Advertisement

ಪುಣೆ ದೇವಾಡಿಗ ಸಂಘದ ವಾರ್ಷಿಕೋತ್ಸವ ಸಮಾರಂಭ

04:00 PM Feb 21, 2017 | Team Udayavani |

ಪುಣೆ: ಪುಣೆ ದೇವಾಡಿಗ ಸಂಘ ಕೇವಲ 5 ವರ್ಷಗಳಲ್ಲಿ ಸಮಾಜದವರನ್ನು ಒಗ್ಗೂಡಿಸಿ ಕೊಂಡು ಮಾಡುತ್ತಿರುವ ದಾರ್ಶನಿಕ ಸಮಾಜಮುಖೀ ಕಾರ್ಯಕ್ರಮಗಳು ಅಭಿನಂದನೀಯ. ಸಂಘಟನೆ ಯನ್ನು ಕಟ್ಟುವಾಗ ಋಣಾತ್ಮಕ ಚಿಂತನೆ  ಮಾಡದೆ ಬಹಳ ಉತ್ಸಾಹದಿಂದ ತೊಡಗಿಕೊಳ್ಳಬೇಕು. ಇದರಿಂದ ಸಂಘಟನೆ ಯಶೋಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ.  ನಮ್ಮ ಸಮಾಜ ಐಕ್ಯತೆಯಿಂದ ಒಮ್ಮನಸ್ಸಿನಿಂದ  ಸಂಘಟನಾತ್ಮಕ ಶಕ್ತಿಯೊಂದಿಗೆ ಗುರುತಿಸಿಕೊಂಡು ಮುನ್ನಡೆದರೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ಅಭಿಪ್ರಾಯಪಟ್ಟರು.

Advertisement

ನಗರದ ಕನ್ನಡ ಸಂಘದ ಶಕುಂತಲಾ ಜಗನ್ನಾಥ ಶೆಟ್ಟಿ ಸಭಾ ಭವನದಲ್ಲಿ ದೇವಾಡಿಗ ಸಂಘ ಪುಣೆ ಇದರ ಐದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,  ಅನ್ಯ ಸಮಾಜದ ಬಾಂಧವರು ಯಾವುದೇ ವೈಮನಸ್ಸನ್ನು ಬೆಳೆಸಿಕೊಳ್ಳದೆ ಒಗ್ಗಟ್ಟಿನೊಂದಿಗೆ ಸಂಘದ ಮೂಲಕ ಸಮಾಜದ ಪ್ರಗತಿಯಲ್ಲಿ ಕಾರಣರಾಗಿ ಮಾದರಿಯಾಗಿದ್ದಾರೆ. ಇದೇ ರೀತಿ ನಾವುಗಳು ಕುಂದಾಪುರ, ಮಂಗಳೂರು ತುಳು- ಕನ್ನಡ ಭಾಷೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳದೆ ಒಂದೇ ಸಂಘಟನೆಯಲ್ಲಿ ತೊಡಗಿಸಿಕೊಂಡು ನಮ್ಮ ಸಮಾಜವನ್ನು ಬಲಿಷ್ಠಗೊಳಿಸಬೇಕಾಗಿದೆ.  ಅದೇ ರೀತಿ ತುಳುಭಾಷೆ, ನಮ್ಮ ಭವ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದ ಹಿತಚಿಂತನೆಯೊಂದಿಗೆ ನಮ್ಮ ಸಂಘಟನೆಗಳು ತೊಡಗಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಂತಾಗಲಿ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ದುಬೈಯ ಎಲಿಗೆಂಟ್‌ ಗ್ರೂಪ್‌ ಕಂಪೆನಿಯ ಆಡಳಿತ ನಿರ್ದೇಶಕರಾದ ದಿನೇಶ್‌ ಸಿ. ದೇವಾಡಿಗ ಮಾತನಾಡಿ,  ನಮ್ಮೊಳಗೆ ಭೇದ ಭಾವವಿಲ್ಲದೆ ಸಮಾಜದೊಂದಿಗೆ ಎಲ್ಲರೂ ಏಕತೆಯಿಂದಿದ್ದೇವೆ. ಭಾಷಾ ಸಮಸ್ಯೆಯಿದ್ದರೂ ನಿಧಾನವಾಗಿ ಸರಿಹೋಗುತ್ತದೆ ಎಂಬ  ಭಾವನೆ ನನ್ನದು. ಪುಣೆ ದೇವಾಡಿಗ ಸಂಘ ಉತ್ತಮ  ಕಾರ್ಯ ಮಾಡುತ್ತಿದ್ದು ಸಂಘದ ಯಶಸ್ಸಿಗಾಗಿ  ಸಿದ್ಧ ಎಂದರು. 

