Advertisement

ಠಾಣೆ ಪುನರಾರಂಭಕ್ಕೆ ಸಹಿ ಸಂಗ್ರಹ ಅಭಿಯಾನ

12:15 PM Apr 18, 2017 | |

ಬೆಂಗಳೂರು: ಮಾಗಡಿ ಕೆಂಪೇಗೌಡರ ಕಾಲದಿಂದಲೂ ತನ್ನದೇ ಇತಿಹಾಸ ಹೊಂದಿರುವ, ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಚಿಕ್ಕಪೇಟೆಯಲ್ಲಿ ಮುಚ್ಚಿರುವ ಪೊಲೀಸ್‌ ಠಾಣೆಯನ್ನು ಪುನರ್‌ ತೆರೆಯಲು ಆಗ್ರಹಿಸಿ ಅಖೀಲ ಭಾರತೀಯ ಏಕ್ತಾ ಮಂಚ್‌ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

Advertisement

ರಾಜ್ಯದ ತೆರಿಗೆ ಸಂಗ್ರಹದಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಬೆಂಗಳೂರಿನಿಂದಲೇ ಬರುತ್ತಿದ್ದು, ಬೆಂಗಳೂರಿನ ತೆರಿಗೆ  ಸಂಗ್ರಹದಲ್ಲಿ ಚಿಕ್ಕಪೇಟೆಯದ್ದೇ ಸಿಂಹಪಾಲಿದೆ. ಈ  ಭಾಗದಲ್ಲಿ 10 ಸಾವಿರಕ್ಕೂ ಅಧಿಕ ಸಗಟು ವ್ಯಾಪರ ಕೇಂದ್ರವಿದ್ದು, ನಿತ್ಯ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ಮಾಡುತ್ತಾರೆ. ನಿರ್ಭೀತವಾಗಿ ವ್ಯಾಪಾರ ಮಾಡುವುದೇ ವರ್ತಕರಿಗೆ ಸವಾಲಾಗಿದೆ.

ಇಲ್ಲಿ ನಿತ್ಯ ನಡೆಯುವ ಕಳ್ಳತನ ದರೋಡೆ, ವಂಚನೆ ಹಾಗೂ ಸೂಲಿಗೆ ತಡೆಯಲು ಪೊಲೀಸ್‌ ಠಾಣೆ ಅನಿವಾರ್ಯಧಿವಾಗಿರುವುದರಿಂದ ಈ ಅಭಿಯಾನ ಆರಂಭಿಸಲಾಗಿದೆ. ಚಿಕ್ಕಪೇಟೆ ಪೊಲೀಸ್‌ ಠಾಣೆ ಕಳೆದ ಒಂದುವರೆ ತಿಂಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಕಾಟನ್‌ ಪೇಟೆ ಮತ್ತು ಉಪ್ಪಾರ್‌ ಪೇಟೆಗೆ ಠಾಣೆಗೆ ಸ್ಥಳಾಂತರಿಸಿರುವ ಮಾಹಿತಿ ಬಂದಿದೆ.

ಚಿಕ್ಕಪೇಟೆಯ ವರ್ತಕರಿಗೆ ಭದ್ರತೆ ಒದಗಿಸುವ ದೃಷ್ಠಿಯಿಂದ ಪೊಲೀಸ್‌ ಠಾಣೆಯನ್ನು ಪುನರ್‌ ಆರಂಭಿಸಿ, ಎಲ್ಲ ರೀತಿಯ ಸೌಲಭ್ಯ ಪೂರೈಸುವಂತೆ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಸಹಿ ಸಂಗ್ರಹಿಸಿದ ನಂತರ, ಪ್ರತಿಯನ್ನು ಗೃಹ ಸಚಿವರಿಗೆ, ಪೊಲೀಸ್‌ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಸಿಟಿ ಕಮಿಷನರ್‌ಗೂ ಸಲ್ಲಿಸಲಾಗುತ್ತದೆ ಎಂದು ಮಂಚ್‌ನ ಸಂಸ್ಥಾಪಕ ಹಾಗೂ ನ್ಯಾಯವಾದಿ ಉದಯ ಕುಮಾರ್‌ ಸಿಂಗ್‌  ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next