Advertisement

ವೈರಲ್ ಆಗುತ್ತಿದೆ ಪುನೀತ್ ರಾಜ್ ಕುಮಾರ್ ವಿಡಿಯೋ

04:17 PM Nov 15, 2021 | Team Udayavani |

ಪುನೀತ್‌ ರಾಜ್‌ಕುಮಾರ್‌ ನಮ್ಮೊಂದಿಗಿಲ್ಲ. ಆದರೆ, ಅವರ ನೆನಪು ಸದಾ ಜೀವಂತ. ಸದ್ಯ ಪುನೀತ್‌ ರಾಜ್‌ಕುಮಾರ್‌ ಅವರ ವಿಡಿಯೋಗಳು ವೈರಲ್‌ ಆಗುತ್ತಿವೆ. ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾತನಾಡಿರುವ ಶುಭಕೋರಿರುವ ವಿಡಿಯೋಗಳು ವೈರಲ್‌ ಆಗುತ್ತಿವೆ.

Advertisement

ಇದನ್ನೂ ಓದಿ:ಅಬ್ಬರಿಸಲು ‘ಮದಗಜ’ ರೆಡಿ: ಹಿಟ್‌ ಲಿಸ್ಟ್‌ ಗೆ ಟೈಟಲ್‌ ಟ್ರ್ಯಾಕ್‌

ಕೆಲ ದಿನಗಳ ಹಿಂದಷ್ಟೇ ದೀಪಾವಳಿಗೆ ಪುನೀತ್‌ ಶುಭ ಕೋರಿರುವ ವಿಡಿಯೋ ವೈರಲ್‌ ಆಗಿತ್ತು. ಈಗ ಮಕ್ಕಳ ದಿನಾಚರಣೆಗೆ ಅಪ್ಪು ವಿಶ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋ ನೋಡಿದವರ ಕಣ್ಣಂಚು ಒದ್ದೆಯಾಗುತ್ತಿದೆ.

ಪುನೀತ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾಮಿಲಿ ಆಡಿಯನ್ಸ್‌ ಇದ್ದರು. ಅದರಲ್ಲೂ ಮಕ್ಕಳು ಪುನೀತ್‌ ಅವರನ್ನು ತುಂಬಾ ಇಷ್ಟಪಡುತ್ತಿದ್ದರು. ಈಗ ತಮ್ಮ ಇಷ್ಟದ ನಟ ಇಲ್ಲ ಎಂಬ ಕೊರಗು ಮಕ್ಕಳಲ್ಲೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next