Advertisement

ಬಂಗಾರದ ಮನುಷ್ಯನ ಹಿಂದಿನ ನೆನಪು ಮೆಲುಕು ಹಾಕಿದ ಪುನೀತ್‌ ರಾಜಕುಮಾರ್‌

10:47 AM May 11, 2020 | Suhan S |

ಕನ್ನಡ ಚಿತ್ರರಂಗದ ಎವರ್‌ ಗ್ರೀನ್‌ ಚಿತ್ರ ಬಂಗಾರದ ಮನುಷ್ಯದ ಬಗ್ಗೆ ಇಂದಿಗೂ ಅಭಿಮಾನಿಗಳು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಈಗ ನಟ ಬಂಗಾರದ ಮನುಷ್ಯನ ಮೆಲುಕು ಹಾಕಿದ ಪುನೀತ್‌ ಬಂಗಾರದ ಮನುಷ್ಯ ಚಿತ್ರ ತೆರೆಗೆ ಬಂದು ಬರೋಬ್ಬರಿ 48 ವರ್ಷಗಳಾಯಿತು. ಇದೇ ವೇಳೆ ಪುನೀತ್‌ ರಾಜಕುಮಾರ್‌ ತಮ್ಮ ಟ್ವಿಟ್ಟರ್‌ ನಲ್ಲಿ ಬಂಗಾರದ ಮನುಷ್ಯ ಚಿತ್ರದ ಮುಹೂರ್ತದ ಅಪರೂಪದ ಪೋಟೋವನ್ನು ಶೇರ್‌ ಮಾಡಿದ್ದಾರೆ.

Advertisement

ಡಾ. ರಾಜಕುಮಾರ್‌ ಅಭಿನಯಿಸುತ್ತಿರುವ ಬಂಗಾರದ ಮನುಷ್ಯ ಚಿತ್ರದ ಮೊದಲ ದೃಶ್ಯಕ್ಕೆ ಕನ್ನಡದ ಹಿರಿಯ ನಿರ್ಮಾಪಕ ಕೆ.ಸಿ.ಎನ್‌ ಗೌಡ ಕ್ಲಾಪ್‌ ಮಾಡುತ್ತಿರುವ ಈ ಪೋಟೋ ದಶಕಗಳ ಹಿಂದಿನ ಕಥೆಯನ್ನು ತೆರೆದಿಡುವಂತಿದೆ. ಅಂದಹಾಗೆ, ಮಾರ್ಚ್‌ 31, 1972 ರಲ್ಲಿ ಬಿಡುಗಡೆಯಾದ ಬಂಗಾರದ ಮನುಷ್ಯ ಅಂದಿನ ಕಾಲಕ್ಕೆ ಅನೇಕ ದಾಖಲೆಗಳನ್ನು ಬರೆದಿತ್ತು. ಇನ್ನು ಪುನೀತ್‌ ರಾಜಕುಮಾರ್‌

ಶೇರ್‌ ಮಾಡಿರುವ ಈ ಪೋಟೋಗೆ ದಶಕಗಳ ಹಿಂದಿನ ಕಥೆಯನ್ನು ಮೆಲುಕು ಹಾಕುವಂತಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಂಗಾರದ ಮನುಷ್ಯ ಚಿತ್ರವನ್ನು ಸಾಕಷ್ಟು ಜನ ಬದಲಾಗಿದ್ದರು. ಅನೇಕರು ಆ ಚಿತ್ರ ನೋಡಿ ತಮ್ಮೂರಿಗೆ ಹೋಗಿ ಕೃಷಿಯಲ್ಲಿ ತೊಡಗಿದ್ದರು. ಈಗ ಆ ಚಿತ್ರದ ಮೊದಲ ದೃಶ್ಯವನ್ನು ಪುನೀತ್‌ ಶೇರ್‌ ಮಾಡಿಕೊಂಡಿದ್ದಾರೆ.

ಇನ್ನು, ಲಾಕ್‌ ಡೌನ್‌ನಲ್ಲಿ ಮನೆಯಲ್ಲೇ ಇದ್ದಾರೆ. ಸಾಮಾನ್ಯವಾಗಿ ಕ್ಲೀನ್‌ ಶೇವ್‌ ಮಾಡಿರುವ ಪುನೀತ್‌ ಅವರ ಈ ಗಡ್ಡ ಬಿಟ್ಟಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು, ಅದರಲ್ಲೂ ಪುನೀತ್‌ ಅವರ ಅಭಿಮಾನಿಗಳು ಈ ಫೋಟೋ ಬಗ್ಗೆ ತುಂಬಾ ಚರ್ಚೆ ಮಾಡಿ, ಕಾಮೆಂಟ್‌ ಹಾಕಿದ್ದರು. ಮುಖ್ಯವಾಗಿ ಕೆಲವು  ಅಭಿಮಾನಿಗಳು, ನಿಮಗೆ ಗಡ್ಡ ಸೂಟ್‌ ಆಗೋದಿಲ್ಲ. ನೀವು ಶೇವ್‌ ಮಾಡಿದರೇನೇ ಚೆಂದ ಎನ್ನುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next