ಪುಣೆ: ನಮ್ಮ ನೇತೃತ್ವದ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದ ದಿನದಿಂದಲೂ ನಾನೂ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳೂ, ಮಹಿಳಾ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿ, ಯುವ ವಿಭಾಗ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಪುಣೆ ಬಂಟರ ಭವನದ ಕನಸನ್ನು ನನಸಾಗಿಸಲು ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅವಿರತವಾಗಿ ಹಗಲಿರುಳು ಶ್ರಮಿಸಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ಇಲ್ಲಿ ಪ್ರತಿಯೊಂದು ವಿಭಾಗದ ನಿರ್ಮಾಣ ಕಾರ್ಯವು ನಡೆಯುತ್ತಾ ಬಂದಿದ್ದು ಇದೀಗ ಅಂತಿಮ ಘಟ್ಟವನ್ನು ತಲಪಿದ್ದು
ವಿದ್ಯುತ್ ಸಂಪರ್ಕ, ಸಭಾಂಗಣ, ಚಾವಡಿ, ಡೈನಿಂಗ್ ಹಾಲ್, ಕೊಠಡಿಗಳು, ಲಿಫ್ಟ್, ಎಸಿ ಸಂಪರ್ಕ, ಮಿನಿ ಸಭಾಗೃಹಗಳ ಕೆಲಸಗಳೂ ಸೇರಿದಂತೆ ಸುಸೂತ್ರವಾಗಿ ಪರಿಪೂರ್ಣತೆಯತ್ತ ಸಾಗುತ್ತಿದೆ. ಅಂತೆಯೇ ಪುಣೆ, ಮುಂಬಯಿ, ಊರಲ್ಲಿ ಭವನದ ಕಾರ್ಯಕ್ಕೆ ದೇಣಿಗೆಗಾಗಿ ಸಂಪರ್ಕಿಸಿದಾಗ ಹೃದಯವಂತ ಮಹಾದಾನಿ
ಗಳ ಆರ್ಥಿಕ ಸಹಕಾರದ ನೆರವಿನಿಂದ ಭವನದನಿರ್ಮಾಣ ಸಾಧ್ಯವಾಗಿದ್ದು ಅವರೆಲ್ಲರಿಗೂ ನಾವು ಋಣಿಯಾಗಿದ್ದೇವೆ. ಸಮಾಜದ ಕೆಲಸದೇವರ ಕಾರ್ಯವೆಂದು ನಂಬಿ ನಿಸ್ವಾರ್ಥ ಭಾವದಿಂದ ಸಂಘಟಿತವಾಗಿ ಪ್ರಯತ್ನಶೀಲರಾಗಿರುವುದಕ್ಕೆ ಸಂದ ಪ್ರತಿಫಲವೇ ಪುಣೆ ಬಂಟರ ಸಂಘದಲ್ಲಿಹೊಸ ಇತಿಹಾಸ ನಿರ್ಮಿಸಲಿರುವ ಹೆಮ್ಮೆಯ ಸಾಂಸ್ಕೃತಿಕ ಭವನ ನಿರ್ಮಾಣಗೊಂಡು ಲೋಕಾರ್ಪಣೆಯ ಹೆಜ್ಜೆಯಿಡುತ್ತಿರುವುದು ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅಭಿಪ್ರಾಯಪಟ್ಟರು.
ಡಿ. 5ರಂದು ಬಾರ್ಣೇಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಂಸ್ಕೃತಿಕ ಭವನದ ಆವರಣದಲ್ಲಿ ನಡೆದ ಪುಣೆ ಬಂಟರ ಸಂಘದ 37ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ಜನವರಿ ತಿಂಗಳ ಕೊನೆಯಲ್ಲಿ ಭವನವನ್ನು ಲೋಕಾರ್ಪಣೆಗೊಳಿಸಲು ಇದೀಗಲೇ ತಯಾರಿ ಆರಂಭಿಸಲಾಗಿದ್ದು ಈ ಸಂದರ್ಭದಲ್ಲಿ ಸಂಘದ ಕಾರ್ಯಚಟುವಟಿಕೆಗಳ, ದಾನಿಗಳ ಪರಿಚಯ ಸೇರಿದಂತೆ ಅಗತ್ಯ ಮಾಹಿತಿಗಳನ್ನೊಳಗೊಂಡ ಸಂಗ್ರಹಯೋಗ್ಯ ನೆನಪಿನ ಸಂಚಿಕೆಯೊಂದನ್ನು ಹೊರ ತರುವ ಬಗ್ಗೆ ಕೆಲಸಗಳನ್ನು ಆರಂಭಿಸಲಾಗಿದೆ. ಲೋಕಾರ್ಪಣೆಯ ನಿಮಿತ್ತ ಆಮಂತ್ರಣ ಪತ್ರಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಂಘದ ಎಲ್ಲಾ ಸದಸ್ಯರುಗಳು ಈ ಕಾರ್ಯಕ್ಕೆ ಸಹಕಾರ ನೀಡಿ ಪುಣೆ ಬಂಟರ ಸಂಘದ ಇತಿಹಾಸ ದಾಖಲಾಗುವ ಕ್ಷಣಗಳನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಮೊದಲಿಗೆ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯಿತ್ತರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಮಾಧವ ಆರ್. ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್ ಜಯ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಜಿತ್ ಹೆಗ್ಡೆ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಮಂಜೂರಾತಿ ಪಡೆದುಕೊಂಡರು. ಮುಂದಿನ ವರ್ಷದಲೆಕ್ಕಪರಿಶೋಧಕರನ್ನಾಗಿ ಸಿಎ ದಯಾನಂದ ಶೆಟ್ಟಿ ಅವರನ್ನು ಸರ್ವಾನುಮತದಿಂದ ಮುಂದುವರಿಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಶ್ರೀನಿವಾಸ ಶೆಟ್ಟಿ, ಗಣೇಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಶಶಿಂದ್ರ ಶೆಟ್ಟಿ, ಪ್ರಶಾಂತ್ ಎ. ಶೆಟ್ಟಿ, ವಿವೇಕಾನಂದ ಶೆಟ್ಟಿ ಆವರ್ಸೆ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಮಿಯಾರು ರಾಜ್‌ಕುಮಾರ್ ಎಂ. ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಗಣೇಶ್ ಹೆಗ್ಡೆ, ತಾರಾನಾಥ ರೈ ಮೇಗಿನಗುತ್ತು, ವಿಶ್ವನಾಥ ಶೆಟ್ಟಿ, ಮೋಹನ್ ಶೆಟ್ಟಿ, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಸಂತೋಷ್ ಶೆಟ್ಟಿ ಅವರು ಸ್ವಾಗತಿಸಿದರು. ಅಜಿತ್ ಹೆಗ್ಡೆ ಸಭೆ ನಿರ್ವಹಿಸಿ ವಂದಿಸಿದರು.
ಚಿತ್ರ -ವರದಿ: ಕಿರಣ್ ಬಿ. ರೈ ಕರ್ನೂರು