Advertisement

ಪುಣೆ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರ:ಯಕ್ಷಗಾನ ಪ್ರದರ್ಶನ

02:13 PM Jul 17, 2018 | |

ಪುಣೆ: ಕನ್ನಡ ಮರಾಠಿ ಸ್ನೇಹವರ್ಧನ ಕೇಂದ್ರ ಪುಣೆಯಲ್ಲಿ ಭಾಷಾ ಬಾಂಧವ್ಯ ಬೆಸೆಯುವ ಸಂಸ್ಥೆಯಾಗಿದ್ದು,  37 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಸ್ಥಾಪನೆ ಮಾಡುವಾಗ ಕೃ. ಶಿ. ಹೆಗಡೆಯವರೊಂದಿಗೆ ನಾನೂ ಸ್ಥಾಪಕ ಸದಸ್ಯನಾಗಿ¨ªೆ ಎನ್ನುವ ಸಂತೋಷ ಆಗುತ್ತಿದೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳೂ ಕರುಳಿನ ಬಾಂಧವ್ಯವನ್ನು ಹೊಂದಿದೆ. ಕೇವಲ ರಾಜಕೀಯ ವ್ಯಕ್ತಿಗಳು ಈ ಸಂಬಂಧವನ್ನು ಹಾಳುಗೆಡಹಲು ಪ್ರಯತ್ನಪಟ್ಟರೂ ಇಂತಹ ಸಂಸ್ಥೆಗಳಿಂದ ಎರಡೂ ಭಾಷೆಗಳ ನಡುವೆ ಸ್ನೇಹಹಸ್ತವನ್ನು ಚಾಚಿ ಭಾಷಾಪ್ರೇಮ ಬೆಳೆಸುತ್ತಿರುವುದು ನಿಜವಾಗಿಯೂ ಅಭಿನಂದನೀಯವಾಗಿದೆ. ಕೇಂದ್ರದ ಇಂತಹ  ಸದುದ್ದೇಶದ ಕಾರ್ಯಕ್ಕೆ ನಾವೆಲ್ಲರೂ ಪೋ›ತ್ಸಾಹ ನೀಡಬೇಕಾಗಿದೆ ಎಂದು ಪುಣೆ ಶ್ರೀ  ಗುರುದೇವಾ ಸೇವಾ ಬಳಗದ ಅಧ್ಯಕ್ಷ, ಉದ್ಯಮಿ ಸದಾನಂದ ಕೆ. ಶೆಟ್ಟಿ ಅವರು ಅಭಿಪ್ರಾಯಪಟ್ಟರು.

Advertisement

ಪುಣೆ ಕನ್ನಡ ಸಂಘದ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರ ಆಯೋಜಿ ಸಿದ ಶ್ರೀ ಅಯ್ಯಪ್ಪ ಸ್ವಾಮಿ  ಯಕ್ಷಗಾನ ಮಂಡಳಿ ಪುಣೆ ಕಲಾವಿದರಿಂದ ನಡೆದ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶ ನದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ,  ಮಹಾರಾಷ್ಟ್ರದಲ್ಲಿ ಪ್ರಸಿದ್ಧಿಪಡೆದ ಪಂಡಿತ್‌ ಭೀಮ್‌ ಸೇನ್‌ ಜೋಶಿ, ಬಾಲಗಂಧರ್ವರಂತಹ ಮಹಾನ್‌  ಕಲಾವಿ ದರಲ್ಲದೆ ಶ್ರೇಷ್ಠ ಕವಿಗಳು ಕರ್ನಾಟಕದಿಂ ದ ಬಂದವರಾಗಿದ್ದು,  ಭಾಷಾ ಸೇತುವೆಗಾಗಿ ಮಹತ್ತರ ವಾದ ಕಾರ್ಯವನ್ನು ಮಾಡಿ¨ªಾರೆ. ನಾವು ಭಾಷಾ ವೈಷಮ್ಯವನ್ನು ಬಿಟ್ಟು   ನಮ್ಮ ಭಾಷೆಯೊಂದಿಗೆ ಎÇÉಾ ಭಾಷೆಗಳನ್ನೂ ಪ್ರೀತಿಸಬೇಕಾಗಿದೆ. ಇದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ಯಕ್ಷಗಾನದಂತಹ ಕಲೆಯನ್ನು ಪ್ರೋತ್ಸಾಹಿಸುವ ಸಂಘದ ಕಾರ್ಯ ಅಭಿನಂದನೀಯವಾಗಿದೆ ಎಂದರು.

ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿ ಅವರು ಮಾತನಾಡಿ,  ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರವು ಕೃ. ಶಿ. ಹೆಗಡೆಯವರ ನೇತೃತ್ವದಲ್ಲಿ ಭಾಷಾ ಸಾಮರಸ್ಯ ಬೆಳೆಸುವಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಇಂದು ಯಕ್ಷಗಾನದಂತಹ ಕಲೆಯನ್ನು ಆಸ್ವಾದಿಸುವ ಕಾರ್ಯಕ್ರಮ ಆಯೋಜಿಸಿದ್ದು ತುಂಬಾ ಆನಂದವಾಗಿದೆೆ. ನಿಮ್ಮ ಗೌರವಕ್ಕೆ ಋಣಿಯಾಗಿದ್ದು ಭವಿಷ್ಯದಲ್ಲಿ ನಿಮ್ಮ ಕಾರ್ಯ ಕ್ಕೆ ಋಣಸಂದಾಯ ಮಾಡಲಿದ್ದೇನೆ ಎಂದರು.

ಸಂತ ಸಾಯಿ ಆಂಗ್ಲ ಮಾಧ್ಯಮ ಶಾಲಾ ಪ್ರಾಚಾರ್ಯರಾದ ಶಿವಲಿಂಗ ಢವಳೇಶ್ವರ ಮಾತನಾಡಿ, ಕನ್ನಡಿಗರು ಇಂದು ಎÇÉಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿ¨ªಾರೆ. ಅದೇ ರೀತಿ ಕನ್ನಡ ಮರಾಠಿ ಭಾಷಿಕರನ್ನು ಒಗ್ಗೂಡಿಸುವ ಕಾರ್ಯವನ್ನು ಕೃ. ಶಿ. ಹೆಗಡೆಯವರು ಮಾಡುತ್ತಿ ರುವುದು ಅಭಿನಂದನೀಯ ಎಂದರು.

ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಅಧ್ಯಕ್ಷರಾದ ನಾರಾಯಣ ಕೆ. ಶೆಟ್ಟಿ ಮಾತನಾಡಿ,  ನಾವು ಪುಣೆಯನ್ನು ಕರ್ಮ ಭೂಮಿಯ ನ್ನಾಗಿಸಿಕೊಂಡು ಮರಾಠಿ ಬಂಧುಗಳ ಸ್ನೇಹ ಸಂಪಾ ದಿಸಿಕೊಂಡು ವ್ಯವಹಾರಗಳನ್ನು ನಡೆಸಿಕೊಂಡು ಬಂದಿರುತ್ತೇವೆ. ಮರಾಠಿ ಬಾಂಧವ ರನ್ನೂ ಸ್ನೇಹಿಸಿ ಬಂಧುತ್ವವನ್ನು ಬೆಳೆಸುವ ಪುಣೆಯ ಈ ಸಂಸ್ಥೆ ಕಲಾಪ್ರಕಾರಗಳನ್ನೂ ಪರಿಚಯಿಸುವ ಕಾರ್ಯ  ಮಾಡುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಭಾಷೆಯೊಂದಿಗೆ ಎÇÉಾ ಭಾಷೆಗಳನ್ನು ಪ್ರೀತಿಸುವ ಗುಣ ನಮ್ಮಲ್ಲಿರಬೇಕು ಎಂದರು.

