ಹೌದು, ಅದು ರಣಭೀಕರ ದೃಶ್ಯ. ಇಡೀ ಭಾರತ ವಿಷಾದಗೀತೆ ಹಾಡುವಂತೆ ಮಾಡಿದ ವಿಧಿ ಬರೆದ ಕರಾಳ ದಿನ. ರಕ್ತವೆಂಬುವುದು ಹೊಳೆಯಾಗಿ ಹರಿಯುತ್ತಿತ್ತು. ಸೈನಿಕರ ಶವ ಛೀಧ್ರ ಛಿಧ್ರವಾಗಿ ರಸ್ತೆಗಳಲ್ಲಿ ಬಿದ್ದಿದ್ದವು. ಆವಂತಿ ಪುರದ ಬಳಿಯ ಲೇತ್ ಪೊರಾದ ಹತ್ತಿರದಲ್ಲಿ ಎದೆ ತೆರೆದುಕೊಳ್ಳುತ್ತದೆ ಹಿಂದೆಂದೂ ಕಾಣದ ಹೃದಯ ವಿದ್ರಾವಕ ದೃಶ್ಯ.
ಅದು 1989ರಿಂದೀಚೆಗೆ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿ.
ಓದಿ :ಅಸಿಟೈಲಿನ್‌ನಿಂದ ಬೈಕ್ ಚಾಲನೆ : ಸಾಗರದ ಗ್ರಾಮೀಣ ಯುವಕನ ಸಾಧನೆ
ಸರಿಯಾಗಿ ಎರಡು ವರ್ಷದ ಹಿಂದೆ ಅಂದರೇ, 2019 ರ ಫೆಬ್ರವರಿ 14 ರಂದು, ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿ ಆರ್ ಪಿ ಎಫ್) ಸಿಬ್ಬಂದಿಗಳು ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಮಧ್ಯಾಹ್ನ 3:15 ಸುಮಾರಿಗೆ ಅವಾಂತಿಪುರ ಬಳಿಯ ಲೆತ್ ಪೊರಾದಲ್ಲಿ , ಭದ್ರತಾ ಸಿಬ್ಬಂದಿಯನ್ನು ಹೊತ್ತು ಸಾಗಿಸುತಿದ್ದ ಬಸ್ ಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿದ ಪರಿಣಾಮವಾಗಿ ಅಲ್ಲಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿ ಹೋಯಿತು. ರಕ್ತ ಸಿಕ್ತವಾಗಿ ಬದಲಾಯಿತು ಪುಲ್ವಾಮ. ಭೀಕರ ದೃಶ್ಯ. ಎಲ್ಲವೂ ಛಿಧ್ರ ಛಿಧ್ರ. ಅದು ಅಸಾಧ್ಯ ನೋಟ.
ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕ, ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಪಡೆ ಜೈಷ್–ಎ–ಮೊಹಮದ್ ನ ನಿರ್ದೇಶನದಂತೆ ಬಾಂಬ್ ಸ್ಪೋಟಗೊಳಿಸಿದ. ಇದರಿಂದಾಗಿ 40 ಮೀಸಲು ಪಡೆಯ ಯೋಧರು ಹುತಾತ್ಮರಾದರು.
ಓದಿ : ಇಂದು ಕೃಷ್ಣ-ಮಿಲನಾ ಮದುವೆ: ಪ್ರೇಮಿಗಳ ದಿನದಂದು ಹಸೆಮಣೆಗೆ
ಇದು ಜಮ್ಮುವಿನ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ನಡೆದ ಮೊದಲ ಉಗ್ರರ ದಾಳಿಯಲ್ಲ..!
2015 ರ ಆರಂಭದಲ್ಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೆಚ್ಚು ಆತ್ಮಹತ್ಯೆ ದಾಳಿ ನಡೆಸಿದ್ದರು. ಜುಲೈ 2015 ರಲ್ಲಿ, ಗುರದಾಸ್ ಪುರದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಗೆ ಮೂರು ಬಂದೂಕು ದಾರಿಗಳು ದಾಳಿ ಮಾಡಿ ಧ್ವಂಸಗೊಳಿಸಿದ್ದರು. 2016 ರ ಆರಂಭದಲ್ಲಿ ನಾಲ್ಕರಿಂದ ಆರು ಬಂದೂಕುದಾರಿಗಳು ಪಠಾನ್ಕೋಟ್ ಏರ್ ಫೋರ್ಸ್ ಸ್ಟೇಷನ್ ಗೆ ದಾಳಿ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಉಗ್ರ ದಾಳಿಕೋರರು ಯುರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದರು. 31 ಡಿಸೆಂಬರ್ 2017 ರಂದು, ಲೆತ್ ಪೊರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು ಐದು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದರು. ಈ ಎಲ್ಲಾ ದಾಳಿಯು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೆ ಘಟಿಸಿದ್ದು ಎನ್ನುವುದು ಆಶ್ಚರ್ಯಕರ ಸಂಗತಿ. ಎನ್ನುವಲ್ಲಿಗೆ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಿ ಉಗ್ರ ಕ್ರಿಮಿಗಳ ಟಾರ್ಗೆಟ್ ಪ್ಲೇಸ್ ಎನ್ನುವುದನ್ನು ವಿವರಿಸಿ ಹೇಳಬೇಕೆಂದಿಲ್ಲ.
