Advertisement

ಪುಣೆ ತುಳುಕೂಟ : ಸೂಪರ್‌ 7 ಬಾಕ್ಸ್‌  ಕ್ರಿಕೆಟ್‌ ಪಂದ್ಯಕ್ಕೆ ಚಾಲನೆ

12:03 PM Apr 03, 2018 | Team Udayavani |

ಪುಣೆ: ತುಳುಕೂಟ ಪುಣೆ ಇದರ ಯುವ ವಿಭಾಗ ವತಿಯಿಂದ  ಸೂಪರ್‌  ಸೆವೆನ್‌ ಬಾಕ್ಸ್‌ ಕ್ರಿಕೆಟ್‌ ಪಂದ್ಯಾವಳಿಯು ಎ.  1 ರಂದು  ಸೆಂಟ್ರಲ್‌ ಮಾಲ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆಗೊಂಡಿತು.

Advertisement

ಪುಣೆ  ತುಳುಕೂಟದ ಅಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು  ತೆಂಗಿನಕಾಯಿ ಒಡೆದು ಪೂಜೆ  ಸಲ್ಲಿಸಿ ಬ್ಯಾಟ್‌ ಬೀಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಪುಣೆ ತುಳುಕೂಟದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಕಲ್ಲಾಡಿ, ಗೌರವ ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಶೆಟ್ಟಿ, ಯುವ ವಿಭಾಗದ ಕಾರ್ಯದರ್ಶಿ  ಭಾಗೆಶ್‌ ಶೆಟ್ಟಿ, ಸುಮಿತ್‌ ಶೆಟ್ಟಿ  ಮತ್ತು ಸದಸ್ಯರು ಉಪಸ್ಥಿತರಿದ್ದರು.ಅಲ್ಲದೆ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ  ನಯನಾ ಸಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಕಾರ್ಯಕಾರಿ ಸಮಿತಿಯ  ಸದಸ್ಯೆಯರುಗಳಾದ  ಶಶಿಕಲಾ ಎ. ಶೆಟ್ಟಿ, ರಮಾ ಶೆಟ್ಟಿ, ಸಮಾಜ ಸೇವಕಿ  ಗೀತಾ ಬಿ. ಶೆಟ್ಟಿ ಮತ್ತು ಮಹಿಳಾ ವಿಭಾಗದ ಇತರ ಸದಸ್ಯೆಯರು, ಆಟಗಾರರು ಉಪಸ್ಥಿತರಿದ್ದರು.

ಸುಮಾರು 31 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಸತತ ದ್ವಿತೀಯ ವರ್ಷ  ಈ ಮೆಗಾ ಕ್ರಿಕೆಟ್‌ ಹಬ್ಬ ಸೂಪರ್‌-7 ಎನ್ನುವ ಹೊಸ ಆವೃತ್ತಿಯ ಈ ಪಂದ್ಯಾಟದಲ್ಲಿ ಆಡುವ ಪ್ರತೀ ತಂಡದಲ್ಲಿ 7 ಆಟಗಾರರಿದ್ದು, ಇದರಲ್ಲಿ 4 ಹುಡುಗರು ಹಾಗೂ 3 ಹುಡುಗಿಯರು  ಆಡಲು ಅನುಮತಿ ನೀಡಲಾಗಿದೆ. ಪಂದ್ಯಾಟದಲ್ಲಿ ಕ್ರೀಡಾಭಿಮಾನಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next