Advertisement

ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌ ಮಾತನಾಡಿ ತಾಯಿಯೊಬ್ಬಳು ತನ್ನ ಮಕ್ಕಳನ್ನು ಪ್ರೀತಿಯಿಂದ ಸಾಕುವಂತೆಯೇ ಇತರ ಮಕ್ಕಳನ್ನೂ ಪ್ರೀತಿಸುವ ಗುಣ ಬಲು ದೊಡ್ಡ ದಾಗಿದೆ. ಇದೇ ರೀತಿ  ಕೃ. ಶಿ. ಹೆಗಡೆಯವರ ಕನ್ನಡ ಮರಾಠಿ ಪ್ರೀತಿ ಬೆಸುಗೆಯ ಕಾರ್ಯ ಅಭಿನಂದನೀಯವಾಗಿದೆ. ವಿಶೇಷವಾಗಿ ಕನ್ನಡ ಭಾಷೆಯನ್ನೂ ಸಮೃದ್ಧಿಗೊಳಿಸುವ, ಜ್ಞಾನ, ನೀತಿ, ಧರ್ಮದ ಬೇರುಗಳನ್ನು ಗಟ್ಟಿಗೊಳಿಸುವ ಯಕ್ಷಗಾನವನ್ನು ಆಯೋಜಿಸಿ ಕೇಂದ್ರ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು. ಪುಣೆಯ ಉದ್ಯಮಿ ಡಾ| ಬಾಲಾಜಿತ್‌ ಶೆಟ್ಟಿ ಮಾತನಾಡಿ, ಬಹಳಷ್ಟು ವರ್ಷಗಳಿಂದ ಸ್ನೇಹವರ್ಧನ ಕೇಂದ್ರದ ಬಗ್ಗೆ ತಿಳಿದುಕೊಂಡಿದ್ದೇನೆ. ಮರಾಠಿಯವರಿಗೆ ಕನ್ನಡ, ಕನ್ನಡದವರಿಗೆ ಮರಾಠಿ ಕಲಿಸುವ ಕಾರ್ಯ ಆಗುತ್ತಿರುವುದು ಸಂಸ್ಥೆಯ ಸದುದ್ದೇಶದ ಉತ್ತಮ ಕಾರ್ಯ ಎಂದರು.

ವೇದಿಕೆಯಲ್ಲಿ ಪುಣೆ ತುಳುಕೂಟದ ಅಧ್ಯಕ್ಷ ತಾರನಾಥ ಕೆ. ರೈ ಮೇಗಿನಗುತ್ತು, ನಿವೃತ್ತ ಪೊ›.  ಹಾಗೂ ಸಂಶೋಧಕರಾದ ಡಾ|  ಎಂ. ವಿ. ಹೆಗ ಡೆ, ಸಮಾಜಸೇವಕಿ ಲತಾ ಹಿರೇಮಠ, ಸಮಾ ಜ ಸೇವಕ ಧನಂಜಯ್‌ ಕುಡತರ್ಕರ್‌, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಅಧ್ಯಕ್ಷ ಹಾಗೂ ಕೇಂದ್ರದ ವಿಶ್ವಸ್ಥರಾದ ವಿಶ್ವನಾಥ ಶೆಟ್ಟಿ ಪಾಂಗಾಳ, ಚಂದ್ರಕಾಂತ ಹಾರಕೂಡೆ, ಹೆರ್ಲೆಕರ್‌ ಉಪಸ್ಥಿತರಿದ್ದರು. ಜಗನ್ನಾಥ ಶೆಟ್ಟಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ ಹಾಗೂ ಪುಷ್ಪಗುತ್ಛವನ್ನಿತ್ತು ಸಮ್ಮಾನಿಸಲಾಯಿತು.   ಪಾಂಗಾಳ ವಿಶ್ವನಾಥ ಶೆಟ್ಟಿ ಸ್ವಾಗತಿಸಿ  ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಧ್ಯೇಯೋದ್ದೇಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಹಾರಕೂಡೆ ವಂದಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಗೂ ಕರಾವಳಿಯ ನಾಮಾಂಕಿತ ಕಲಾವಿದರ ಸಮ್ಮಿಲ ನದೊಂದಿಗೆ ಶ್ರೀನಿವಾಸ ಕಲ್ಯಾಣ  ಯಕ್ಷಗಾನ ಪ್ರದರ್ಶನವು  ಕಲಾರಸಿಕರನ್ನು ರಂಜಿಸಿತು. 

