Advertisement

ಜಮ್ಮು-ಕಾಶ್ಮೀರ; ಯೋಧರ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ISI

09:10 AM Feb 15, 2019 | Sharanya Alva |

ವಾಷಿಂಗ್ಟನ್: ಜಮ್ಮು-ಕಾಶ್ಮೀರದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ದಾಳಿ ನಡೆಸಿದ್ದರ ಹಿಂದೆ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್ ಐ ಶಾಮೀಲಾಗಿರುವ ಗಂಭೀರ ಶಂಕೆಯನ್ನು ಅಮೆರಿಕದ ತಜ್ಞರು ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

42 ಯೋಧರು ಹುತಾತ್ಮರಾದ ಘಟನೆಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್(ಜೆಇಎಂ) ಹೊಣೆ ಹೊತ್ತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜೈಶ್ ಸೇರಿದಂತೆ ಇನ್ನುಳಿದ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಾಕಿಸ್ತಾನ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಮೆರಿಕ ಹೇಳಿದೆ.

ದಾಳಿಯನ್ನು ತಾನೇ ನಡೆಸಿರುವುದಾಗಿ ಜೈಶ್ ಸ್ವಯಂ ಆಗಿ ಘೋಷಿಸಿಕೊಂಡಿದ್ದರ ನೆಲೆಯಲ್ಲಿ ಈ ಆಪರೇಷನ್ ನ ಮಾಸ್ಟರ್ ಮೈಂಡ್ ಐಎಸ್ ಐ ಇದೆ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ಸಿಐಎ ಮಾಜಿ ವಿಶ್ಲೇಷಕ ಬ್ರೂಸೆ ರೀಡೆಲ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಪಿಟಿಐ ವರದಿ ವಿವರಿಸಿದೆ.

ದಾಳಿಯ ಹಿಂದೆ ನೇರ ಪಾಕಿಸ್ತಾನದೊಳಗಿನ ಕುಮ್ಮಕ್ಕು ಇದ್ದಿರುವುದು ಸ್ಪಷ್ಟವಾಗುತ್ತಿದೆ. ಇದರಿಂದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಮೊದಲ ಸವಾಲು ಎದುರಾಗಿದೆ ಎಂದು ಹೇಳಿದೆ. ಈ ನಿಟ್ಟಿನಲ್ಲಿ ಇಮ್ರಾನ್ ಖಾನ್ ಈಗ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next