರಾಜಕುಮಾರ ಫೋಟೊ ಹರಾಜಿಗೆ ಹಾಕಲಾಯಿತು. ಈ ವೇಳೆ ಗ್ರಾಮದ ಬಸವರಾಜ ಕಲ್ಲಪ್ಪ ಹುಬ್ಬಳ್ಳಿ ಎಂಬವರು 10,001 ರೂ.ಗೆ ಅಪ್ಪು ಭಾವಚಿತ್ರ ಹರಾಜಿನಲ್ಲಿ ಪಡೆಯುವ ಮೂಲಕ ಪುನೀತರ ಬಗೆಗಿನ ಅಭಿಮಾನ ತೋರಿಸಿದರು.

ಸುತಗಟ್ಟಿ ಗ್ರಾಪಂ ಸದಸ್ಯ ಭೀಮಶಿ ಕಲ್ಲನಾಯ್ಕರ ಹಾಗೂ ಬಸವರಾಜ ಬಾಗಡಿ ಸವಾಲು ಕಾರ್ಯಕ್ರಮ ನಡೆಸಿಕೊಟ್ಟರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next