ಪುಣೆ: ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಚಾಕುವಿನಿಂದ ಇರಿದು ಕೊಂದ ಆಘಾತಕಾರಿ ಘಟನೆ ವಾಘೋಲಿ ಪರಿಸರದಲ್ಲಿ ಸಂಭವಿಸಿದ್ದು, ಈ ಪ್ರಕರಣದಲ್ಲಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಅನುಜಾ ಮಹೇಶ್ ಪಾನಾಲೆ (21) ಮತ್ತು ಮೃತ ಯುವಕನನ್ನು ಯಶವಂತ ಮಹೇಶ್ ಮುಂಡೆ (22) ಎಂದು ಗುರುತಿಸಲಾಗಿದೆ.
ಇಬ್ಬರೂ ವಾಘೋಲಿಯ ರೈಸೋನಿ ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾಗಿದ್ದರು. ಯಶವಂತ್ ಮತ್ತು ಅನುಜಾ ಕಳೆದ ಒಂದು ವರ್ಷದಿಂದ ಪರಿಚಿತರು. ಆದರೆ, ಯಶವಂತ್ ಆಕೆಗೆ ಹಲವು ಬಾರಿ ಕಿರುಕುಳ ನೀಡುತ್ತಿದ್ದ. ಆಕೆಯ ಬಗ್ಗೆ ನಿರಂತರ ಸಂಶಯ ಪಡುತ್ತಿದ್ದ. ಈ ಕಾರಣಕ್ಕಾಗಿ ಇಬ್ಬರು ನಿರಂತರ ಜಗಳವಾಡುತ್ತಿದ್ದರು ಎನ್ನಲಾಗಿದೆ.
ರವಿವಾರ ಅನುಜಾ ಯಶವಂತ್ ಇದ್ದ ಹಾಸ್ಟೆಲ್‌ಗೆ ಓದಲು ಹೋಗಿದ್ದಳು. ಸೋಮವಾರ ಬೆಳಗ್ಗೆ ಅದೇ ಸ್ಥಳದಲ್ಲಿ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ. ಆ ಜಗಳದಲ್ಲಿ ಅನುಜಾ ತರಕಾರಿ ಕಟ್ಟರ್‌ನಿಂದ ಯಶವಂತ್ ಎದೆ ಮತ್ತು ಹೊಟ್ಟೆಗೆ ಇರಿದಿದ್ದಾಳೆ. ಈ ದಾಳಿಯಲ್ಲಿ ಯಶವಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶವಂತ್ ಹತ್ಯೆಯ ನಂತರ ಅನುಜಾ ತನ್ನ ಕೈಯ ನರ ಕತ್ತರಿಸಿಕೊಂಡಳು. ಗಾಬರಿಯಿಂದ ಹೊರಗೆ ಬಂದು ಹಾಸ್ಟೆಲ್‌ನ ಬೆಂಚಿನ ಮೇಲೆ ಕುಳಿತ್ತಿದ್ದಳು.
Related Articles
ಅನುಜಾ ಕೈ ತುಂಬಾ ರಕ್ತಸ್ರಾವವಾಗುವುದನ್ನು ನೋಡಿದ ಹಾಸ್ಟೆಲ್ ಯುವಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾಳೆ. ಯಶವಂತ್‌ನ ಹತ್ಯೆ ಹಾಸ್ಟೆಲ್‌ನಲ್ಲಿ ಸಂಚಲನ ಮೂಡಿಸಿತ್ತು. ಬಳಿಕ ಲೋಣಿಕಂದ ಪೊಲೀಸರು ಸ್ಥಳಕ್ಕೆ ಧಾವಿಸಿ ಯಶವಂತ್ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅನುಜಾ ಅವರನ್ನು ಬಂಧಿಸಿದ್ದಾರೆ. ಆಕೆಯನ್ನು ವಿಚಾರಣೆ ನಡೆಸಿದಾಗ ಆತನ ನಿರಂತರ ಸಂಶಯಕ್ಕೆ ಮಾನಸಿಕ ರೋಸಿಹೋಗಿ ಯಶವಂತ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: Mumbai ಮಾಡೆಲ್ ಮೇಲೆ ಅತ್ಯಾಚಾರ; ಮತಾಂತರಕ್ಕೆ ಒತ್ತಾಯ