Advertisement

ಪುಂಜಾಲಕಟ್ಟೆ-ಚಾರ್ಮಾಡಿ ರಾ. ಹೆದ್ದಾರಿ ಅಭಿವೃದ್ಧಿ: ಧರೆಗೆ ಉರುಳಲಿವೆ 5,494 ವೃಕ್ಷರಾಶಿ!

01:02 AM Feb 23, 2023 | Team Udayavani |

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಅಭಿ ವೃದ್ಧಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ 2ನೇ ಹಂತದ ಕಾಮಗಾರಿಯಡಿ 2 ಕಿ.ಮೀ ನೇರ ಗೊಳಿಸಲು ತೆರುತ್ತಿರುವ ದಂಡ ಬರೋಬ್ಬರಿ 3, 042 ಮರಗಳು.

Advertisement

ಅಂದರೆ ಮೊದಲನೇ ಸಮೀಕ್ಷೆಯಲ್ಲಿ ಗುರುತಿಸಲಾಗಿದ್ದ ತಾಲೂಕಿನ ಅರಣ್ಯ ಇಲಾಖೆಯ 5 ಉಪ ವಲಯಗಳ ಮರಗಳ ಸಂಖ್ಯೆ 2, 452. ಆ ಬಳಿಕ 35 ಕಿ.ಮೀ ರಸ್ತೆಯನ್ನು ನೇರಗೊಳಿಸಲು ಮರು ಸಮೀಕ್ಷೆ ನಡೆಸಿ 33.1 ಕಿ.ಮೀ ಗೆ ಇಳಿಸಲಾಯಿತು. ಸಾಗುವ ದೂರವೇನೋ ಸುಮಾರು 2 ಕಿ.ಮೀ ಇಳಿಯಿತು. ಆದರೆ ಇದಕ್ಕಾಗಿ 3,042 ಹೆಚ್ಚುವರಿ ಮರಗಳನ್ನು ಕಳೆದುಕೊಳ್ಳಬೇಕಾಗಿದೆ. ಹೆಚ್ಚುವರಿ ಮೂರು ಸಾವಿರ ಮರಗಳನ್ನು ಬಲಿ ಕೊಡಬೇಕಾಗಿದೆ. ಒಟ್ಟು 5, 494 ಮರಗಳು ಧರೆಗುರುಳಲಿವೆ. ಇದು ಮೊದಲನೇ ಸಮೀಕ್ಷೆಗಿಂತ ಹೆಚ್ಚು.

ಮೊದಲ ಸಮೀಕ್ಷೆಯಲ್ಲಿ ಗುರುತಿಸ ಲ್ಪಟ್ಟ ಕೆಲವು ಮರಗಳು ಹೊಸ ಸಮೀ ಕ್ಷೆಯಲ್ಲಿ ಹೊರಬಿದ್ದಿವೆ. ಮೊದಲ ಸಮೀಕ್ಷೆಯಲ್ಲಿ ಸಣ್ಣ ವಯಸ್ಸಿನ ಗಿಡಗಳನ್ನು ಪರಿಗಣಿಸಿರಲಿಲ್ಲ. ಈ ಬಾರಿ ಸೇರಿಸಿಕೊಂಡಿರುವುದೂ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ತೆರವುಗೊಳ್ಳುವ ಮರದ ಪ್ರಭೇದ, ಗಾತ್ರಕ್ಕನುಗುಣವಾಗಿ ದರ ನಿಗದಿ ಯಾಗಲಿದೆ. ತೆರವುಗೊಳ್ಳುವ ಮರ ವೊಂದರ ಹತ್ತು ಪಟ್ಟು ದರವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅರಣ್ಯ ಇಲಾಖೆಗೆ ಪಾವತಿಸಬೇಕು. ರಸ್ತೆ ಬದಿಯ ಹೆಚ್ಚಿನ ಮರಗಳನ್ನು ಫ್ಲೆಕ್ಸ್‌, ಬ್ಯಾನರ್‌, ಬೋರ್ಡ್‌ಗಳನ್ನು ಅಳವಡಿಸಲು ಮೊಳೆ ಇತ್ಯಾದಿ ಬಡಿದಿರುವ ಕಾರಣ ಅವು ಮೌಲ್ಯ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಹೆದ್ದಾರಿ ವಿಸ್ತರಣೆಗೆ ಪೂರಕವಾಗಿ ಮಡಂತ್ಯಾರು ಕಡೆಯಿಂದ ಗಿಡ ತೆರವು ಕಾಮಗಾರಿಯೂ ಚಾಲ್ತಿಯಲ್ಲಿದೆ.

ಸಂರಕ್ಷಣೆಗಿರಲಿ ಆದ್ಯತೆ
ಗುರುತಿಸಿರುವ ಮರಗಳಲ್ಲಿ ಅರ್ಧಂಶದಷ್ಟು ಬೆಳ್ತಂಗಡಿ ಉಪ ವಲಯ ವಿಭಾಗದಲ್ಲಿದೆ. ನಿರಂತರ ಅರಣ್ಯ ಹನನದಿಂದ ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ಅರಣ್ಯ ಇಲಾ ಖೆಯು ಪರಿಸರ ದಿನದಂದು ಬಹ ಳಷ್ಟು ಗಿಡಗಳನ್ನು ಹೆದ್ದಾರಿ ಬದಿ ನೆಡುತ್ತಿದೆ. ಆದರೆ ಆರೈಕೆಯಿಲ್ಲದೆ ಮುರುಟಿ ಹೋಗಿರುತ್ತವೆ. ಅಭಿವೃದ್ಧಿ ಜತೆಗೆ ಅರಣ್ಯ ಸಂರಕ್ಷಣೆಗೂ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಪರಿಸರ ಪ್ರೇಮಿಗಳ ನಿರಂತರ ಆಗ್ರಹ.

Advertisement

ಮರು ಸಮೀಕ್ಷೆ ಪೂರ್ಣಗೊಂಡಿದೆ. ಮರಗಳ ತೆರವಿಗೆ ಸಂಬಂಧಿಸಿ ಶೀಘ್ರವೇ ಸಾರ್ವಜ ನಿಕರಿಂದ ಅಹವಾಲು ಸ್ವೀಕರಿಸುವ ಸಭೆಯು ಡಿಎಫ್‌ಒ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿ ಗಳ ಉಪಸ್ಥಿತಿಯಲ್ಲಿ ನಡೆಯಲಿದೆ.
– ತ್ಯಾಗರಾಜ್‌, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next