Advertisement
ಜ. 26ರಂದು ನಗರದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ನಡೆದ ಪುಣೆ ಬಂಟರ ಸಂಘದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಂಘದ ವತಿಯಿಂದ ಪ್ರತೀ ವರ್ಷ ಸಮಾಜದ ಶ್ರೇಷ್ಠ ಸಾಧಕನನ್ನು ಗುರುತಿಸಿ ಕೊಡಮಾಡುವ ದಿ| ಗುಂಡೂರಾಜ್ ಎಂ. ಶೆಟ್ಟಿ ಅತ್ಯುತ್ತಮ ಸಮಾಜಸೇವಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ತುಳುನಾಡಿನಲ್ಲಿ 1974ರಲ್ಲಿ ಭೂಮಸೂದೆ ಜಾರಿಗೊಂಡ ಸಂದರ್ಭದಲ್ಲಿ ನಮ್ಮ ಸಮಾಜ ಬಾಂಧವರು ದಿಕ್ಕೇ ತೋಚದಂತಾಗಿದ್ದ ಕಾಲದಲ್ಲಿ ಸಮಾಜ ಬಾಂಧವರಿಗೆ ಆಸರೆಯಾಗಿ ಬಾಳಿಗೆ ಬೆಳಕು ನೀಡಿದವರು ಬಂಟ ಸಮಾಜದ ಅಭ್ಯುದಯದ ಹರಿಕಾರರಾದ ದಿ| ಮೂಲ್ಕಿ ಸುಂದರರಾಮ ಶೆಟ್ಟಿಯವರು. ಅಂತಹ ನಮ್ಮ ಸಮಾಜದ ಮಹಾನ್ ನಾಯಕನ ಬಗ್ಗೆ ಅಭಿಮಾನ ಬೆಳೆಸಿಕೊಂಡು ಅವರ ಸ್ಮರಣೀಯ ಕಾರ್ಯಕ್ಕೆ ನೆರವಾಗುವುದು ನನ್ನ ಆದ್ಯ ಕರ್ತವ್ಯವೆಂದು ಮನಗಂಡು ಮೂಲ್ಕಿಯಲ್ಲಿ ನಿರ್ಮಾಣಗೊಳ್ಳುವ ಅವರ ಸ್ಮಾರಕ ಭವನದ ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿಕೊಂಡಿದ್ದೇನೆ. ಈ ಕಾರ್ಯಕ್ಕೆ ಈಗಾಗಲೇ ಮುಂಬಯಿ ಹಾಗೂ ಪುಣೆಯ ಹೃದಯವಂತ ಸಮಾಜ ಬಾಂಧವರು ಸಹಕಾರ ನೀಡಿರುವುದಕ್ಕೆ ವಂದನೆಗಳು. ವಿಶೇಷ ಗುಣ ಪ್ರತಿಭೆಗಳನ್ನು ಹೊಂದಿದ, ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿದ ಸಂತೋಷ್ ಶೆಟ್ಟಿಯವರಂತಹ ವ್ಯಕ್ತಿಗಳು ಬಂಟ ಸಮಾಜದ ಆಸ್ತಿಯಾಗಿ¨ªಾರೆ. ಪುಣೆ ಬಂಟರ ಒಗ್ಗಟ್ಟು, ಶಿಸ್ತುಬದ್ಧವಾದ ಕಾರ್ಯಕ್ರಮದಿಂದ ಪ್ರಭಾವಿತಗೊಂಡಿದ್ದೇನೆ. ಈ ಭವ್ಯ ಭವನದ ಮೂಲಕ ಭವಿಷ್ಯದಲ್ಲಿ ಸಮಾಜದ ಜನರಿಗೆ ಸೇವೆ ಸಿಗುವಂತಾಗಲಿ ಎಂದು ನುಡಿದು, ಸಂಘದ ಮಹತ್ವಾಕಾಂಕ್ಷೆಯ ಶಕುಂತಳಾ ಜಗನ್ನಾಥ ಶೆಟ್ಟಿ ಕಲ್ಪವೃಕ್ಷ ಸಮಾಜಮುಖೀ ಯೋಜನೆಯ ಅಂಗವಾದ ವಿದ್ಯಾದಾತ ಯೋಜನೆಗೆ ದೊಡ್ಡ ಮೊತ್ತದ ದೇಣಿಗೆಯೊಂದಿಗೆ ಪ್ರಾಯೋಜಕತ್ವವನ್ನು ಆಶಾ ಪ್ರಕಾಶ್ ಶೆಟ್ಟಿ ವತಿಯಿಂದ ನೀಡಲಿದ್ದೇನೆ. ಮುಂದೆ ಈ ಯೋಜನೆ ಆಶಾ ಪ್ರಕಾಶ್ ಶೆಟ್ಟಿ ವಿದ್ಯಾದಾತ ಯೋಜನೆ ಎಂದು ಗುರುತಿಸಲ್ಪಡಲಿದೆ ಎಂದು ನುಡಿದು ಶುಭಹಾರೈಸಿದರು.
Related Articles
Advertisement
ದಿವ್ಯಾ ಎಸ್. ಶೆಟ್ಟಿ, ಪ್ರಮೀಳಾ ಎಸ್. ಶೆಟ್ಟಿ ಮತ್ತು ಅಂಬಿಕಾ ವಿ. ಶೆಟ್ಟಿ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಅಜಿತ್ ಹೆಗ್ಡೆ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು. ಮಹಿಳಾ ವಿಭಾಗದ ವರದಿಯನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ ವಾಚಿಸಿದರು.
