Advertisement

ಹತ್ತು ಕೆಜಿ ಚಿನ್ನ ಧರಿಸುತ್ತಿದ್ದ “ಗೋಲ್ಡ್ ಮ್ಯಾನ್”ಖ್ಯಾತಿಯ ಸಾಮ್ರಾಟ್ ಇನ್ನಿಲ್ಲ

08:30 AM May 10, 2020 | Nagendra Trasi |

ಮುಂಬೈ:“ಗೋಲ್ಡ್ ಮ್ಯಾನ್” ಎಂದೇ ಜೀವಿತಾವಧಿಯಲ್ಲಿ ಖ್ಯಾತಿಯಾಗಿದ್ದ ಮಹಾರಾಷ್ಟ್ರದ ಉದ್ಯಮಿ ಸಾಮ್ರಾಟ್ ಮೊಜೆ(39ವರ್ಷ) ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

Advertisement

ಮೊಜೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಅಗಲಿದ್ದಾರೆ. ಪುಣೆಯ ಸಂಗಮ್ ವಾಡಿ ಪ್ರದೇಶದ ನಿವಾಸಿಯಾಗಿದ್ದ ಸಾಮ್ರಾಟ್ ಹತ್ತು ಕೆಜಿ ಚಿನ್ನವನ್ನು ಧರಿಸಿಕೊಳ್ಳುವ ಮೂಲಕ ಗೋಲ್ಡ್ ಮ್ಯಾನ್ ಎಂದೇ ಜನಪ್ರಿಯರಾಗಿದ್ದರು.

ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪುಣೆಯ ಯರವಾಡದ ಬಳಿ ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಸಾಮ್ರಾಟ್ ಮೊಜೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ತನ್ನ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ ಎಂದು ಆರೋಪಿಸಿ ಸಾಮ್ರಾಟ್ ಇತ್ತೀಚೆಗೆ ಪುಣೆ ಪೊಲೀಸರಿಗೆ ದೂರು ನೀಡಿದ್ದನ್ನು ನೆನಪಿಸಿಕೊಳ್ಳಬಹುದು.

ಮಹಾರಾಷ್ಟ್ರದಲ್ಲಿ ಗೋಲ್ಡ್ ಮ್ಯಾನ್ ಎಂದೇ ಜನಪ್ರಿಯರಾಗಿದ್ದ ಎಂಎನ್ ಎಸ್ ಶಾಸಕ ರಮೇಶ್ ವಂಜಾಲೆ (45) 2011ರ ಜೂನ್ ನಲ್ಲಿ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು. ನಂತರ 2016ರ ಜುಲೈನಲ್ಲಿ ಉದ್ಯಮಿ, ಚಿನ್ನದ ಅಂಗಿಯನ್ನು ಖರೀದಿಸಿದ್ದ ದತ್ತಾತ್ರೇಯ ಫುಗೆ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next