Advertisement

ಪುಣೆ ಉದ್ಯಮಿ ನಾರಾಯಣ ಶೆಟ್ಟಿ ದಂಪತಿಗೆ ಅಭಿನಂದನ ಕಾರ್ಯಕ್ರಮ

11:17 AM Jun 20, 2017 | |

ಪುಣೆ: ನಗರದ ಫಿಲಿಪ್ಸ್‌ ಕಂಪೆನಿಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಡಪ್ಸರ್‌ ನಿವಾಸಿ  ಮೂಲತಃ ಕೆಲೆಂಜಾರ್‌ ಅಗರಿ ಮನೆಯವರಾದ ನಾರಾಯಣ ಶೆಟ್ಟಿ ಮತ್ತು ಮೂಲತಃ ಮಿಜಾರು ಕಾಂಬೆಟ್ಟು  ವಿಜಯಲಕ್ಷ್ಮೀ ಶೆಟ್ಟಿ ದಂಪತಿಯ ವೈವಾಹಿಕ ಜೀವನ  ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಅಭಿನಂದನ ಕಾರ್ಯಕ್ರಮ  ಜೂ.  14ರಂದು  ಪುಣೆಯಲೇಡಿಸ್‌  ಕ್ಲಬ್‌ನ  ಪಾರ್ಟಿ ಹಾಲ್‌ನಲ್ಲಿ  ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಸಂದರ್ಭದಲ್ಲಿ ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದವು. ಅನಂತರ ಲೇಡೀಸ್‌  ಕ್ಲಬ್‌ನಲ್ಲಿ ಸಂಜೆ ನಡೆದ ಸುವರ್ಣ ಸಂಭ್ರಮ ಅಭಿನಂದನ ಕಾರ್ಯಕ್ರಮವನ್ನು ನಾರಾಯಣ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಶೆಟ್ಟಿ ದಂಪತಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಾರಾಯಣ ಶೆಟ್ಟಿ ಅವರ  ಪುತ್ರ  ರವಿಂದ್ರ ಶೆಟ್ಟಿ ಅವರು ನಿರ್ಮಿಸಿದ 30 ನಿಮಿಷಗಳ ನಾರಾಯಣ ಶೆಟ್ಟಿ ಮತ್ತು ವಿಜಯಲಕ್ಷ್ಮೀ ದಂಪತಿಯ ಸಿದ್ಧಿ-ಸಾಧನೆಗಳನ್ನೊಳಗೊಂಡ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಮಕ್ಕಳಾದ ಸುಧಾ ನಾರಾಯಣ ಶೆಟ್ಟಿ, ರವಿಂದ್ರ ಎನ್‌. ಶೆಟ್ಟಿ,  ರೂಪಾಲಿ ಸತೀಶ್‌ ರೈ, ಅಳಿಯಂದಿರಾದ  ಪುಣೆಯ ಉದ್ಯಮಿ ಸಾಯಿ ಫ್ಯಾಶನ್‌ನ ಮಾಲಕ ನಾರಾಯಣ  ಕೆ. ಶೆಟ್ಟಿ ಮತ್ತು ಉದ್ಯಮಿ ಕಾವೇರಿ ಕ್ಯಾಟರರ್ಸ್‌ನ ಮಾಲಕ ಸತೀಶ್‌  ರೈ ಕಲ್ಲಂಗಳಗುತ್ತು, ಸೊಸೆ ರೇಷ್ಮಾ ಅರ್‌. ಶೆಟ್ಟಿ, ಮೊಮ್ಮಕ್ಕಳಾದ ಸ್ನೇಹಲ್‌ ಎನ್‌. ಶೆಟ್ಟಿ, ನಿಖೀಲ್‌ ಎನ್‌. ಶೆಟ್ಟಿ, ಶೌರ್ಯಾ ಆರ್‌. ಶೆಟ್ಟಿ. ಅನನ್ಯಾ ಅರ್‌. ಶೆಟ್ಟಿ, ವ್ರಿಶಾಂಕ್‌ ಎಸ್‌. ರೈ, ವೃದ್ಧಿ ಎಸ್‌. ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾರಾಯಣ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಶೆಟ್ಟಿ ದಂಪತಿಯನ್ನು ಬಂಧು ಬಳಗದವರು, ಹಿತೈಷಿಗಳು, ಮಿತ್ರರು, ಪುಣೆಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು   ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಭಿನಂದಿಸಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ನಾರಾಯಣ ಶೆಟ್ಟಿ, ಸತೀಶ್‌  ರೈ ಮತ್ತು ರವಿಂದ್ರ ಶೆಟ್ಟಿ ಅವರು ಆಯೋಜಿಸಿದ್ದರು. ಪುಣೆ  ಗುರುದೇವ ಸೇವಾ ಬಳಗ ಮತ್ತು ಬಂಟ್ಸ್‌ ಅಸೋಸಿಯೇಶನ್‌  ಪುಣೆ ಇದರ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next