ಕಾಂತಿ ಸೀತಾರಾಮ ಶೆಟ್ಟಿ ಹಾಗೂ ಪತ್ರಕರ್ತ ಕಿರಣ್ ಬಿ. ರೈ ಕರ್ನೂರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ವಂದಿಸಿದರು. ಅಕ್ಷತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ರೋಹನ್ ಆರ್. ಶೆಟ್ಟಿ ಸಮ್ಮಾನಪತ್ರ ವಾಚಿಸಿದರು. ಗೀತಾ ಆರ್. ಶೆಟ್ಟಿ ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರ ಹೆಸರುಗಳನ್ನು ವಾಚಿಸಿದರು. ಅತಿಥಿಗಣ್ಯರನ್ನು ಮಹಾರಾಷ್ಟ್ರದ ಪೇಟ ತೊಡಿಸಿ, ಶಾಲು, ಸ್ಮರಣಿಕೆ ಫಲಪುಷ್ಪವನ್ನಿತ್ತು ಸಮ್ಮಾನಿಸಲಾಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂತೋಷ್ ಶೆಟ್ಟಿಯವರ ಮಾತೃಶ್ರೀಯವರಾದ ವಿನೋದಾ ವಿ. ಶೆಟ್ಟಿಯವರನ್ನು ಸಮ್ಮಾನಿಸಲಾಯಿತು.ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಪದಾಧಿಕಾರಿಗಳಾದ ಮಾಧವ ಆರ್. ಶೆಟ್ಟಿ, ವಿವೇಕಾನಂದ ಶೆಟ್ಟಿ ಆವರ್ಸೆ, ಗಣೇಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಗಣೇಶ್ ಹೆಗ್ಡೆ, ವಿಶ್ವನಾಥ ಎಸ್. ಶೆಟ್ಟಿ, ಶಶೀಂದ್ರ ಶೆಟ್ಟಿ, ಪ್ರಶಾಂತ್ ಎ. ಶೆಟ್ಟಿ, ತಾರಾನಾಥ ರೈ ಮೇಗಿನಗುತ್ತು, ವಸಂತ್ ಶೆಟ್ಟಿ ಬೈಲೂರು, ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಕುಶಲ್ ಹೆಗ್ಡೆ, ಸದಾನಂದ ಕೆ. ಶೆಟ್ಟಿ, ಜಯಂತ್ ಶೆಟ್ಟಿ, ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪುಣೆ ಬಂಟರ ಸಂಘದ ಬಗ್ಗೆ ಹಿರಿಯರು ಕಂಡ ಭವನದ ಕನಸು ನನಸಾಗಿ ಪುಣೆಯ ಸಮಾಜ ಬಾಂಧವರೆಲ್ಲರೂ ನಮ್ಮ ಭವನದಲ್ಲಿ ಒಂದೇ ಚಾವಡಿಯಲ್ಲಿ ಸೇರಿ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸುವ ಸಂದರ್ಭ ಕೂಡಿ ಬಂದಿದ್ದು ಇದು ಜೀವನದ ಸಾರ್ಥಕ ಕ್ಷಣವಾಗಿದೆ. ಇಂದು ಪ್ರಕಾಶ್ ಶೆಟ್ಟಿಯವರಂತಹ ಮಹಾದಾನಿ ಹೃದಯವಂತ ಸಮಾಜ ಸೇವಕನನ್ನು ಸಮ್ಮಾನಿಸಲು ಅಭಿಮಾನವೆನಿಸುತ್ತಿದೆ. ಇಂದಿನ ಸುಂದರ ಕಾರ್ಯಕ್ರಮದ ಯಶಸ್ಸಿಗೆ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳ ಶ್ರಮ ಕಾರಣೀಭೂತವಾಗಿದ್ದು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಮುಂದೆ ನಮ್ಮ ಚಿಂತಕರ ಚಾವಡಿಯ ಮೂಲಕ ಚರ್ಚಿಸಿ ಭವನದ ಹಾಗೂ ಸಮಾಜದ ಪ್ರಗತಿಯಲ್ಲಿ ಸಂಘವನ್ನು ತೊಡಗಿಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು. ಅದೇ ರೀತಿ ಕಲ್ಪವೃಕ್ಷ ಯೋಜನೆಯ ಮೂಲಕ ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ಭವಿಷ್ಯದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ, ಆಸ್ಪತ್ರೆ, ಸಹಕಾರಿ ಆರ್ಥಿಕ ಸಂಸ್ಥೆಯ ಸ್ಥಾಪನೆ ಹಾಗೂ ಮುಂದೆ ತ್ತೈಮಾಸಿಕ ಪತ್ರಿಕೆಯನ್ನು ಹೊರತರುವುದು ಸಂಘದ ಉದ್ದೇಶಿತ ಕಾರ್ಯಗಳಾಗಿವೆ. ನಮ್ಮ ಸಂಘವನ್ನು ಸದೃಢಗೊಳಿಸುವಲ್ಲಿ ಸಮಾಜ ಬಾಂಧವರೆಲ್ಲರ ಪ್ರೋತ್ಸಾಹ, ಸಹಕಾರ ಅಗತ್ಯವಾಗಿದೆ
– ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಅಧ್ಯಕ್ಷರು, ಪುಣೆ ಬಂಟರ ಸಂಘ ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು