ಕೊರಟಗೆರೆ: ವಿಶ್ವದಾಧ್ಯಂತ ಸೇರಿದಂತೆ ರಾಜ್ಯಾದ್ಯಂತ 4 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರವು ಶತದಿನೋತ್ಸವ ಆಚರಿಸಲೆಂದು ಕೊರಟಗೆರೆಯ ಡಾ. ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಜೇಮ್ಸ್ ಚಿತ್ರವು ಶತದಿನೋತ್ಸವ ಆಚರಿಸಲೆಂದು ಅಭಿಮಾನಿಗಳು ಶುಭ ಕೋರಿದರು .
ಪಪಂ ಸದಸ್ಯ ಕೆ.ಆರ್. ಓಬಳರಾಜು ಮಾತನಾಡಿ ನಾವು ಚಿಕ್ಕಂದಿನಿಂದಲೂ ಡಾ. ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡಿ ಬೆಳೆದವರು ಅವರಂತೆಯೇ ಅವರ ಮಕ್ಕಳು ಕೂಡ ಅದರಲ್ಲಿಯೂ ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳು ಎಂದರೆ ಬಹುತೇಕ ಯುವ ಪೀಳಿಗೆಗೆ ಅಚ್ಚುಮೆಚ್ಚು ಅವರು ಮಾಡಿರುವ ಸಾಧನೆಗಳು ಅವರು ನಮ್ಮನೆಲ್ಲ ಅಗಲಿದ ನಂತರ ಜನರಿಗೆ ತಿಳಿಯುವಂತಾಯಿತು .ಅವರು ಮಾಡಿರುವ ಸಾಧನೆಗಳು ಎಲೆಮರೆಯ ಕಾಯಂತೆ ಒಲಿದ ಜನರಿಗೆ ತಿಳಿಯಲಿಲ್ಲ ಅಷ್ಟೆ ಅವರಿಗೆ ಅಭಿಮಾನಿಗಳು ಇಡೀ ದೇಶ ಸೇರಿದಂತೆ ಹೊರ ದೇಶಗಳಲ್ಲಿ ಕೂಡ ಅವರ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದಕ್ಕೆ ಅವರ ನಿಧನದ ನಂತರ ಬಹು ಕೋಟಿ ಸಂಖ್ಯೆಯಲ್ಲಿ ಅವರನ್ನು ನೋಡಲು ಬಂದ ಅಭಿಮಾನಿಗಳೇ ಸಾಕ್ಷಿ ಎಂದು ತಿಳಿಸಿದರು .
ತಾಲ್ಲೂಕು ಬಿಜೆಪಿ ಘಟಕದ ಅದ್ಯಕ್ಷ ಪವನ್ ಕುಮಾರ್ ಮಾತನಾಡಿ ಪುನೀತ್ ರಾಜ್ ಕುಮಾರ್ ಅಂದರೆ ಇಡೀ ದೇಶವೇ ತಿರುಗಿ ನೋಡುವಂತಹ ನಟ, ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು ಅವರು ಮಾಡಿರುವ ಜನ ಸೇವೆಗಳು ಅವರಿಗೆ ತಿಳಿಯದಂತೆ ಬೃಹದಾಕಾರವಾಗಿ ಬೆಳೆದಿತ್ತು ಬಡಮಕ್ಕಳ ವಿದ್ಯಾಭ್ಯಾಸ ನೇತ್ರದಾನ ರಕ್ತದಾನ ಸೇರಿದಂತೆ ಹಲವು ಬಡವರ ಸೇವೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಈ ಎಲ್ಲವೂ ಇಂದಿಗೂ ಜೀವಂತವಾಗಿ ಇರೋದೆ, ಅವರು ನಮ್ಮ ಜತೆ ಇದ್ದಂತಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ರಮೇಶ್ ಮಾತನಾಡಿ ಯಾರೇ ಅಭಿಮಾನಿಗಳು ಅವರ ಮನೆಯ ಬಳಿ ಹೋದರೆ ಅವರೂ ಬಡವರೇ ಶ್ರೀಮಂತರೇ ಎಂಬುವುದು ನೋಡುತ್ತಿರಲಿಲ್ಲ ಎಲ್ಲರೂ ನಮ್ಮ ಮನೆಯವರೇ ಎಂದು ಭಾವಿಸಿದವರು. ಅಣ್ಣಾವ್ರು ಹಾಗೂ ಅವರ ಮಕ್ಕಳು ಅದರಲ್ಲಿಯೂ ಪುನೀತ್ ಯುವಕರ ಅಚ್ಚುಮೆಚ್ಚು ಅವರು ಮಾಡಿರುವ ಸಾಧನೆಗಳನ್ನು ಇಂದಿಗೂ ಯುವಕರಿಗೆ ಸ್ಫೂರ್ತಿಯಾಗಿ ಸಂಘಟನೆಗಳ ಮುಖಾಂತರ ಜನ ಸೇವೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ರಾಜಣ್ಣ,ಪತ್ರಿಕಾ ಸಂಘದ ಅಧ್ಯಕ್ಷ ಪುರುಷೋತ್ತಮ್ ಕೆ.ವಿ.ಲೋಕೇಶ್ ,ಮಂಜುನಾಥ್ ,ರಮೇಶ್ ,ಸಾಗರ್ ,ಭಾನುಪ್ರಕಾಶ್ ಸೇರಿದಂತೆ ಇತರರು ಇದ್ದರು.