ಕಳೆದ 37 ವರ್ಷಗಳ ಹಿಂದೆ ಭಾಷಾ ಸೇತುವೆಯಾಗಿ ಉದ್ಭವಿಸಿದ್ದ ಈ ಸಂಸ್ಥೆ ನಿರೀಕ್ಷಿಸಿದಷ್ಟು ಬೆಳೆಸಲು ಸಾಧ್ಯವಾಗಿಲ್ಲ ಎಂಬ ಕೊರಗು ನಮ್ಮಲ್ಲಿದ್ದರೂ ಇನ್ನಷ್ಟು ಬೆಳೆಸಲು ಪ್ರಯತ್ನಶೀಲರಾಗಿದ್ದೇವೆ. ಭಾಷೆ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಗಳ ತಳಹದಿಯಲ್ಲಿ ಕನ್ನಡ ಮತ್ತು ಮರಾಠಿಗರನ್ನು ಒಂದೇ ವೇದಿಕೆಗೆ ತರುವುದೇ ಕೇಂದ್ರದ ಉದ್ದೇಶವಾಗಿದೆ. ಎÇÉಾ ಭಾಷಿಕರನ್ನು ಪ್ರೀತಿಯಿಂದ, ಬೆಸುಗೆಯಿಂದ ಜೋಡಿಸುವ ವಿಶಾಲ ದೃಷ್ಟಿಕೋನದದಿಂದ ಕೇಂದ್ರ ಕಾರ್ಯವೆಸಗುತ್ತದೆ. ಇಂದು ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿ ಎÇÉಾ ಸಾಧಕರನ್ನು ಒಂದೇ ವೇದಿಕೆಯಲ್ಲಿ ಕಾಣುವಂತಾದುದು ನಮ್ಮ ಸೌಭಾಗ್ಯ ವಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬೆಳೆಸಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ.
– ಕೃ. ಶಿ. ಹೆಗಡೆ 
ಗೌರವ ಪ್ರಧಾನ ಕಾರ್ಯದರ್ಶಿ : ಪುಣೆ ಮರಾಠಿ  -ಕನ್ನಡ ಸ್ನೇಹವರ್ಧನ ಕೇಂದ್ರ

ಕನ್ನಡ ಮತ್ತು ಮರಾಠಿ ಭಾಷೆಗಳೆರಡೂ ಅಕ್ಕತಂಗಿಯರಿದ್ದಂತೆ. ಪುಣೆಯ ಈ ಕೇಂದ್ರ ಎರಡೂ ಭಾಷೆಗಳ ನಡುವೆ ಕಲೆ, ಸಾಂಸ್ಕೃತಿಕ ಬಂಧುತ್ವವನ್ನು  ಬೆಸೆಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದಲು ಸ್ವಂತ ಕಚೇರಿ ಅಥವಾ ಕಟ್ಟಡ ಅಗತ್ಯವಿದ್ದು ಈ ನಿಟ್ಟಿನಲ್ಲಿ  ಸಂಸ್ಥೆ ಉತ್ತಮ ಆಶಯದೊಂದಿಗೆ ಇಂದು ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದ್ದು, ನಾವೆಲ್ಲರೂ ಪ್ರೋತ್ಸಾಹ ತುಂಬುವ ಕಾರ್ಯ ಮಾಡಬೇಕಾಗಿದೆ. ಪುಣೆಯಲ್ಲಿರುವ ಎÇÉಾ ಕನ್ನಡಿಗರೂ ಒಗ್ಗಟ್ಟಾಗುವ ಅಗತ್ಯತೆಯಿದ್ದು ಸಂಘಟನೆಗೆ ಇದರಿಂದ ಶಕ್ತಿ ಬರಲಿದೆ
– ಸಂತೋಷ್‌ ಶೆಟ್ಟಿ 
ಅಧ್ಯಕ್ಷರು : ಪುಣೆ ಬಂಟರ ಸಂಘ
ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು
 

Advertisement

Udayavani is now on Telegram. Click here to join our channel and stay updated with the latest news.

Next