ನವಿಮುಂಬಯಿ ದೇವಾಡಿಗ ಸಂಘದ ಮಾಜಿ  ಕಾರ್ಯಾಧ್ಯಕ್ಷ ಪಿ. ವಿ .ಎಸ್‌. ಮೊಲಿ ಅವರು ಮಾತನಾಡಿ, ಸಂಘದೊಂದಿಗೆ ಸಮಾಜ ಬಾಂಧವರೆಲ್ಲರೂ ಕೈಜೋಡಿಸಿದರೆ ಸಂಘಟನೆ ಶಕ್ತಿಯುತವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಸಚಿನ್‌ ಕೆ. ದೇವಾಡಿಗ ಮಾತನಾಡಿ, ನಮ್ಮ ಸಂಘದ 5  ವಾರ್ಷಿಕೋತ್ಸವ ಇಂದಿನ ಅತಿಥಿ ಗಣ್ಯರ, ಸಂಘದ ಪದಾಧಿಕಾರಿಗಳ, ಸಮಾಜ ಬಾಂಧವರೆಲ್ಲರ  ಸಹಕಾರದಿಂದ ಅಂದವಾಗಿ ನೆರವೇರಿರುವುದಕ್ಕೆ ಎಲ್ಲರಿಗೂ ಕೃತಜ್ಞತೆಗಳು. ಸಂಘದೊಂದಿಗೆ ಎಲ್ಲರೂ ನಮ್ಮದೇ ಸಂಘವೆಂಬ ಅಭಿಮಾನದಿಂದ ಸಹಕಾರ ನೀಡಿ ಮುಂದೆಯೂ ಸಹಕರಿಸಬೇಕು. ಸ್ವಂತ ಜಾಗ ಹೊಂದುವ ಸಂಘದ ಕನಸು ನನಸಾಗಲು ಎಲ್ಲರೂ ಸಹಕರಿಸಬೇಕು ಎಂದರು.

Advertisement

ಸಂಘದ ಗೌರವಾಧ್ಯಕ್ಷ ಅಣ್ಣಯ್ಯ ಬಿ.  ಶೇರಿಗಾರ್‌ ಮಾತನಾಡಿ, ಸಾಮೂಹಿಕ ನಾಯಕತ್ವದಲ್ಲಿ ಸಂಘವು ಮುನ್ನಡೆದರೆ ಅಭಿವೃದ್ಧಿ ಸಾಧ್ಯ. ಏಕನಾಥೇಶ್ವರಿ  ದೇವಸ್ಥಾನದ ನಿರ್ಮಾಣದಲ್ಲಿ ಸಹಕರಿಸಿ ಎಂದರು.  ವೇದಿಕೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ. ದೇವಾಡಿಗ, ಮುಖ್ಯ ಸಲಹೆಗಾರ ನರಸಿಂಹ ದೇವಾಡಿಗ, ಉಪಾಧ್ಯಕ್ಷರುಗಳಾದ  ಕೃಷ್ಣ ಕಲ್ಯಾಣು³ರ, ಮಹಾಬಲೇಶ್ವರ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಿಯಾ ಎಚ್‌. ದೇವಾಡಿಗ, ಕೋಶಾಧಿಕಾರಿ ಸುರೇಶ ಶ್ರೀಯಾನ್‌  ಉಪಸ್ಥಿತರಿದ್ದರು.

ಅತಿಥಿಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುನೀತಾ ವಿ. ದೇವಾಡಿಗ, ಸುಜಾತಾ ಎನ್‌. ದೇವಾಡಿಗ, ಲತಾ ಆರ್‌.  ದೇವಾಡಿಗ, ಸುಜಾತಾ  ಎನ್‌. ದೇವಾಡಿಗ ಪ್ರಾರ್ಥಿಸಿದರು. ಯಶವಂತ್‌ ದೇವಾಡಿಗ, ಗೀತಾ ಎಸ್‌.  ದೇವಾಡಿಗ, ಪುರಂದರ ದೇವಾಡಿಗ, ಅಮಿತ್‌ ದೇವಾಡಿಗ, ವಿಠಲ್‌ ದೇವಾಡಿಗ, ಸುರೇಶ ದೇವಾಡಿಗ, ಸುನಿತಾ ದೇವಾಡಿಗ, ಲತಾ ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು.

ಅತಿಥಿಗಳನ್ನು  ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ಮಹಾಬಲೇಶ್ವರ  ದೇವಾಡಿಗ ಸ್ವಾಗತಿಸಿದರು. ಶಶಿಕಾಂತಿ ದೇವಾಡಿಗ ಮತ್ತು ಯಶವಂತ್‌ ಜಿ. ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್‌ ದೇವಾಡಿಗ ವಂದಿಸಿದರು. ಸುಧಾಕರ ಜಿ. ದೇವಾಡಿಗ, ನವೀನ್‌  ದೇವಾಡಿಗ, ನಾರಾಯಣ ದೇವಾಡಿಗ, ಜಗದೀಶ್‌ ದೇವಾಡಿಗ, ಉದಯ ದೇವಾಡಿಗ, ಪ್ರೀತಮ್‌ ದೇವಾಡಿಗ, ವಾಮನ ದೇವಾಡಿಗ, ಸತೀಶ್‌ ದೇವಾಡಿಗ ಮತ್ತು ವಸಂತಿ ದೇವಾಡಿಗ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಘದ ಸದಸ್ಯರಿಂದ  ವಿನೋದಾವಳಿಗಳು, ಭಾವನಾ ಡಾನ್ಸ್‌ ಸ್ಟುಡಿಯೋ ವಿಶ್ರಾಂತವಾಡಿ ಪುಣೆ ಇವರಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ನಡೆದವು.

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next