ಓದಿ : PHOTOS :ಐಶ್ವರ್ಯಾ- ಅಮರ್ಥ್ಯ ವಿವಾಹ ಸಂಭ್ರಮ: ಗಣ್ಯರು, ಧಾರ್ಮಿಕ ಮುಖಂಡರ ಉಪಸ್ಥಿತಿ
ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಈ ದಾಳಿ ನಂತರ ನನ್ನ ಹೃದಯದೊಳಗೆ ಸಹ ಅದೇ ರೀತಿ ದಾಳಿ ಮಾಡಬೇಕೆಂಬ ಆಕ್ರೋಶ ಕುದಿಯುತ್ತಿದೆ ಎಂದು ಹೇಳಿದ್ದರು.ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರ ಖಂಡಿತಾ ತೀರಿಸುತ್ತೇವೆ. ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದ್ದರು.
ಪುಲ್ವಾಮಾ ದಾಳಿಯನ್ನು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನಾದ್ಯಂತ ದೇಶಗಳು ಖಂಡಿಸಿ ಭಾರತಕ್ಕೆ ಉಗ್ರರ ವಿರುದ್ಧ ದಾಳಿಯಲ್ಲಿ ಬೆಂಬಲ ಸೂಚಿಸಿದ್ದವು. ಪಾಕಿಸ್ತಾನದ ಮಿತ್ರರಾಷ್ಟ್ರ ಕಮ್ಯುನಿಷ್ಟ್ ಚೀನಾ ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಬೆಂಬಲ ಸೂಚಿಸಿ ಇದೊಂದು ಹೇಡಿ ಕೃತ್ಯ ಎಂದು ಟೀಕಿಸಿತ್ತು.
ಮತ್ತು ಭಾರತ ಹೇಳಿದಂತೆಯೇ ನಡೆದುಕೊಂಡಿತು. ಪುಲ್ವಾಮ ದಾಳಿಗೆ ಪ್ರತಿಕ್ರಿಯೆಯಾಗಿ, 26/02/2019ರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿ ಅಡಗಿದ್ದ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ಭಾರತದ ವಾಯುಪಡೆಯ ಜೆಟ್ ಗಳು ದಾಳಿನೆಡಸಿದವು. ಬಾಲ್ ಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್ ನ ಬುಡ ಅಲ್ಲಾಡಿಸಿತು ಭಾರತ. ಕುತಂತ್ರಿ ಬುದ್ಧಿಯನ್ನು ಬಿಡದ ಪಾಕಿಸ್ತಾನ 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್ ಗಳನ್ನು ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಹೇಳಿಕೊಂಡಿತು.
ಬಾಲಕೋಟ್ ದಾಳಿ
ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ ಹನ್ನೆರಡು ಮಿರಾಜ್ 2000 ಜೆಟ್ಗಳು,ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್ ನಲ್ಲಿ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು ೨೫೦ ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಬಂದಿದೆ ಎಂದು ಉಪ ಸಚಿವ ವಿ.ಕೆ ಸಿಂಗ್ ಹೇಳುತ್ತಿದ್ದಂತೆ ಇಡೀ ಭಾರತಕ್ಕೆ ಭಾರತ ಆ ಸುದ್ಧಿಯನ್ನು ಸಂಭ್ರಮಿಸಿತು. ಹೌದು, ಅದು ಸಹಸ್ರ ಸಹಸ್ರ ಭಾರತೀಯರಿಗೆ ರೋಮಾಂಚಕ ಕ್ಷಣವಾಗಿದ್ದಿದ್ದಂತೂ ಅಪ್ಪಟ ಸತ್ಯ.
ಈ ಭೀಕರ ದಾಳಿಯ ನಂತರ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಬೇಕೆಂಬ ಭಾರತದ ರಾಜತಾಂತ್ರಿಕ ಪ್ರಯತ್ನ ಕೊನೆಗೂ ಕಳೆದ ವರ್ಷ ಮೇ 1ರಂದು ಫಲಿಸಿತು.
ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ
ಓದಿ : ಶೋಷಿತ ಎಲ್ಲ ಸಮುದಾಯಕ್ಕೂ ಸಂವಿಧಾನ ಬದ್ಧ ಮೀಸಲಾತಿ ಸಿಗಲಿ: ಕಾರಜೋಳ