Advertisement
ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರಿಗೆ ಶಿವಣ್ಣ (ಶಿವರಾಜ್‌ಕುಮಾರ್), ರಾಘಣ್ಣ (ರಾಘವೇಂದ್ರ ರಾಜ್‌ಕುಮಾರ್) ಅವರೊಟ್ಟಿಗೆ ಸಿನಿಮಾ ಮಾಡಬೇಕು ಎಂಬ ಬಹಳ ದಿನಗಳ ಆಸೆಇತ್ತು. ಮೂವರಿಗೂ ಒಪ್ಪುವ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದರು. ಆದರೆ, ವಿಧಿಯ ಕ್ರೂರ ಆಟದಿಂದ ಅದು ಸಾಧ್ಯವಾಗಲೇ ಇಲ್ಲ.
Related Articles
Advertisement
ದಾವಣಗೆರೆ ನನ್ನ ಫೆವರೇಟ್ ಪ್ಲೇಸ್: ದಾವಣಗೆರೆ ಅಂದರೆ ಸಖತ್ ಇಷ್ಟ. ದೊಡ್ಮನೆ ಹುಡುಗ… ಚಿತ್ರ ಬಿಡುಗಡೆ ಸಂದರ್ಭದಲ್ಲಿ ದಾವಣಗೆರೆಗೆ ಬಂದಿದ್ದೆ. ಅಪ್ಪಾಜಿ (ಡಾ| ರಾಜ್‌ಕುಮಾರ್) ಯಾವಾಗಲೂದಾವಣಗೆರೆ ಬಗ್ಗೆ ಹೇಳುತ್ತಿದ್ದರು. ಅಪ್ಪಾಜಿಜೊತೆಗೂ ದಾವಣಗೆರೆ ಬಂದಿದ್ದೇನೆ ಎಂದುಪುನೀತ್ ರಾಜ್‌ಕುಮಾರ್ ಇಲ್ಲಿ ಬಂದಾಗಲೆಲ್ಲ ಸ್ಮರಿಸುತ್ತಿದ್ದರು.
ನಟಸಾರ್ವಭೌಮ… ದಾವಣಗೆರೆಯಲ್ಲಿ 25 ದಿನ ಪೂರೈಸಿದೆ. ಒಂದು ಚಿತ್ರದ ಗೆಲುವಿನ ನಂತರ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳನ್ನು ಕಂಡು ಖುಷಿ ಹಂಚಿಕೊಳ್ಳುವುದು ಬಹಳ ಸಂತೋಷದ ವಿಚಾರ. ಹಾಗಾಗಿಯೇ ಹಾವೇರಿ, ರಾಣೆಬೆನ್ನೂರುನಲ್ಲಿ ರೋಡ್ ಶೋ ಮಾಡಿ, ದಾವಣಗೆರೆಗೆ ಬಂದಿರುವುದಾಗಿ ಎಂದು ಹೇಳಿಕೊಂಡಿದ್ದರು. ಅದುವೇ ಪುನೀತ್ ರಾಜ್‌ಕುಮಾರ್‌ರವರ ದಾವಣಗೆರೆಯ ಕೊನೆಯ ಭೇಟಿ.
ಪವರ್‌ಫುಲ್ ನಟ ಪುನೀತ್ ರಾಜ್ ಕುಮಾರ್ ಇನ್ನು ನೆನಪು ಮಾತ್ರ ಎಂಬುದನ್ನ ನೆನೆಪಿಸಿಕೊಳ್ಳುವುದಕ್ಕೂ ದಾವಣಗೆರೆ ಜನರ ಒಪ್ಪದಂತಹ ವಾತಾವರಣ ನಿರ್ಮಾಣವಾಗಿದೆ.
ರೋಡ್ ಶೋ ಮೊಟಕು :
ನಟಸಾರ್ವಭೌಮ… ಚಿತ್ರ 25 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ನಟ ಪುನೀತ್ ರಾಜ್‌ಕುಮಾರ್‌ರವರ ರೋಡ್ ಶೋ ಅಭಿಮಾನಿಗಳ ವಿಪರೀತ ತಳ್ಳಾಟ-ನೂಕಾಟದ ಕಾರಣಕ್ಕೆ ಅರ್ಧಕ್ಕೆನಿಲ್ಲಿಸಬೇಕಾಯಿತು. ಅಂದು ಹೊಸ ಬಸ್ ನಿಲ್ದಾಣದಿಂದ ಮಹಾತ್ಮ ಗಾಂಧಿ ವೃತ್ತದಮೂಲಕ ನಟಸಾರ್ವಭೌಮ… ಚಿತ್ರಪ್ರದರ್ಶನಗೊಳ್ಳುತ್ತಿರುವ ಗೀತಾಂಜಲಿಚಿತ್ರಮಂದಿರದವರೆಗೆ ರೋಡ್‌ಶೋ ನಡೆಯಬೇಕಿತ್ತು. ಸಾರಿಗೆ ಬಸ್ ನಿಲ್ದಾಣದಿಂದ ಪ್ರಾರಂಭವಾದ ರೋಡ್‌ಶೋ ಅರ್ಧ ದಾರಿಗೆ ಬರುತ್ತಿದ್ದಂತೆತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದನೋಡಲು, ಹಾರ, ಶಾಲು ಹಾಕಲುಅಭಿಮಾನಿಗಳು ಒಂದೇ ಸಮನೆನುಗ್ಗಿ ಬಂದರು. ಈ ಸಂದರ್ಭದಲ್ಲಿತಳ್ಳಾಟ-ನೂಕಾಟ ಹೆಚ್ಚಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು. ಆದರೂ, ಅಭಿಮಾನಿಗಳತಳ್ಳಾಟ-ನೂಕಾಟ ಜೋರಾಗಿಯೇ ಇತ್ತು. ರೋಡ್ ಶೋ… ಅರ್ಧಕ್ಕೆ ನಿಲ್ಲಿಸಿಕಾರಿನಲ್ಲಿ ಗೀತಾಂಜಲಿ ಚಿತ್ರಮಂದಿರಕ್ಕೆ ಪುನೀತ್ ರಾಜ್‌ಕುಮಾರ್ ಬಂದುವೇದಿಕೆ ಏರಲು ಮುಂದಾದರು. ಆಗಲೂವಿಪರೀತ ತಳ್ಳಾಟ-ನೂಕಾಟ ನಡೆಯಿತು.
ಅಭಿಮಾನಿಗಳ ತಳ್ಳಾಟ-ನೂಕಾಟ ನಿಯಂತ್ರಣಕ್ಕೆ ಬರಲೇ ಇಲ್ಲ. ಲಘು ಲಾಠಿ ಪ್ರಹಾರ ನಡೆಸಿ, ಪುನೀತ್ ರಾಜ್ ಕುಮಾರ್ ಕಾರು ಏರಲಿಕ್ಕೆ ಅವಕಾಶಮಾಡಿಕೊಡಲಾಯಿತು. ಹಾಗಾಗಿಪುನೀತ್ ರಾಜ್‌ಕುಮಾರ್ ವೇದಿಕೆಗೆ ಬರದೆ ಹಾಗೆಯೇ ವಾಪಾಸ್ಸಾದರು. ಈಗ ಮತ್ತೆ ಎಂದೆಂದಿಗೂ ವಾಪಾಸ್ಸಾಗದ ಲೋಕಕ್ಕೆ ತೆರಳಿದ್ದಾರೆ.
-ರಾ. ರವಿಬಾಬು