Advertisement

ಪುಣೆ ದೇವಾಡಿಗ ಸಂಘದ ವಾರ್ಷಿಕೋತ್ಸವದಲ್ಲಿ  ಸಾಧಕರಿಗೆ ಸಮ್ಮಾನ

03:34 PM Mar 01, 2019 | |

ಪುಣೆ: ಪುಣೆ ದೇವಾಡಿಗ ಸಂಘದ 7ನೇ ವಾರ್ಷಿಕೋತ್ಸವವು ಫೆ. 24ರಂದು ಪುಣೆಯ ಶ್ಯಾಮ್‌ ರಾವ್‌ ಕಲ್ಮಾಡಿ ಕನ್ನಡ ಹೈಸ್ಕೂಲ್‌ ಸಭಾ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು

Advertisement

ಈ ಸಂದರ್ಭದಲ್ಲಿ  ಶಿಥಿಲಾ ವಸ್ಥೆಯಲ್ಲಿದ್ದ ಬಾಕೂìರು ಶ್ರೀ ಏಕನಾಥೇಶ್ವರಿ ದೇವಸ್ಥಾನವನ್ನು ತಮ್ಮ ಮುಂದಾಳತ್ವದಲ್ಲಿ ಸಮಾಜ ಬಾಂಧವರ  ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಿ ಸಮಾಜಕ್ಕೆ ಅರ್ಪಿಸಿದ  ದೇವಸ್ಥಾನದ ಮ್ಯಾನೇಜಿಂಗ್‌ ಟ್ರಸ್ಟಿ  ಅಣ್ಣಯ್ಯ ಶೇರಿಗಾರ ಅವರನ್ನು  ಪುಣೆ ದೇವಾಡಿಗ ಸಂಘದ ವತಿಯಿಂದ  ದೇವಾಡಿಗ ಶ್ರೇಷ್ಠ ಬಂಧು  ಬಿರುದು ನೀಡಿ ಸಮ್ಮಾನಿಸಲಾಯಿತು.

ಉಡುಪಿ ಜಿÇÉಾ ಪಂಚಾಯತ್‌ ಸದಸ್ಯೆಯಾಗಿದ್ದುಕೊಂಡು ಬಡ ಜನರ ಸೇವೆಯಲ್ಲಿ  ತಮ್ಮನ್ನು ತೊಡಗಿಸಿಕೊಂಡ ಗೌರಿ ಅಕ್ಕ ಎಂದೇ ಎಲ್ಲರಿಂದಲೂ ಕರೆಸಿಕೊಳ್ಳುತ್ತಿರುವ   ಗೌರಿ ದೇವಾಡಿಗ ಅವರನ್ನು ದೇವಾಡಿಗ ಯಶಸ್ವಿ ಮಹಿಳೆ ಬಿರುದನ್ನು ಪ್ರದಾನಿಸಿ ಸಮ್ಮಾನಿಸಲಾಯಿತು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುಣೆ 

ಬಂಟರ ಸಂಘದ ಅಧ್ಯಕ್ಷ ರಾಗಿದ್ದುಕೊಂಡು ಪುಣೆಯಲ್ಲಿ ಬಂಟರ ಭವನ ನಿರ್ಮಾಣದ ರೂವಾರಿ, ಸಮಾರಂಭದ  ಮುಖ್ಯ  ಅತಿಥಿ ಸಂತೋಷ್‌ ಶೆಟ್ಟಿ ಮತ್ತು ಸಮಾಜ ಸೇವಕ ಪಂಚಮಿ ಟ್ರಸ್ಟ್‌ ಸ್ಥಾಪಕ ಪುರಂದರ  ಪೂಜಾರಿ ಅವರನ್ನು  ಅಧ್ಯಕ್ಷರಾದ ನಾರಾಯಣ ದೇವಾಡಿಗ, ಸ್ಥಾಪಕ ಅಧ್ಯಕ್ಷ ಪ್ರಭಾಕರ ದೇವಾಡಿಗ ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಪ್ರಿಯಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಘದ  ಗೌರವಾಧ್ಯಕ್ಷರಾದ ಅಣ್ಣಯ್ಯ ಶೇರಿಗಾರ್‌ ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ನಾರಾಯಣ  ದೇವಾಡಿಗ  ಅಧ್ಯಕ್ಷತೆ ಯಲ್ಲಿ ಜರಗಿದ ಈ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು, ವಸಂತ್‌ ದೇವಾಡಿಗ ಕರಾಡ್‌, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಪುರಂದರ ಪೂಜಾರಿ, ಉಡುಪಿ ಜಿÇÉಾ ಪಂಚಾಯತ್‌ ಸದಸ್ಯೆ ಗೌರಿ ದೇವಾಡಿಗ, ಸಂಘದ ಮುಖ್ಯ ಸಲಹೆಗಾರ ನರಸಿಂಹ ದೇವಾಡಿಗ, ಸ್ಥಾಪಕ ಅಧ್ಯಕ್ಷ ಪ್ರಭಾಕರ ದೇವಾಡಿಗ ಉಪಾಧ್ಯಕ್ಷ ಮಹಾಬಲೇಶ್ವರ ದೇವಾಡಿಗ   ಅವರು ಉಪಸ್ಥಿತರಿದ್ದರು.

Advertisement

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next