Advertisement
ಕೋಟಿ ಚೆನ್ನಯ ಮಿತ್ರವರ್ಗವು ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದ್ದು, ವರ್ಷದ ತಮ್ಮ ಕಾರ್ಯಕ್ರಮಗಳಲ್ಲಿ ಜಮೆಯಾದ ನಿಧಿಯಲ್ಲಿ ತುಳು ಕನ್ನಡಿಗರಿಗೆ ಸಹಾಯವಾಗುವಂತಹ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಸಮಾಜ ಸೇವೆ, ವೈದ್ಯಕೀಯ ಸೇವೆಗೆ ನೀಡಿ ಸಹಕರಿಸಲಾಗುತ್ತಿದೆ. ಕೋಟಿ ಚೆನ್ನಯರ ಜನ್ಮ ಪಡೆದ ಪದುಮಲೆ ಗೆಜ್ಜೆಗಿರಿ ನಂದನವನ ಜೀರ್ಣೋದ್ಧಾರಕ್ಕಾಗಿ ಸುಮಾರು 35 ಸಾವಿರ ರೂ.ಗಳ ದೇಣಿಗೆಯನ್ನು ನೀಡಲಾಗಿದೆ.
ಕೋಟಿ ಚೆನ್ನಯ ಗ್ರೂಪ್ ವತಿಯಿಂದ ಮೂರನೇ ವರ್ಷದ ಕೋಟಿ ಚೆನ್ನಯ ಟ್ರೋಪಿ -2019 ಕ್ರಿಕೆಟ್ ಪಂದ್ಯಾಟವು ತಿಲಕ್ ರೋಡ್‌ನ ಎಸ್. ಪಿ. ಕಾಲೇಜಿನ ಮೈದಾನದಲ್ಲಿ ಮಾ. 7ರಂದು ಬೆಳಗ್ಗೆ 7.30ರಿಂದ ಜರಗಲಿದೆ. ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿಗರಿಗಾಗಿ ಪಂದ್ಯಾಟವನ್ನು ಆಯೋಜಿಸಲಾಗಿದೆ.
Related Articles
Advertisement