Advertisement

ಥಾಯ್ಲೆಂಡ್‌ ಯೋಗಸ್ಪರ್ಧೆಗೆ ಪುಂಡಲೀಕ ಲಕಾಟಿ ಸಜ್ಜು

09:41 PM Feb 14, 2020 | Team Udayavani |

ಕನ್ನಡನಾಡಿನ ಬಡಕುಟುಂಬದಲ್ಲಿ ಅರಳುವ ಪ್ರತಿಭೆಗಳಿಗೇನು ಕಡಿಮೆ ಇಲ್ಲ ಅನ್ನುವುದಕ್ಕೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಾಷ್ಟ್ರೀಯ ಯೋಗಸ್ಪರ್ಧೆಯ ಸಾಧಕ ಯುವಪ್ರತಿಭೆ ಪುಂಡಲೀಕ ಮಹಾದೇವಪ್ಪ ಲಕಾಟಿ ಅವರೇ ಸಾಕ್ಷಿ! 2020ನೇ ವರ್ಷದ ಇದೇ ಜನವರಿ 19ರಂದು ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ 35-40 ವಯೋಮಿತಿ ಪುರುಷ ವಿಭಾಗದ ಯೋಗಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಅಂತಾರಾಷ್ಟ್ರೀಯ ಯೋಗಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Advertisement

ಮುಂಬರುವ ಮೇ 17ರಂದು ಥಾಯ್ಲೆಂಡ್‌ನ‌ಲ್ಲಿ ನಡೆಯಲಿರುವ ಯೋಗಸ್ಪರ್ಧೆಯಲ್ಲಿ, ಭಾರತದ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ. ಹಿನ್ನೆಲೆ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಡಕುಟುಂಬದ ಮಹಾದೇವಪ್ಪ-ಯಲ್ಲವ್ವ ದಂಪತಿಗಳ 2ನೇ ಪುತ್ರನಾಗಿ 1984 ಅಕ್ಟೋಬರ್‌ 28 ರಂದು ಪುಂಡಲೀಕ ಲಕಾಟಿ ಜನಿಸಿದರು. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲ­ಯದಲ್ಲಿ ಎಮ್‌ಎಸ್‌ಡಬ್ಲೂ ಸ್ನಾತಕೋತ್ತರ ಶಿಕ್ಷಣ ಪೂರೈಸಿದ್ದಾರೆ.

ಈಗ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಾಮಾಜಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡಕುಟುಂಬದಲ್ಲಿ ಜನಿಸಿದ ಲಕಾಟಿ, ಯೋಗದ ಆರಂಭಿಕ ಹೆಜ್ಜೆಗಳನ್ನಿಟ್ಟಿದ್ದು ಪುಸ್ತಕಗಳ ನೆರವಿನಿಂದ. ಆರಂಭದಲ್ಲಿ ಹೀಗೆ ಕಲಿತು, ಆಮೇಲೆ ತುಮಕೂರಿನ ರವೀಂದ್ರನಾಥ್‌ (ಠಾಕೂರ್‌) ಹಾಗೂ ಎಮ್‌.ಕೆ.ನಾಗರಾಜರಾವ್‌ ಅವರ ಯೋಗ ಮಾರ್ಗ­ದರ್ಶನ ದೊರೆಯಿತು. ಸದ್ಯ ಲಕಾಟಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರ್ಥಿಕ ತೊಂದರೆ ಎದುರಾಗಿದೆ. ಅವರಿಗೆ ನೆರವಾಗಲು ಬಯಸುವವರು ಮೊ. ಸಂಖ್ಯೆ 9008200145 ಅನ್ನು ಸಂಪರ್ಕಿಸಬಹುದು.

* ಅಡಿವೇಶ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next