Advertisement

ಗರ್ಭಕೋಶ ಕಸಿಗೆ ಪುಣೆ ಸಜ್ಜು  

03:45 AM Apr 23, 2017 | Team Udayavani |

ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಮೂರೇ ವಾರಗಳಲ್ಲಿ ಗರ್ಭಕೋಶ ಕಸಿಯನ್ನು ಯಶಸ್ವಿಯಾಗಿ ಪೂರೈಸುವ ಭಾರತದ ಕನಸು ನನಸಾಗಲಿದೆ.

Advertisement

ಅಷ್ಟೇ ಅಲ್ಲ, ತಮ್ಮದೇ ತಾಯಂದಿರ ಗರ್ಭಗಳನ್ನು ತಮ್ಮ ಶರೀರದೊಳಗೆ ಅಳವಡಿ ಸಲು ಅವಕಾಶ ಕೊಟ್ಟ ಮೂವರು ಮಹಿಳೆ ಯರ ಕರುಳ  ಕುಡಿಗಳನ್ನು ಪಡೆವ ಆಸೆಯೂ ನೆರವೇರಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಗರ್ಭಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲು ಪುಣೆ ಆಸ್ಪತ್ರೆ ಸಜ್ಜಾಗಿದೆ. ವಿವಿಧ ಆರೋಗ್ಯ ಸಮಸ್ಯೆಯಿಂದ ಗರ್ಭಾಶಯವನ್ನು ಕಳೆದುಕೊಂಡ ಮೂವರು ಮಹಿಳೆಯರಿಗೆ ವೈದ್ಯರು ಗರ್ಭಕೋಶದ ಕಸಿ ಮಾಡಲಿದ್ದಾರೆ. ಮೂವರಿಗೂ ತಮ್ಮ ತಮ್ಮ ಅಮ್ಮಂದಿರ ಗರ್ಭಗಳನ್ನು ಜೋಡಿಸಲಾಗುತ್ತದೆ. 

ಈವರೆಗೆ ಜಗತ್ತಿನಾದ್ಯಂತ ಇಂಥ 25 ಶಸ್ತ್ರ ಚಿಕಿತ್ಸೆಗಳು ನಡೆದಿದ್ದು, ಈ ಪೈಕಿ 10ಕ್ಕೂ ಕಡಿಮೆ ಸಂಖ್ಯೆಯವು ಯಶಸ್ವಿಯಾಗಿ, ಮಹಿಳೆ ಗರ್ಭ ಧರಿಸಲು ಸಾಧ್ಯವಾಗಿದೆ. ಮೇ 13, 14ರಂದು ಪುಣೆಯಲ್ಲೂ ಇಂಥ ಪ್ರಯತ್ನ ನಡೆಯಲಿದೆ. “2014ರಲ್ಲಿ ಸ್ವೀಡನ್‌ನಲ್ಲಾದ ಕಸಿಯ ಯಶಸ್ಸು ನಮಗೆ ಸ್ಫೂರ್ತಿ ನೀಡಿದೆ. ಹಾಗಾಗಿ, ಈ ಸವಾಲನ್ನು ಸ್ವೀಕರಿಸಿ ದ್ದೇವೆ. ಸ್ವೀಡನ್‌ಗೆ ಹೋಗಿ ಅಲ್ಲಿನ ವೈದ್ಯರ ತಂಡದ ಜತೆ ಸಮಾಲೋಚನೆಯನ್ನೂ ನಡೆಸಿ ದ್ದೇವೆ,’ ಎಂದಿದ್ದಾರೆ ಜಿಸಿಎಲ್‌ಐ ವೈದ್ಯಕೀಯ ನಿರ್ದೇಶಕ ಶೈಲೇಶ್‌ ಪುಂಟಂಬೇಕರ್‌.

ಇತ್ತೀಚೆಗೆ ಬೆಂಗಳೂರಿನ ಮಿಲನ್‌ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟ್ರೈನಿಂಗ್‌ ಆ್ಯಂಡ್‌ ರಿಸರ್ಚ್‌ ಇನ್‌ ರಿಪ್ರೊಡಕ್ಟಿವ್‌ ಹೆಲ್ತ್‌ ಸಂಸ್ಥೆಗೂ ಗರ್ಭಕೋಶ ಕಸಿಗೆ ಅನುಮತಿ ದೊರೆತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next