ಪುಣೆ: ಕೋವಿಡ್ 19 ಭೀತಿಯಿಂದ ಪಾರಾಗಲು ದಿನನಿತ್ಯ ಪರದಾಟ ನಡೆಸುತ್ತಿದ್ದೇವೆ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಒಂದನ್ನು ಹಾಕಿ ಹೋದರೆ ಮಾತ್ರ ತುಸು ನೆಮ್ಮದಿ ಹಾಗೂ ಸುರಕ್ಷಿತವಾದ ನಿಟ್ಟಿಸಿರು ಬಿಡುತ್ತೇವೆ. ನಾನಾ ತರದ ಮಾಸ್ಕ್ ಗಳನ್ನು ನೋಡಿದ್ದೇವೆ ಇಲ್ಲೊಬ್ಬ ವ್ಯಕ್ತಿ ಚಿನ್ನದಿಂದ ಮಾಡಿದ ಮಾಸ್ಕ್ ಧರಿಸಿ ಗಮನ ಸೆಳೆದಿದ್ದಾನೆ.!
ಮಾಸ್ಕ್ ಧರಿಸಿದರೆ ವೈರಸ್ ನಮ್ಮಿಂದ ದೂರ ಉಳಿಯುತ್ತದೆ ಎನ್ನುವ ನಂಬಿಕೆಯಿಂದ ಅಥವಾ ನಮ್ಮ ಸುರಕ್ಷಿತದ ಹಿತದೃಷ್ಟಿಯಿಂದ ಮಾಸ್ಕ್ ಧರಿಸುತ್ತೇವೆ. ಪುಣೆಯ ಪಿಂಪ್ರಿ- ಚಿಂಚ್ವಾಡ್ ಪ್ರದೇಶದ ಶಂಕರ್ ಕುರಾಡೆ ಎನ್ನುವ ವ್ಯಕ್ತಿ ಕೋವಿಡ್ ನಿಂದ ಸುರಕ್ಷಿರಾಗಿರಲು ಚಿನ್ನದ ಮಾಸ್ಕ್ ಧರಿಸಿದ್ದಾರೆ.
ತಾನೇ ತಯಾರಿಸಿದ ಮಾಸ್ಕ್ ಗೆ 2.89 ಲಕ್ಷ ರೂಪಾಯಿ ಖರ್ಚಾಗಿದ್ದು, ಚಿನ್ನದ ಮಾಸ್ಕ್ ತೆಳುವಾಗಿದೆ.ಜೊತೆಗೆ ಉಸಿರಾಟದ ಸಹಾಯಕ್ಕೆ ಎರಡು ರಂಧ್ರಗಳಿವೆ. ಇದು ಕೋವಿಡ್ ನಿಂದ ರಕ್ಷಣೆ ಪಡೆಯಲು ಎಷ್ಟು ಪರಿಣಾಮಕಾರಿ ಆಗುತ್ತದೆ ಎಂದು ಶಂಕರ್ ಖಚಿತ ಪಡಿಸಿಲ್ಲ. ಇವರ ಗೋಲ್ಡ್ ಮಾಸ್ಕ್ ಪೋಟೋಗಳು ವೈರಲ್ ಆಗಿದೆ.
ಭಾರತದಲ್ಲಿ ಇದುವರೆಗೆ 6 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿರು ಇದ್ದು,18 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪುಣೆಯಲ್ಲಿ ಇದುವರೆಗೆ 6 ಸಾವಿರ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರಲ್ಲಿ 274 ಕ್ಕೂ ಹೆಚ್ಚು ಸಾವು ನೋವುಗಳಾಗಿವೆ.