Advertisement

ಸಂಘದಿಂದ ಸಮಾಜ ಬಾಂಧವರಿಗೆ ನೆರವಾಗುವ ಯೋಜನೆ ಜಾರಿ: ಸಂತೋಷ್‌ ಶೆಟ್ಟಿ

11:37 AM Jun 18, 2022 | Team Udayavani |

ಪುಣೆ: ಪುಣೆ ಬಂಟರ ಸಂಘದ ವತಿಯಿಂದ ಸಂಘದ ಕಾರ್ಯಕಾರಿ ಸಮಿತಿಯ ಸಮಾಲೋಚನ ವಿಶೇಷ ಸಭೆ ಜೂ. 15ರಂದು ನಗರದ ಕೊರೊನೇಟ್‌ ಹೊಟೇಲ್‌ ಸಭಾಂಗಣದಲ್ಲಿ  ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು  ಅವರ ಅಧ್ಯಕ್ಷತೆಯಲ್ಲಿ  ನಡೆಯಿತು. ಸಭೆಯಲ್ಲಿ ಸಂಘದ ಮೂಲಕ ಭವಿಷ್ಯದಲ್ಲಿ ಸಮಾಜಬಾಂಧವರಿಗೆ ಉಪಯೋಗವಾಗುವಂತಹ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

Advertisement

ಸಂತೋಷ್‌ ಶೆಟ್ಟಿ  ಮಾತನಾಡಿ, ಸಂಘದ ಮೂಲಕ ಸಮಾಜಕ್ಕೆ ನೆರವಾಗುವಂತಹ ವಿವಿಧ ಕಾರ್ಯಯೋಜನೆಗಳನ್ನು ಭವಿಷ್ಯದಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳು ಸಂಘದ ಆದ್ಯತೆಯಾಗಿದ್ದು, ಸಂಘದಿಂದ ಹಮ್ಮಿಕೊಳ್ಳುವ ಯಾವುದೇ ಯೋಜ ನೆಗಳು ಸಮಾಜ ಬಾಂಧವರ ಹಿತದೃಷ್ಟಿಯಿಂದ ರೂಪಿ ಸಲು ನಾವು ಚಿಂತನೆ ನಡೆಸುತ್ತಿದ್ದೇವೆ. ಆಗಸ್ಟ್ ಮೊದಲ ವಾರದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭ ಸಾಂಸ್ಕೃತಿಕ ಸಮಿತಿಯ ಆಯೋಜನೆಯಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮ, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿ ಪ್ರದಾನ, ಸಂಘದ ಭವನಕ್ಕೆ ಹಾಗೂ ಸಂಘದ ಅಭ್ಯುದಯಕ್ಕೆ ವಿಶೇಷ ಕೊಡುಗೆ ನೀಡಿದ ದಿ| ಗುಂಡೂರಾಜ್‌ ಶೆಟ್ಟಿ ಹಾಗೂ ದಿ| ಜಗನ್ನಾಥ ಬಿ. ಶೆಟ್ಟಿಯವರ ಪ್ರತಿಮೆಯನ್ನು ಭವನದಲ್ಲಿ ಅನಾವರಣಗೊಳಿಸುವ ಕಾರ್ಯಕ್ರಮ ಹಾಗೂ ದಿ| ಜಗನ್ನಾಥ ಶೆಟ್ಟಿಯವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಸಮಾಜ ಬಾಂಧವರಿಗೆ ಅತೀ ಕಡಿಮೆ ವೆಚ್ಚದಲ್ಲಿ ಸಂಪೂರ್ಣ ಆರೋಗ್ಯ ತಪಾಸಣೆ  ಶಿಬಿರವನ್ನು ಆಯೋಜಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಉತ್ತರ ಪ್ರಾದೇಶಿಕ ಸಮಿತಿ, ದಕ್ಷಿಣ ಪ್ರಾದೇಶಿಕ ಸಮಿತಿ, ಯುವ ವಿಭಾಗ-ಮಹಿಳಾ ವಿಭಾಗದ ಎಲ್ಲ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು.

ಸಭೆಯಲ್ಲಿ ಸದಸ್ಯರೆಲ್ಲರ ಸಲಹೆ – ಸೂಚನೆಗಳನ್ನು ಪಡೆದುಕೊಳ್ಳಲಾಯಿತು. ಸಂಘದ ಉಪಾಧ್ಯಕ್ಷ ಪ್ರವೀಣ್‌ ಶೆಟ್ಟಿ  ಪುತ್ತೂರು, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಪದಾಧಿಕಾರಿಗಳಾದ ಸತೀಶ್‌ ಶೆಟ್ಟಿ, ದಿನೇಶ್‌ ಶೆಟ್ಟಿ ಕಳತ್ತೂರು, ಚಂದ್ರಶೇಖರ ಶೆಟ್ಟಿ ನಿಟ್ಟೆ, ತಾರಾನಾಥ ರೈ ಮೇಗಿನಗುತ್ತು, ವಸಂತ್‌ ಶೆಟ್ಟಿ ಬೈಲೂರು, ರವಿ ಕೆ. ಶೆಟ್ಟಿ, ನ್ಯಾಯವಾದಿ ಶಶಿ ಎಸ್‌. ಶೆಟ್ಟಿ, ಕಿಶೋರ್‌ ಹೆಗ್ಡೆ, ಸುಜಿತ್‌ ಶೆಟ್ಟಿ, ಕಲ್ಪವೃಕ್ಷ ತ್ತೈಮಾಸಿಕ ಪತ್ರಿಕೆಯ ಸಂಪಾದಕ ವಿಶ್ವನಾಥ ಶೆಟ್ಟಿ ಪಾಂಗಾಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ಸದಸ್ಯರಾದ ಶಮ್ಮಿ ಎ. ಹೆಗ್ಡೆ, ಸುಚಿತ್ರಾ ಎಸ್‌. ಶೆಟ್ಟಿ, ನಯನಾ ಜೆ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್‌ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶೇಖರ್‌ ಸಿ. ಶೆಟ್ಟಿ ,

ಪದಾಧಿಕಾರಿಗಳಾದ ದಾಮೋದರ್‌ ಶೆಟ್ಟಿ, ರತ್ನಾಕರ ಶೆಟ್ಟಿ, ವಸಂತ್‌ ಶೆಟ್ಟಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಶೆಟ್ಟಿ, ಸದಸ್ಯೆಯರಾದ ವಿನೋದಾ ಶೆಟ್ಟಿ, ರೋಹಿಣಿ ಶೆಟ್ಟಿ, ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್‌ ಶೆಟ್ಟಿ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next