Advertisement

ಬಿಸಿಲುನಾಡಿನೊಂದಿಗೆ ಅಪ್ಪು ಅವಿನಾಭಾವ ಸಂಬಂಧ

01:41 PM Oct 30, 2021 | Team Udayavani |

ಬಳ್ಳಾರಿ: ಜೀವನದ ಪಯಣ ಮುಗಿಸಿದ ಕನ್ನಡ ಚಿತ್ರರಂಗದ ನಾಯಕನಟ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಗಣಿ/ಗಡಿನಾಡು ಬಳ್ಳಾರಿ ಜಿಲ್ಲೆಯಲ್ಲೂ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Advertisement

ತೆಲುಗು ಚಿತ್ರಗಳ ಪ್ರಭಾವ ಅಧಿಕವಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ಚಿತ್ರದ ಹಾಡೊಂದರ ಚಿತ್ರೀಕರಣ, ಹಲವು ಚಿತ್ರಗಳ ಧ್ವನಿ ಸುರುಳಿಗಳನ್ನು ಬಳ್ಳಾರಿ ನಗರದಲ್ಲೇ ಬಿಡುಗಡೆಗೊಳಿಸುವ ಮೂಲಕಪುನೀತ್‌ ರಾಜ್‌ಕುಮಾರ್‌ ಅವರು ಬಳ್ಳಾರಿ ಜನರು,ಅಭಿಮಾನಿಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು ಚಿತ್ರಗಳ ಚಿತ್ರೀಕರಣವನ್ನು ಹೊರತುಪಡಿಸಿ ಉಳಿದಂತೆ ಹಲವು ಬಾರಿ ಬಳ್ಳಾರಿಗೆ ಭೇಟಿ ನೀಡಿದ್ದರು.

ಧ್ವನಿ ಸುರುಳಿ ಬಿಡುಗಡೆ :

ಗಡಿನಾಡು ಬಳ್ಳಾರಿ ಜಿಲ್ಲೆಯಲ್ಲಿ ತೆಲುಗು ಚಿತ್ರಗಳ ಹಾವಳಿ ಹೆಚ್ಚು. ಕನ್ನಡ ಚಿತ್ರಗಳಿಗೆ ಮನ್ನಣೆ ಇತ್ತಾದರೂ, ತೆಲುಗು ಚಿತ್ರಗಳಂತೆ ಶತದಿನೋತ್ಸವ, ಅರ್ಧಶತದಿನೋತ್ಸವ ಪೂರೈಸುವಷ್ಟು ಆದರಣೆ ಇರಲಿಲ್ಲ. ಅಂಥ ಸಂದರ್ಭದಲ್ಲಿ ಬಳ್ಳಾರಿಯಲ್ಲೂ ಕನ್ನಡ ಚಿತ್ರಗಳಿಗೆ ಮನ್ನಣೆ ದೊರಕಿಸುವಲ್ಲಿ ಮತ್ತು ಸಿನಿಪ್ರಿಯರಲ್ಲಿಕನ್ನಡ ಚಿತ್ರಗಳ ಅಭಿರುಚಿ ಬೆಳೆಸುವ ಸಲುವಾಗಿ2007ರಲ್ಲಿ ತೆರೆಕಂಡ ಅತ್ಯುತ್ತಮ “ಅರಸು’ ಚಿತ್ರದ ಧ್ವನಿಸುರುಳಿಯನ್ನು ಮೊದಲ ಬಾರಿಗೆ ಬಳ್ಳಾರಿ ನಗರದಲ್ಲೇಬಿಡುಗಡೆಗೊಳಿಸಿದ್ದರು. ಈ ಮೂಲಕ ಬಳ್ಳಾರಿಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಪುನೀತ್‌ ಅವರುಸಂಪಾದಿಸಿದ್ದರು. ಇದಾದ ಬಳಿಕ 2014ರಲ್ಲಿ ತೆರೆಕಂಡಿದ್ದ”ಪವರ್‌’ ಚಿತ್ರದ ಧ್ವನಿ ಸುರುಳಿಯನ್ನು ಸಹ 2014ಜೂನ್‌ 28ರಂದು ನಗರದ ಮುನಿಸಿಪಲ್‌ ಕಾಲೇಜುಮೈದಾನದಲ್ಲಿ ಬಿಡುಗಡೆಗೊಳಿಸಿದ್ದರು. ಇದಕ್ಕಾಗಿಮೈದಾನದಲ್ಲಿ ಬೃಹತ್‌ ವೇದಿಕೆಯನ್ನು ನಿರ್ಮಿಸಿದ್ದು,ಚಿತ್ರದ ನಾಯಕ ಪುನೀತ್‌, ಸಂಗೀತ ನಿರ್ದೇಶಕ ಎಸ್‌.ಎಸ್‌.ತಮನ್‌ ಸೇರಿ ಹಲವರು ಬಳ್ಳಾರಿಗೆ ಬಂದಿದ್ದು ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ನೆರೆಹೊರೆಜಿಲ್ಲೆಗಳ ಸಾವಿರಾರು ಸಂಖ್ಯೆಗಳಲ್ಲಿ ಅಭಿಮಾನಿಗಳು ಬಂದಿದ್ದರು.

ಡಾ| ರಾಜಕುಮಾರ ಪುತ್ಥಳಿ ಅನಾವರಣಕ್ಕೆ ಆಗಮನ :

Advertisement

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತವರ (ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಜಿ.ಕರುಣಾಕರರೆಡ್ಡಿ) ಸಹೋದರರು ನಗರದ ಹೃದಯಭಾಗದಲ್ಲಿನ ಡಾ| ರಾಜ್‌ಕುಮಾರ್‌ ಉದ್ಯಾನವನದಲ್ಲಿ 2010ರಲ್ಲಿ ಪ್ರತಿಷ್ಠಾಪಿಸಿದ್ದ ಕನ್ನಡದ ಕಣ್ಮಣಿ ಡಾ| ರಾಜ್‌ಕುಮಾರ್‌ ಅವರ ಪುತ್ಥಳಿ ಅನಾವರಣಕ್ಕೆ ತಾಯಿ ಪಾರ್ವತಮ್ಮ ರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಆಗಮಿಸಿ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು. ಅಂದು ಸಂಜೆ ನಗರದ ಬಿಡಿಎಎ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ಪುನೀತ್‌ ಅವರು ಅಭಿಮಾನಿಗಳ ಕೋರಿಕೆ ಮೇರೆಗೆ ಒಂದೆರಡು ಸ್ಟಂಟ್‌, ಸ್ಟೆಪ್‌ ಹಾಕಿ ಮೆಚ್ಚಿಸಿದ್ದು ಇದು ಇದೀಗ ಸ್ಮರಣೆಯಾಗಿ ಉಳಿದಿದೆ. ಹೀಗೆ ತೆಲಗು ಚಿತ್ರಗಳ ವ್ಯಾಮೋಹವುಳ್ಳ ಬಳ್ಳಾರಿಯಲ್ಲಿ ಚಿತ್ರೀಕರಣ, ಧ್ವನಿ ಸುರುಳಿಗಳನ್ನು ಬಿಡುಗಡೆಗೊಳಿಸುವ ಮೂಲಕ ಕನ್ನಡ ಚಿತ್ರಗಳ ಅಭಿರುಚಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬಳ್ಳಾರಿ ನಗರದಲ್ಲೂ ತೆಲುಗು ಚಿತ್ರಗಳಷ್ಟೇ ಪುನೀತ್‌ ಅವರ ಚಿತ್ರಗಳು ಸಹ ಮೊದಲ ದಿನ ಬೆಳಗಿನ ಜಾವವೇ ಪ್ರದರ್ಶನ ಆರಂಭವಾಗುತ್ತಿದ್ದು, ಹಲವು ಚಿತ್ರಗಳು ಬಳ್ಳಾರಿ ನಗರದಲ್ಲಿ ಶತದಿನೋತ್ಸವ, ಅರ್ಧ ಶತದಿನೋತ್ಸವವನ್ನು ಆಚರಿಸಿಕೊಂಡಿವೆ.

 

ಹಾಡಿನ ಚಿತ್ರೀಕರಣ : ಪುನೀತ್‌ ರಾಜ್‌ಕುಮಾರ್‌ ಅವರು 2016ರಲ್ಲಿ ತೆರೆಕಂಡಿದ್ದ ಯಶಸ್ವಿ ಚಿತ್ರದ “ದೊಡ್ಡಮನೆ ಹುಡುಗ’ ಚಿತ್ರದ “ಅಭಿಮಾನಿಗಳೆ ನಮ್ಮನೆ ದೇವರು’ ಹಾಡಿನ ಒಂದೆರಡು ತುಣುಕುಗಳನ್ನು ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಚಿತ್ರೀಕರಿಸಲಾಗಿತ್ತು. ನಕ್ಷತ್ರದ ಆಕಾರದಲ್ಲಿನಿರ್ಮಿಸಿದ್ದ ಬೃಹತ್‌ ಸೆಟ್‌ನಲ್ಲಿ ಪುನೀತ್‌ ಅವರು ಅಭಿಮಾನಿಗಳೆ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿ ಸ್ಟೆಪ್ಸ್‌ ಹಾಕುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆಮಾಡಿದ್ದರು. ನೆಚ್ಚಿನ ನಟ ಪುನೀತ್‌ ಅವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿಅಭಿಮಾನಿಗಳು, ಜನರು ಆಗಮಿಸಿದ್ದು,ದೇವಸ್ಥಾನದ ಆವರಣವೇ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳಿಂದ ತುಂಬಿಕೊಂಡಿತ್ತು.

ಗಜಮಾಲೆಯಿಂದ ಸನ್ಮಾನ : ಚಿತ್ರೀಕರಣ ಪೂರ್ಣಗೊಂಡಿದ್ದರೂ ಕೋವಿಡ್‌ ಲಾಕ್‌ಡೌನ್‌ನಿಂದ ತೆರೆಕಾಣದೆ ಸ್ಥಗಿತಗೊಂಡಿದ್ದ “ಯುವರತ್ನ’ ಚಿತ್ರದಪ್ರೊಮೋಷನ್‌ಗಾಗಿ ಕಳೆದ ಮಾ. 22ರಂದುಪುನೀತ್‌ ಅವರು ಬಳ್ಳಾರಿಗೆ ಬಂದಿದ್ದರು. ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್‌ ಯುವ ಮುಖಂಡ ನಾರಾ ಭರತ್‌ ರೆಡ್ಡಿಯವರು, ಕನಕದುರ್ಗಮ್ಮದೇವಸ್ಥಾನ ಆವರಣದಲ್ಲಿ ಹಣ್ಣಿನ ಬೃಹತ್‌ ಗಾತ್ರದ ಗಜಮಾಲೆಯನ್ನು ಕ್ರೇನ್‌ ಮೂಲಕ ಹಾಕಿ ಸನ್ಮಾನಿಸಿದ್ದರು. ಆವರಣದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಅಭಿಮಾನಿಗಳು ಜನರು ಸೇರಿದ್ದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ, ಕಾರಿನಿಂದಲೇಜನರತ್ತ ಕೈಬೀಸಿ, ನಮಸ್ಕರಿಸುತ್ತಾ ಮುಂದೆಸಾಗಿದರು. ಆದರೆ ಬಿಡದ ಅಭಿಮಾನಿಗಳು ಅವರು ಬಳ್ಳಾರಿ ಗಡಿ ದಾಟುವವರೆಗೂ ಹಿಂದೆ ಬಿದ್ದು ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next