Advertisement

ಪುಣೆ ದೇವಾಡಿಗ ಸಂಘದ ಅರಸಿನ ಕುಂಕುಮ

01:39 PM Feb 05, 2019 | Team Udayavani |

ಪುಣೆ: ದೇವಾಡಿಗ ಸಂಘ ಪುಣೆ ಮತ್ತು  ಇದರ ಮಹಿಳಾ ವಿಭಾಗವು ಜಂಟಿಯಾಗಿ  ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಅರಸಿನ ಕುಂಕುಮ ಕಾರ್ಯಕ್ರಮವು ಜ.26ರಂದು ಹೊಟೇಲ್‌ ಪಿಕಾಕ್‌, ತಿಲಕ್‌ ರೋಡ್‌, ಸ್ವಾಗೇìಟ್‌ ಪುಣೆ ಇಲ್ಲಿ ಅಪರಾಹ್ನ 3.30ರಿಂದ ಮೊದಲ್ಗೊಂಡು  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಸಂಘದ ಮಹಿಳಾ ವಿಭಾಗದ ಪ್ರಮುಖರಾದ ಗುಲಾಬಿ ದೇವಾಡಿಗ, ಇಂದಿರಾ ದೇವಾಡಿಗ, ಸುನಿತಾ ದೇವಾಡಿಗ ಗೀತಾ ದೇವಾಡಿಗ ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಈ ಶುಭ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುನಿತಾ ವಿ. ದೇವಾಡಿಗ ಪ್ರಾರ್ಥನೆಗೈದರು. ಸಮಾಜದ ಮಹಿಳಾ ಸದಸ್ಯೆಯರಿಂದ ಪೂಜೆ ನೆರವೇರಿತು. ಅನಂತರ  ಅರಸಿನ ಕುಂಕುಮ, ಸಿಹಿ ನೀಡಿ ಪರಸ್ಪರ ಶುಭ ಹಾರೈಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಸಮಾಜದ ಮುತ್ತೈದೆಯರು ಅರಸಿನ ಕುಂಕುಮ ಸ್ವೀಕರಿಸಿ ಧನ್ಯರಾದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಪ್ರಮುಖರಾದ ಶಶಿಕಾಂತಿ. ಎನ್‌. ದೇವಾಡಿಗ ಮಾತನಾಡಿ, ಜನವರಿ ತಿಂಗಳ ಶುಭ ದಿನವಾದ 14ನೇ ತಾರೀಕಿನಂದು ಬರುವ ಮಕರ ಸಂಕ್ರಮಣದಿಂದ  ಅನಂತರದ ರಥ ಸಪ್ತಮಿಯವರೆಗೆ ಒಂದು ಮಾಸ  ಕಾಲ ಈ ಶುಭ ಕಾರ್ಯಕ್ರಮ ಅರಸಿನ  ಕುಂಕುಮ ಆಚರಿಸುವುದು ವಿಶೇಷ ಪರ್ವ ದಿನಗಳಾಗಿರುತ್ತದೆ. ಅದರಂತೆ ಪುಣೆಯ ನಮ್ಮ ದೇವಾಡಿಗ ಸಂಘವು ಕೂಡಾ  ಮಹಿಳೆಯರಿಗಾಗಿ ವರ್ಷಂಪ್ರತಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಇದು ನಮ್ಮ ಮಹಿಳೆಯರಿಗೆ ಹೆಮ್ಮೆ ತರುವಂತಹದು. ಅರಸಿನ ಕುಂಕುಮ ಎಂದರೆ ಅದು ಮುತ್ತೈದೆಯರಿಗೆ ಶುಭದ ಸಂಕೇತ. ಯಾವುದೇ ಅರಸಿನ ಕುಂಕುಮ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ಮುತ್ತೆ$çದೆಯರು ನಿರಾಕರಿಸದೆ ಪಾಲ್ಗೊಳ್ಳಬೇಕು. ಅಂತೆಯೇ ಅಲ್ಲಿ ಅವರು ನೀಡಿದಂತಹ ಕಾಣಿಕೆಗಳನ್ನು ಅತಿಥ್ಯವನ್ನು ತುಲನೆ ಮಾಡದೆ  ಸ್ವೀಕರಿಸಿ ಮನಃತೃಪ್ತಿಯಿಂದ ತಮ್ಮ ಬಾಳಿಗೆ ಹಾಗೂ ಇತರರ ಬಾಳಿಗೆ ಶುಭ ಕೋರಿದಾಗ ಅದರ ಪುಣ್ಯದ ಫಲ ಪ್ರಾಪ್ತಿಯಾಗುತ್ತದೆ. ಅರಸಿನ ಕುಂಕುಮ ಎಂದರೆ ಅದು ಭಾರತಿಯ ಸಂಸ್ಕೃತಿಯಲ್ಲಿ ನಾರಿಯರ ಶುಭದ ಸಂಕೇತವೂ ಹೌದು ಎಂದರು.

ವಿಜಯಲಕ್ಷ್ಮೀ ಅವರು ಅರಸಿನ ಕುಂಕುಮದ ವಿಶೇಷತೆಯ ಬಗ್ಗೆ  ತಿಳಿಸಿದರು. ವಿನೋದಾ ಸುಧಾಕರ ದೇವಾಡಿಗ ಸೇರಿದ ಎಲ್ಲ ಬಾಂಧವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪುಣೆ ದೇವಾಡಿಗ ಸಂಘದ ಅಧ್ಯಕ್ಷರಾದ ನಾರಾಯಣ ದೇವಾಡಿಗ, ಗೌರವ ಅಧ್ಯಕ್ಷರಾದ ಎ.ಬಿ ಶೇರಿಗಾರ್‌ ಮತ್ತು ಸಲಹೆಗಾರರಾದ ನರಸಿಂಹ ದೇವಾಡಿಗ ಮತ್ತು ಪದಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.   ಹೆಚ್ಚಿನ ಸಂಖ್ಯೆಯ  ಸಮಾಜದ ಮಹಿಳಾ  ಭಾಂದವರು  ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಿಯಾ ಎಚ್‌.ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅನಂತರ ಲಘು ಉಪಹಾರ ನಡೆಯಿತು. 

Advertisement

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ 

Advertisement

Udayavani is now on Telegram. Click here to join our channel and stay updated with the latest news.

Next